ನಿರಹಂಕಾರಗೊಳಿಸುವದೇ ನಿಜವಾದಜ್ಞಾನ: ದೇವನೂರು ಶಂಕರ

ಲೋಕದರ್ಶನ ವರದಿ

ಬೆಳಗಾವಿ 13:  ಜನರ ಬದುಕು ಪ್ರದರ್ಶನವಾಗಬಾರದು ಅದು ನಿದರ್ಶನವಾಗಬೇಕು. ಬಸವಣ್ಣನವರ ಕ್ರಾಂತಿಯನ್ನು ಅರ್ಥಮಾಡಿಕೊಂಡರೆ ಪ್ರದರ್ಶನ ಹೊರಟು ಹೋಗುತ್ತದೆ. ಪ್ರಸ್ತುತದಲ್ಲಿ ಹೆಚ್ಚಿನ ಜನ ಪ್ರಚಾರ ಹಾಗೂ ಪ್ರತಿಷ್ಠೆಗೆ ಬೆನ್ನು ಹತ್ತಿ ತಮ್ಮ ಮತ್ತು ಸಮಾಜದ ನೆಮ್ಮದಿಯ ಅವನತಿಗೆ ಕಾರಣರಾಗುತ್ತಿದ್ದಾರೆ. ದುರಭಿಮಾನ, ಅಹಂಕಾರ ಮಾನವೀಯತೆಯನ್ನು ಅಳಿಸಿಹಾಕುತ್ತಿದೆ ಎಂದು ರಾಜ್ಯದ ಹಿರಿಯ ಅಧಿಕಾರಿ, ಚಿಂತಕ ದೇವನೂರು ಶಂಕರ ಇವರು ತಮ್ಮ ಕಳವಳ ವ್ಯಕ್ತಪಡಿಸಿದರು. ಇತ್ತೀಚಿಗೆ ಶಿ.ಗು.ಕುಸುಗಲ್ಲ ಇವರ'ಸಾಹಿತ್ಯ ನಿವಾಸದಲ್ಲಿ ದೇವನೂರು ದಂಪತಿಯನ್ನು ಸನ್ಮಾನಿಸಲಾಯಿತು.

ನಿರಹಂಕಾರಗೊಳಿಸುವದೇ ನಿಜವಾದ ಜ್ಞಾನವೆನಿಸುತ್ತದೆ. ಸಮಾಜದಲ್ಲಿ 

ಗುರುತಿಸಲಾಗದವರನ್ನು ಗುರುತಿಸುವದೇ ಗುರುವಿನ ನಿಜವಾದ ಕೆಲಸವಾಗುತ್ತದೆ ಎಂದು ಇವರು ತಮ್ಮ ಭಾಷಣದಲ್ಲಿ ಮುಂದುವರೆದು ಹೇಳಿದರು.

ಬಸವಣ್ಣನವರ ಆದರ್ಶಗಳ ಪ್ರತಿಪಾದಕ, ಚಿಂತಕ, ವಾಗ್ಮಿಗಳಾದ ಸರಳ ಸಜ್ಜನಿಕೆಯ ದೇವನೂರು ಶಂಕರ ಇವರು ತಮ್ಮ ಮತ್ತು ನಡೆ ನುಡಿಯನ್ನು ಸಮನ್ವಗೊಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಸರಳ ಸುಂದರ, ಅರ್ಥವಾತ್ತಾದ  ಹಾಗೂ ಪಾಂಡಿತ್ಯಪೂರ್ಣ ಮಾತುಗಳು ಜನಮನವನ್ನು ಮುಟ್ಟುತ್ತವೆ ಎಂದು ಸಾಹಿತಿ ಶಿ.ಗು.ಕುಸುಗಲ್ಲ ತಿಳಿಸಿದರು. 

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಂ.ಸಿ.ಅಂಟಿನ, ನಿವೃತ್ತ ಹಿರಿಯ ಅಧಿಕಾರಿಗಳಾದ ಬಾಳೇಶ ಸಸಾಲಟ್ಟಿ ಮತ್ತು ಶಶಿಧರ ಭೈರನಟ್ಟಿ, ಕಲಾವಿದರಾದ ವಿಶ್ವನಾಥಗುಗ್ಗರಿ, ಗಂಗಾದೇವಿ ಕುಸುಗಲ್ಲ ಮೊದಲಾದವರು ಉಪಸ್ಥಿತರಾಗಿದ್ದರು.