ಲೋಕದರ್ಶನ ವರದಿ
ಕೊಪ್ಪಳ 01: ಹಳದಿ, ಕೆಂಪು, ನೀಲಿ ಬಿಳಿ, ಕಪ್ಪು ಇವುಗಳೆಲ್ಲ ಬಣ್ಣಗಳಲ್ಲ. ಭ್ರಷ್ಠಾಚಾರದ ಬಣ್ಣ, ಜಾತಿಯ ಬಣ್ಣ ಮೇಲು ಕೀಳು ಬಣ್ಣ, ಹಸಿವಿನ ಬಣ್ಣ ರಾಗ ಬಣಗಳ ಬಣ್ಣ ಈ ಎಲ್ಲ ಬಣ್ಣಗಳು ಸಮಾಜದಲ್ಲಿರು ಜಾಡ್ಯವನ್ನು ತನ್ನ ಗೆರೆ ಬಣ್ಣಗಳ ಮೂಲಕ ನಿರಂತರ ಹೋರಾಟದ ಮೂಲಕ ಸ್ವಸ್ಥ ಸಮಾಜ ನಿಮರ್ಾಣ ಮಾಡುವಲ್ಲಿ ಶ್ರಮಿಸುವವನೇ ಚಿತ್ರಕಲಾವಿದ. ನಿಜವಾದ ಕಲಾವಿದ ಹೃದಯವಂತನಾರುತ್ತಾನೆ ಸಾಮಾಜಿಕ ಕಳಕಳಿ ಹೊಂದಿರುತ್ತಾನೆ ಎಂದು ರಂಗಕಮರ್ಿ ಶಿವಶಂಕರ್ ಹಾಲ್ಕುರಕೆ ಹೇಳಿದರು.
ಅವರು ಶುಕ್ರವಾರ ಹಿಂದಿ ಬಿ.ಎಡ್ ಕಾಲೇಜಿನಲ್ಲಿ ನಡೆದ ಚೈತ್ರದ ಚಿಗುರು ಕಲಾ ಅಕಾಡೆಮಿಯ ಚಿತ್ರಕಲಾ ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕಲೆ ವಿಶ್ವ ಭಾಷೆ ಚಿತ್ರಕಲೆಗೆ ವಿಶ್ವಮಟ್ಟದ ಮಾರುಕಟ್ಟೆ ಇದೆ. ಚಿತ್ರಕಲಾ ವಿದ್ಯಾಥರ್ಿಗಳು ಸತತ ಪರಿಶ್ರಮ ಪಡಬೇಕು ಎಂದರು.
ರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮಿಜೀ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಹನಸಿ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಮಂಜುನಾಥ ಗೊಂಡಬಾಳ, ವ್ಯಂಗ್ಯಚಿತ್ರ ಕಲಾವಿದ ಬದರಿ ಪುರೋಹಿತ ಮತ್ತು ಚಿತ್ರಕಲಾವಿ ಕೃಷ್ಣ ಇಮಾಮದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು ಮಮತಾ ಕುದರಿಮೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಿತ್ರಕಲಾ ಶಿಕ್ಷಕ ಸಂಸ್ಥೆಯ ನಿದರ್ೇಶಕ ವೀರಯ್ಯ ಒಂಟಿಗೋಡಿಮಠ, ಮತ್ತು ವಿದ್ಯಾಥರ್ಿಗಳಾದ ಶಶಾಂಕ ಕೋಟೆ, ನಯನ ಹುಸೇನ ಸಾಬ್, ರೂಹಿ ತರನಮ್, ಸನಾ ತಾನ್ಸೀನ್, ಸನ್ಮತಿ, ಮಂದಿರಾ ಪ್ರಜ್ಞಾ ರಂಜಿತಾ ಭಟ್, ಅಭಿನವ್ ಭಟ್, ವಿನುತಾ, ವಿಕಾಸ್ ಶ್ರೀರಕ್ಷಾ , ಸಾಹಿತ್ಯ ಎಂ.ಗೊಂಡಬಾಳ, ಪ್ರದೀಪ್ ಅಜರ್ುನ್ ಆದಿತ್ಯ ಸ್ಕಂದ ಅವರ ಕೃತಿಗಳು ಪ್ರದರ್ಶನಗೊಂಡು ಅಪಾರ ಮೆಚ್ಚುಗೆಯ ಮೂಲಕ ಜನಮನ ಸೂರೆಗೊಂಡವು ಎಂದು ಪ್ರಕಟಣೆ ತಿಳಿಸಿದೆ