ಗದಗ 01: ವೇತನ ಪ್ರಮಾಣ ಲೆಕ್ಕಿಸದೇ ಬೆವರು ಹರಿಸಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರೇ ನಿಜವಾಗಿ ರಾಷ್ಟ್ರ ನಿರ್ಮಾಣ ಮಾಡುವ ದೇಶಭಕ್ತರು ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಕಾಮರ್ಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನ ಉದ್ಘಾಟಿಸಿ ಅವರು ಮಾತನಾಡಿದರು. ಅಸಂಘಟಿತ ವಲಯದ ಕಾಮರ್ಿಕರ ಶ್ರಮವನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯದಿಂದ ದೇಶ ಕಟ್ಟುವ ಶ್ರಮ ಜೀವಿಗೆ ಅವರ ನಿಸ್ವಾರ್ಥ ಕಾರ್ಯಕ್ಕೆ ಗೌರವ ಸಲ್ಲಿಸಿದಂತೆ. ಈ ವರ್ಗದ ಜನರು ಸಕರ್ಾರ ನೀಡುವ ಶಿಕ್ಷಣ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಪಡೆದು ತಮ್ಮ ಹಾಗೂ ಮಕ್ಕಳ ಭವಿಷ್ಯ ರೂಪಿಸಲು ಗಮನ ಹರಿಸಬೇಕು. ಗದಗ ಜಿಲ್ಲೆ ಆಡಳಿತಾತ್ಮಕವಾಗಿ, ಅಭಿವೃದ್ಧಿ ಕಾರ್ಯದಲ್ಲಿ ಮುಂದಿದ್ದರೂ ಕಾಮರ್ಿಕರ ಗುರುತಿಸುವ ಸೌಲಭ್ಯ ವಿತರಿಸುವ ಕಾರ್ಯದಲ್ಲಿ ಹಿಂದಿದ್ದು ಕಾಮರ್ಿಕ ಇಲಾಖೆ ಅಧಿಕಾರಿಗಳು ಈ ಕುರಿತು ಹೆಚ್ಚಿ ನ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಅರ್ಹರಿರುವ ಎಲ್ಲ ಕಟ್ಟಡ ಕಾಮರ್ಿಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಎಚ್.ಕೆ.ಪಾಟೀಲ ನುಡಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ರಾಜ್ಯ ಸಕರ್ಾರ ಅಸಂಘಟಿತ ವಲಯದ ಕೊಡುಗೆ ಗುರುತಿಸಲು ವಿನೂತನ ಕ್ರಮವಾಗಿ ವಿವಿಧ ವರ್ಗಗಳ ಕಾಮರ್ಿಕರನ್ನು ಪಾರದರ್ಶಕ ಮೌಲ್ಯಾಂಕದ ಮೂಲಕ ಗುರುತಿಸಿ ಅವರಿಗೆ ಸ್ವರ್ಣ, ರಜತ ಹಾಗೂ ಕಂಚಿನ ಪದಕ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಮರ್ಿಕ ಅಧಿಕಾರಿ ಸುಧಾ ಗರಗ ಮಾತನಾಡಿ ರಾಜ್ಯ ಸಕರ್ಾರ ಹಾಗೂ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯಿಂದ ಜಿಲ್ಲೆಯಲ್ಲಿ ಅಸಂಘಟಿತ ವಲಯ 13 ವರ್ಗದ ಕಾಮರ್ಿಕರಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಗುತ್ತಿದೆ. ವಿಶೇಷ 8 ವಲಯದ ಅಸಂಘಟಿತ ಕಾಮರ್ಿಕರಿಗೆ ವಿಶೇಷ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ ಎಂದರು.
13 ವಲಯ ಅಸಂಘಟಿತ ವಲಯದ ಸ್ವರ್ಣ, ರಜತ, ಕಂಚಿನ ಪದಕ ವಿಜೇತರಿಗೆ ಸಮಾರಂಭದಲ್ಲಿ ಪ್ರಶಸ್ತಿ, ಪದಕಿ ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಂಗವಾಗಿ ಅಸಂಘಟಿತ ವಲಯ ಕಾಮರ್ಿಕರಿಗೆ ಆಶಾ ದೀಪ ಯೋಜನೆಯಡಿ ಇರುವ ವಿವಿಧ ಸೌಲಭ್ಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.
ಗದಗ ತಾ.ಪಂ. ಅಧ್ಯಕ್ಷ ಶರಣಬಸನಗೌಡ ಎಸ್. ಪಾಟೀಲ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ. ಸಲಗರೆ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಿರೋಳ, ಪ್ರಭು ಬುರಬುರೆ, ಪ್ರೊ.ಕೆ.ಬಿ. ತಳಗೇರಿ, ಬಾಲ ಕಾರ್ಮಿಕ ಶಾಖೆ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ಕಾರ್ಮಿಕ ಇಲಾಖೆ ಅಧಿಕಾರಿ ಸಿಬ್ಬಂದಿ, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಅಸಂಘಟಿತ ವಲಯದ ವಿವಿಧ ವರ್ಗಗಳ ಕಾಮರ್ಿಕ ಬಂಧುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಎಸ್.ಎಸ್.ಗೌಡರ ಕಾರ್ಯಕ್ರಮ ನಿರೂಪಿಸಿದರು.