ವಿಶಿಷ್ಟ ಅರ್ಥಪೂರ್ಣ ಆಚರಣೆಗೆ ಸಂಕಲ್ಪ: ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್

ಗದಗ 01:   ಗದಗ ಜಿಲ್ಲೆಯ  ಎಲ್ಲ ಚುನಾಯಿತ ಪ್ರತಿನಿಧಿಗಳು,  ಹಿರಿಯರು ಹಾಗೂ ಯುವಜನರು,  ಎಲ್ಲ ಇಲಾಖೆಯ  ಹಿರಿಯ ಕಿರಿಯ ಅಧಿಕಾರಿಗಳ ಹಾಗೂ  ವಿಶೇಷವಾಗಿ ಲಕ್ಕುಂಡಿ ಗ್ರಾಮದ   ಗುರುಹಿರಿಯರ  ಹಾಗೂ ಗ್ರಾಮಸ್ಥರ  ಸಹಕಾರದೊಂದಿಗೆ ಲಕ್ಕುಂಡಿ ಉತ್ಸವವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸುವ ಸಂಕಲ್ಪ  ಹೊಂದಲಾಗಿದೆ ಎಂದು ರಾಜ್ಯದ ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ನುಡಿದರು. 

ಗದಗ ಜಲ್ಲಾಧಿಕಾರಿಗಳ ಸಭಾಂಗಣದಲ್ಲಿ  ಜರುಗಿದ ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ, ಲಕ್ಕುಂಡಿ  ಉತ್ಸವದ ಲೋಗೋ ಬಿಡುಗಡೆ ಮಾಡಿ   ಅವರು ಮಾತನಾಡಿದರು.  ಲಕ್ಕುಂಡಿ ಉತ್ಸವವು  ಮಾರ್ಚ 21 ಹಾಗೂ 22 ರಂದು    ನಡೆಯಲಿದ್ದು  ರಾಜ್ಯದ ಪ್ರವಾಸೋದ್ಯಮ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು , ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವರು ಭಾಗವಹಿಸುವದಾಗಿ ತಿಳಿಸಿದ್ದು ಮುಖ್ಯಮಂತ್ರಿಗಳು ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದೆ.   ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹಾಗೂ ಖ್ಯಾತ ಕಲಾವಿದರಿಗೆ   ಸೂಕ್ತ ಅವಕಾಶ ನೀಡಲಾಗುವುದು.  ಸ್ಥಳೀಯ ಕಲಾವಿದರಲ್ಲಿ  ಜಿಲ್ಲೆಯ ಹಾಗೂ ಲಕ್ಕುಂಡಿ ಗ್ರಾಮದ ಕಲಾವಿದರಿಗೆ  ಸೂಕ್ತ ಅವಕಾಶ ಕಲ್ಪಿಸಲು  ಜಿಲ್ಲಾ  ಉಸ್ತುವಾರಿ  ಸಚಿವರು ನಿದರ್ೇಶನ ನೀಡಿದರು.

 ಲಕ್ಕುಂಡಿ ಉತ್ಸವಕ್ಕೆ ಆಗಮಿಸುವ ಖ್ಯಾತ ಕಲಾವಿದರಿಗೆ ವಿಶೇಷ ಆಸಕ್ತಿ ವಹಿಸಿ  ಸರಿಯಾದ ವಸತಿ ಹಾಗೂ ಊಟೋಪಹಾರ ವ್ಯವಸ್ಥೆಯಾಗಬೇಕು.    ಉತ್ಸವದ ಅಂಗವಾಗಿ  ಮಾರ್ಚ  20 ರಂದು  ಗಾಳಿ ಪಟದ ಸ್ಪಧರ್ೆ ಹಾಗೂ ದಿ. 21ರಂದು  ಮಧ್ಯಾಹ್ನ   ಜಾನಪದ ಕಲಾ ಮೆರವಣಿಗೆ, ದಿ. 22ರಂದು ಮುಂಜಾನೆ ಗ್ರಾಮೀಣ ಕ್ರೀಡೆಗಳನ್ನು  ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ಉತ್ಸವದ ಸಂದರ್ಭದಲ್ಲಿ   ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಬ್ಯಾನರ್ ಹಾಗೂ ಪ್ಲಾಸ್ಟಿಕ್ ಮುಕ್ತ ಉತ್ಸವವನ್ನಾಗಿಸಲು  ಹಾಗೂ     ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ಪತ್ರವನ್ನು  ಕಳುಹಿಸಲು  ಸಚಿವರು ಸೂಚನೆ ನೀಡಿದರು.   ಗ್ರಾಮೀಣ ಕ್ರೀಡೆಯಲ್ಲಿ   ಜಿಲ್ಲೆಯ  ಎಲ್ಲ ಕ್ರೀಡಾಪಟುಗಳಿಗೆ  ಸಮಾನ ಅವಕಾಶ ನೀಡಬೇಕು.  ಒಟ್ಟಾರೆಯಾಗಿ  ಲಕ್ಕುಂಡಿಯ ಹಿಂದಿನ  ಉತ್ಸವಗಳ ಅನುಭವದ ಆಧಾರದ ಮೇಲೆ ಈ ಬಾರಿಯ ಉತ್ಸವ ಸಮಾಜಮುಖಿಯಾಗಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂಬುದು ತಮ್ಮ ಆಶಯ ಎಂದು  ಸಚಿವ ಸಿ.ಸಿ.ಪಾಟೀಲ್ ನುಡಿದರು.   

