ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ: ಓಲೇಕಾರ

ಲೋಕದರ್ಶನ ವರದಿ

ಶಿರಹಟ್ಟಿ 06: ಉಭಯ ತಾಲೂಕಿನಾದ್ಯಂತವಾಗಿ 108 ಶುದ್ಧ ಕುಡಿಯುವ ನೀರು ಸ್ಥಾಪಿಸಲಾಗಿದ್ದು ಇದರಲ್ಲಿ ಕೇವಲ 9 ಸ್ಥಗಿತವಾಗಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ  ಎನ್. ನಾಗರತ್ನಾ ಉತ್ತರಿಸಿದರು. ಇದಕ್ಕೆ ಆಕ್ಷೇಪಿಸಿದ ಇಒ ತಮ್ಮ ಸಿಬ್ಬಂದಿಗಳಿಂದ ಮಾಹಿತಿ ಪಡೆದು  ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಾದ್ಯಂತವಾಗಿ 35 ರಿಂದ 40 ಘಟಕಗಳ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. 

ಇದಕ್ಕೆ ಉತ್ತರಿಸಿದ ಎಇಇ ಎರಡು ಮೂರು ದಿನಗಳಲ್ಲಿ ಖುದ್ಧು ಬೇಟಿ ನೀಡಿ ಪರಿಶೀಲಿಸಿ ದುರಸ್ತಿಗೊಳಿಸಲಾಗುವುದು ಮತ್ತು ವರದಿಯನ್ನು ತಾಪಂಗೆ ಸಲ್ಲಿಸಲಾಗುವುದು ಎಂದು ಹೇಳಿದರು. 

ಅವರು ಪಟ್ಟಣ ತಾಲೂಕ ಪಂಚಾಯತ ಸಾಮಥ್ರ್ಯ ಸೌಧದಲ್ಲಿ ಜರುಗಿದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಸಭೆಯಲ್ಲಿ ಇಲಾಖೆವಾರು ಚಚರ್ೆಯ ವೇಳೆಯಲ್ಲಿ ಮಾತನಾಡಿದರು. ಕುಡಿಯುವ ನೀರು ಬಹಳ ಮಹತ್ವದ ಸಂಗತಿಯಾಗಿದ್ದು, ಇದಕ್ಕೆ ನಿರ್ಲಕ್ಷ ಸಹಿಸಲಾಗದು, ಕೂಡಲೇ ಕಾರ್ಯತತ್ಪರರಾಗಿರಿ ಎಂದು ಹೇಳಿದರು. 

ಸಾಮಾನ್ಯ ಸಭೆಗೆ ಬರುಬೇಕಂತಿಲ್ಲ: ತಹಶೀಲ್ದಾರ ಗೋಣೆಣ್ಣವರ ತಾಲೂಕ ಪಂಚಾಯತ ಸಾಮಾನ್ಯ ಸಭೆಗೆ ನಾನು ಬರಬೇಕೆನ್ನವುದು ಏನೂ ಇಲ್ಲ. ಆದರೆ ಸಭೆಯ ಸದಸ್ಯರು ಮಾಹಿತಿ ಕೇಳಿದರೆ ನಮ್ಮ ಆದೀನ ಅಧಿಕಾರಿಗಳಿಂದ ಮಾಹಿತಿ ಒದಗಿಸಲಾಗುವುದು. ಶಾಸಕರ ಕೆಡಿಪಿ ಸಭೆಯಲ್ಲಿ ಶಾಸಕರಿದ್ದರೆ ಮಾತ್ರ ಸಭೆಗೆ ಬರುತ್ತೇವೆ ಎಂದು ಸಭೆಗೆ ಮಾಹಿತಿ ನೀಡಿದರು. 

ನಿರಾಶ್ರಿತ ಕುಟುಂಬಳಿಗೆ ಮತ್ತು ವಿಧವೆಯರಿಗೆ ಮತ್ತು ವೃದ್ದಾಪ್ಯ ವೇತನ ಅನುದಾನವಿದ್ದು ಅವರಿಗೆ ನಿಧಾನವಾಗಿ ಬಟವಡೆಯಾಗುತ್ತಿದೆ ಎಂದು ತಹಶೀಲ್ದಾರಯಲ್ಲ ಗೋಣೆಣ್ಣವರ ಹೇಳಿದರು. 

