ಲೋಕದರ್ಶನವರದಿ
ಬ್ಯಾಡಗಿ21: ದೇಶದ ಪ್ರಧಾನಿ ಪಟ್ಟ ಅನುಕಂಪದ ಅಧಾರದ ನೌಕರಿಯಲ್ಲ ದೇಶವನ್ನು ಕೊಳ್ಳೆ ಹೊಡೆಯಲು ಮಹಾಘಟಬಂಧನ್ ರಚಿಸಿಕೊಳ್ಳಲಾಗಿದೆ ಭಾರತೀಯ ಸೈನ್ಯದಲ್ಲಿರುವ ನಮ್ಮ ಯುವಕರ ನರಮೇಧ ನಡೆಯುತ್ತಿದ್ದರೂ ಬಾಯಿ ಮುಚ್ಚಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳಿಂದ ದೇಶಕ್ಕೆ ರಕ್ಷಣೆ ಇಲ್ಲ, ನೋಟು ಅಮಾನ್ಯೀಕರಣ ಮಾಡುವ ಮೂಲಕ ಪಾಕ್ತಿಸ್ಥಾನವನ್ನು ಭಿಕ್ಷೆ ಎತ್ತುವಂತೆ ಮಾಡಿದ ಕೀತರ್ಿ ನರೇಂದ್ರ ಮೋದಿ ಸಲ್ಲುತ್ತದೆ, ವಿಶ್ವಮಟ್ಟದಲ್ಲಿ ಭಾರತ ಗೌರವವನ್ನು ಹೆಚ್ಚಿಸುವ ಮೂಲಕ ಸ್ವಚ್ಚ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ನರೇಂದ್ರ ಮೋದಿಯವರ ಕೈಗೆ ಮತ್ತೊಮ್ಮೆ ದೇಶವನ್ನು ಕೊಡುವ ಸಂಕಲ್ಪವನ್ನು ಮಾಡಿಕೊಳ್ಳುವಂತೆ ಟೀಮ್ ಮೋದಿ ಅಧ್ಯಕ್ಷ ಚಕ್ರವತರ್ಿ ಸೂಲಿಬೆಲೆ ಕರೆ ನೀಡಿದರು.
ಪಟ್ಟಣದ ಎಸ್ಜೆಜೆಎಂ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೋದಿಗಾಗಿ ನಾವು-ದೇಶಕ್ಕಾಗಿ ಮೋದಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜವಾಹರಲಾಲ್ ಬಳಿಕ ಇಂದಿರಾಗಾಂಧಿ, ಅವರ ಬಳಿಕ ರಾಜೀವ ಗಾಂಧೀ ಇದೀಗ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೆ ಅಜರ್ಿ ಹಾಕಿದ್ದಾರೆ, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದೀಗ ಎಚ್ಚೆತ್ತಿಕೊಂಡಿರುವ ದೇಶದ ಭ್ರಷ್ಟರು ಮಹಾಘಟಬಂಧನ್ ಎಂಬ ನವಜಾತ ಶಿಶುವೊಂದನ್ನು ಹುಟ್ಟಿಸಿದ್ದು, ಅದಕ್ಕೆ ತಂದೆ ಯಾರು ಎಂಬುದನ್ನು ಹುಡುಕಲು ಹೊರಟಿದ್ದಾರೆ, ಮಗು ಬೆಳೆಯಲು ಬಿಡಬಾರದು ಅದು ದೊಡ್ಡದಾದಷ್ಟು, ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಇದರ ಹಿಂದಿರುವ ಪ್ರಮುಖ ರೂವಾರಿ ಮಮತಾ ಬ್ಯಾನಜರ್ಿ ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾ ಎಂದು ಹೆಸರಿಡಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ದೇಶದಲ್ಲಿರುವ ಎಲ್ಲ ಮಾಫಿಯಾಗಳು ಮಾಯ:ಕಳೆದ ಆರೇಳು ದಶಕಗಳಿಂದ ದೇಶದಲ್ಲಿ ಜೀವಂತವಾಗಿದ್ದ ಖೋಟಾನೋಟು, ಹವಾಲಾ, ಮರಳು, ಮೆಡಿಶನ್, ಲ್ಯಾಂಡ್, ಪೆಟ್ರೋಲ್ ಮಾಫಿಯಾಗಳನ್ನು ಹತ್ತಿಕ್ಕುವ ಮೂಲಕ ಭ್ರಷ್ಟರನ್ನು