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಈಗಾಗಲೇ ಜಿಲ್ಲಾಉಸ್ತುವಾರಿ ಸಚಿವರು ಲಕ್ಕುಂಡಿ ಗ್ರಾಮದಲ್ಲಿ ಉತ್ಸವದ ಪೂರ್ವಭಾವಿ ಸಭೆ ಜರುಗಿಸಿದ್ದು   ತಮ್ಮ ಅಧ್ಯಕ್ಷತೆಯಲ್ಲಿ ಕೂಡ  ಸಭೆ ಜರುಗಿದ್ದು  ಉತ್ಸವದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ  ಗ್ರಾಮೀಣ ಕ್ರೀಡೆಗಳು , ವಿಚಾರಗೋಷ್ಟಿ, ಕವಿಗೋಷ್ಟಿ , ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯದ ಸಮಿತಿಗಳನ್ನು ರಚಿಸಲಾಗಿದೆ ಎಂದು  ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ  ರುದ್ರೇಶ ಅವರು ಮಾತನಾಡಿ  ಲಕ್ಕುಂಡಿ ಉತ್ಸವದ ವ್ಯವಸ್ಥಿತ ಹಾಗೂ  ಯಶಸ್ವಿ ಏಪರ್ಾಡಿಗಾಗಿ  ಸ್ವಾಗತ, ಹಣಕಾಸು, ಪ್ರಚಾರ,  ಪ್ರದರ್ಶನ,  ಮೆರವಣಿಗೆ,ವಸತಿ, ಸಾರಿಗೆ ಇತ್ಯಾದಿಯಾಗಿ  ಒಟ್ಟು 15 ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.  ಉತ್ಸವದ ಸಂದರ್ಭದಲ್ಲಿ ತುತರ್ು ವೈದ್ಯಕೀಯ ಚಿಕಿತ್ಸೆಗಾಗಿ  ಆರೋಗ್ಯ ಇಲಾಖೆ ಸಂಚಾರಿ ಆರೋಗ್ಯ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು  ಹಾಗೂ  ಲಕ್ಕುಂಡಿ  ಗ್ರಾಮ ಪಂಚಾಯತಿಯವರು   ಇಡೀ ಊರಿನ ಸ್ವಚ್ಛತಾ ಕಾರ್ಯಕ್ರಮವನ್ನು ಕೈಕೊಳ್ಳಲು  ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು  ಒಟ್ಟಾರೆಯಾಗಿ ಲಕ್ಕುಂಡಿ ಉತ್ಸವ ಕಾರ್ಯಕ್ರಮವನ್ನು ನೋಡಿ ಜನರು ಮೆಚ್ಚಬೇಕು.   ಉತ್ಸವಕ್ಕೆ ಮೆರುಗು ಬರಬೇಕು.   ಅಂತಹ ಕಲಾವಿದರಿಗೆ  ಅವಕಾಶನೀಡಬೇಕು ಎಂದರು.   ಸಭೆಯಲ್ಲಿ ವಿವಿಧ ಸಮಿತಿಗಳು ನಿರ್ವಹಿಸಬೇಕಾದ  ಕಾರ್ಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. 

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎನ್. ಯತೀಶ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ,  ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.