ಬಟ್ಟೂರ  ಮತ್ತು ಹರದಗಟ್ಟಿ ಅಂಗನವಾಡಿಯಲ್ಲಿ ಮಕ್ಕಳೇ ಇರುವುದಿಲ್ಲ, ತಾಪಂ ಅಧ್ಯಕ್ಷ ಸುಶೀಲವ್ವ ಲಮಾಣಿ ಆರೋಪ: ಹರದಗಟ್ಟಿಯ ಅಂಗನವಾಡಿಯಲ್ಲಿ ಮಕ್ಕಳೆ ಇರುವುದಿಲ್ಲ. ದಿನಾಲೂ ಖಾಲಿ ಇರುತ್ತದೆ. ಅಂಗನವಾಡಿ ಸೂಪರವೈಜರಗಳು ಬೇಟಿ ನೀಡುವುದಿಲ್ಲ.ಅಲ್ಲಿ ಮೊಟ್ಟೆಗಳನ್ನು ಕೊಡುವುದಿಲ್ಲ. ಬಾಣಂತಿಯರಿಗೆ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ ಎಂದು ತಾಲೂಕ ಪಂಚಾಯತ ಅಧಕ್ಷ್ಷಿಣಿ ಸುಶೀಲವ್ವ ಲಮಾಣಿ ಆರೋಪಿಸುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ದ್ವನಿಗೂಡಿಸಿ ತಾಲೂಕಿನ ಅಂಗನವಾಡಿಗಳ ಇದೇ ಹಣೆಬರಹವಾಗಿದೆ. ಸರಕಾರ ಎಷ್ಟೆಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದೆ. ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯನರ್ಿವಹಿಸದೇ ಇರುವುದರಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅದಿಕಾರಿ ನಾಳೆಯಿಂದಲೇ ಸುಪರವೈಜರುಗಳಿಗೆ ತಾಕೀತು ಮಾಡಿ ತಮ್ಮ ಕಾರ್ಯವ್ಯಾಪ್ತಿಯ ಅಂಗವಾಡಿಗಳಿಗೆ ಬೇಟಿ ನೀಡಿ ವರಧಿ ಸಲ್ಲಿಸಬೇಕು ಮತ್ತು ಖುದ್ದಾಗಿ ಅಂಗವಾಡಿಗಳಿಗೆ ಬೇಟಿ ಮಾಡುವುದಾಗಿ ಹೇಳಿದರು. 

ಕಡಕೋಳದಲ್ಲಿ ಉತ್ತಮವಾದ ಶಿಕ್ಷಣ ದೊರೆಯುತ್ತಿಲ್ಲ: ಕೆಲ ವಿದ್ಯಾರ್ಥಿಗಳು 10ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿಲ್ಲ  ಸ್ಥಾಯಿಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಬೇಸರ ವ್ಯಕ್ತಪಡಿಸಿದರು: ಕಡಕೋಳ ಗ್ರಾಮದಲ್ಲಿ ಕನರ್ಾಟಕ ಪಬ್ಲಿಕ ಸ್ಕೂಲ ತೆರೆಯಲಾಗಿದೆ ಆದರೆ ಇಲ್ಲಿನ ಮಕ್ಕಳಿಗೆ 10ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಲ್ಲ. ಶಿಕ್ಷಕರು ಏನು ಕಲಿಸುತ್ತಿದ್ದಾರೆ ಎಂಬುದು ತಿಳಿಯದಾಗಿದೆ. ಕೆಲ ಶಾಲೆಗಳಲ್ಲಿ ಉತ್ತಮವಾದ ಆಹಾರವನ್ನು ಒದಗಿಸುತ್ತಿಲ್ಲ ಎಂದು ಉಪಾಧ್ಯಕ್ಷ ಪವಿತ್ರ ಶಂಕಿನದಾಸರ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಕ್ಷರದಾಸೋಹದ ಅಧಿಕಾರಿ ಬೇಳೆ ಸರಬರಾಜು ಆಗುವಲ್ಲಿ ವಿಳಂಭವಾಗಿದ್ದರಿಂದ ಸಾರಿ ಗುಣ ಮಟ್ಟದಲ್ಲಿ ವ್ಯೆತ್ಯಾಸವಾಗಿರಬಹುದು ಎಂದು ಹೇಳಿದರು. ಉತ್ತಮವಾದ ಆಹಾರವನ್ನು ಒದಗಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು. 

ಶಿರಹಟ್ಟಿ ಬಸ್ ನಿಲ್ದಾಣದ ಸುಚಿತ್ವ ಕಾಯ್ದುಕೊಳ್ಳುವವರಾರು? ತಿಪ್ಪಣ್ಣ ಕೊಂಚಿಗೇರಿ

ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡು ನಿಲ್ಲುವ ಸ್ಥಿತಿ ಇದ್ದರು ಕೂಡಾ ನಿಲ್ದಾಣಾಧಿಕಾರಿ ಹಾಗೂ ಡಿಪೋ ಮ್ಯಾನೇಜರ ಹೇಗೆ ಸುಮ್ಮಿನಿದೀರಿ?  ಎಂದು ತಿಪ್ಪಣ್ಣ ಕೊಂಚಿಗೇರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಬಹುದಿನಗಳ ಬೇಡಿಕೆ ಯಾಗಿರುವ ಶಿರಹಟ್ಟಿಯಿಂದ ಲಕ್ಷ್ಮೇಶ್ವರ ಕ್ಕೆ ಹೋಗಲು ಬೆಳಿಗೆ 8.30 ಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಹಲವಾರು ಸಭೆಯಲ್ಲಿ ಸೂಚಿಸಿದ್ದರೂ ಕೂಡಾ ಏಕೆ ನಿರ್ಲಕ್ಷವಹಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧಿನ ಅದಿಕಾರ ಮಾಹಿತಿಯನ್ನು ಡಿಪೋ ಮ್ಯಾನೆಜರವರಿಗೆ ತಿಳಿಸಲಾಗುವುದು ಎಂದು ಹೇಳಿದರು. ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.