ಸದೆ ಬಡಿಯುವ ಕೆಲಸದಲ್ಲಿ ಯಶಸ್ವಿಯಾಗಿದ್ದಲ್ಲದೇ ಇಂತಹ ಎಲ್ಲ ಭ್ರಷ್ಟಾಚಾರಗಳನ್ನು ನಿಗ್ರಹಿಸಿದ ಮೋದಿ ವಂಚಕರಿಂದ ತೆರಿಗೆ ಸಂಗ್ರಹಿಸುವ ಮೂಲಕ ದೇಶವನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮಾಡಿದ್ದ ಸಾಲ ತೀರಿಸಿದ ಮೋದಿ:ಕಳೆದ ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಬೇಕು ಅಷ್ಟು ಸಾಲವನ್ನು ದೇಶಕ್ಕೆ ಹೊರಿಸಿದ್ದಲ್ಲದೇ 'ಗರೀಬಿ ಹಠಾವೋ' ಎಂಬ ತುಕ್ಕು ಹಿಡಿದ ಘೋಷಣೆಗಳೊಂದಿಗೆ ದೇಶದ ಸ್ಥಿತಿಯನ್ನು ತಮ್ಮ ಬಾಯಲ್ಲಿ ನುಡಿಯುತ್ತಿದ್ದಾರೆ ಹಣದಿಂದ ಶ್ರೀಮಂತನಾಗುವ ದೇಶದ್ರೋಹಿ ನಮಗೆ ಬೇಕಿಲ್ಲ ಇನ್ನೊಬ್ಬರಿಗೆ ಕೈಚಾಚದೇ ಸ್ವಾಭಿಮಾನದಿಂದ ಬದುಕುವ ಒಬ್ಬ ಶ್ರೀಮಂತ ಬಡವ ನಮಗೆ ಬೇಕಾಗಿದ್ದಾನೆ ಎಂದರು.
ಅತೀ ಹೆಚ್ಚು ತೆರಿಗೆ ಕಟ್ಟುತ್ತಿರುವ ಭಾರತೀಯರು: ತಮ್ಮ ದುಡಿಮೆಯ ಹಣದಿಂದ ದೇಶಕ್ಕೆ ತೆರಿಗೆ ನೀಡುತ್ತಿರುವ ಭಾರತೀಯರು ವಿಶ್ವದಲ್ಲೇ ಇದೀಗ ನಂ.1 ಇಷ್ಟೊಂದು ದೊಡ್ಡಮಟ್ಟದ ತೆರಿಗೆಯೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಿರುವ ಭಾರತೀಯರು, ನಮ್ಮ ಸೈನ್ಯ ದಳವನ್ನು ಬಲಿಷ್ಟಗೊಳಿಸಿವ ನಿಟ್ಟಿನಲ್ಲಿ ಮುಂದಾಗಬೇಕು ನಮ್ಮ ಯುವಕರು ಸದೃಡ ಭಾರತ ನಿಮರ್ಾಣ ಸಂಕಲ್ಪ ಮಾಡಬೇಕು ಜೀವ ಕೊಟ್ಟಾದರೂ ಭಾರತವನ್ನು ಉಳಿಸುತ್ತೇನೆ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇನೆ ಎಂಬ ಸಂಕಲ್ಪ ಎಲ್ಲರಲ್ಲಿಯೂ ಬರಬೇಕು ಎಂದರು.ರಿ
ದೇಶದ ಮುಸ್ಲಿಮರು ಸೇಫ್: ಡೋಂಘೀ ಜಿಹಾದಿಗಳಿಂದ ಇಂದು ಭಯೋತ್ಪಾದನೆ ಆರಂಭವಾಗಿದೆ, ಬಡ ಮುಸ್ಲಿಂ ಯುವಕರಿಗೆ ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡುವ ಮೂಲಕ ತಪ್ಪು ಹಾದಿ ಹಿಡಿಯುವಂತೆ ಮಾಡಲಾಗುತ್ತಿದೆ, ಮೊನ್ನೆ ನಡೆದ ಪುಲ್ವಾಮದ ಘಟನೆ ಇದಕ್ಕೆ ತಾಜಾ ಉದಾಹರಣೆ, ಘಟನೆಯ ಬಳಿಕವೂ ದೇಶದ ಯಾವುದೇ ಮುಸ್ಲಿಮರ ಮನೆಗೆ ಹಿಂದೂಗಳು ಕಲ್ಲು ಹೊಡೆಯಲಿಲ್ಲ, ಭಾರತದಲ್ಲಿರುವ ಮುಸ್ಲಿಮರು ವಿಶ್ವದಲ್ಲಿಯೇ ಸೇಫ್ ಜೋನ್ನಲ್ಲಿದ್ದಾರೆ, ಆದರೆ ಪಾಪಿ ಜಿಹಾದಿಗಳು ಪಾಕಿಸ್ತಾನದಲ್ಲೇ 120 ಅಮಾಯಕ ಮಕ್ಕಳನ್ನು ನರಮೇಧ ಮಾಡಿದ್ದಾರೆ, ಇದಕ್ಕೆ ಪಾಕಿಸ್ತಾನದ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು..