ಸೂರ್ಯಗ್ರಹಣ ವೀಕ್ಷಿಸಿದ ಸಾರ್ವಜನಿಕರು

ಹುನಗುಂದ: ಡಿ.26ರಂದು ಬೆಳಿಗ್ಗೆ 8ರಿಂದ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯಕಾರಿ ಸೂರ್ಯಗ್ರಹಣ ಪ್ರಯೋಗವನ್ನು ನಗರದ ಶಾಲೆ ಮತ್ತು ಪ್ರಮುಖ ಸ್ಥಳಸಲ್ಲಿ ಫಿಲ್ಮರ್ ಕನ್ನಡಕಗಳ ಮೂಲಕ ಸಾರ್ವಜನಿಕರಿಗೆ ವೀಕ್ಷಣೆ ಮಾಡಿಸಲಾಯಿತು ಎಂದು ಉಪನ್ಯಾಸಕ ಆಯ್.ಎಚ್. ನಾಯಕ ಹೇಳಿದರು.                                             

   ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರ, ಹಾಗೂ ಜಿಲ್ಲಾ ಸಮಿತಿ ಬಾಗಲಕೋಟ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೂಯರ್ೋತ್ಸವ 2019 ಜಿಲ್ಲಾ ಮಟ್ಟದ ಶಿಕ್ಷಕರ, ಸಾರ್ವಜನಿಕರ ಕುರಿತು ನಗರದ ವಿದ್ಯಾನಗರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಕಂಕಣ ಸೂರ್ಯಗ್ರಹಣವನ್ನು ಶಾಲಾ ಮಕ್ಕಳಿಗೆ ವೀಕ್ಷಣೆ ಮಾಡಿಸುತ್ತ ಸೂರ್ಯ ಚಂದ್ರ ಮತ್ತು ಭೂಮಿ ಒಂದೆ ಸರಳ ರೇಖೆಯಲ್ಲಿ ಸಂಧಿಸುವ ಬಗ್ಗೆ ಸವಿಸ್ತಾರ ವಿವರಣೆಯನ್ನು ಅವರು ನೀಡುತ್ತ ಬರಿಗಣ್ಣಿನಿಂದ ಈ ಸೂರ್ಯ ಗ್ರಹಣ ವೀಕ್ಷಣೆ ಅಪಾಯಕಾರಿ ಎಂಬುದನ್ನು ಅವರು ತಿಳಿಸಿದರು. ಈ ಗ್ರಹಣ ಮತ್ತು 2064ರಲ್ಲಿ ಸಂಭವಿಸಬಹುದಾಗಿದೆ ಎಂದು ನಾಯಕ ವಿವರಿಸಿದರು. ನಗರದ ವಿಜಯ ಮಹಾಂತೇಶ ವೃತ್ತ, ಕಿತ್ತೂರ ಚನ್ನಮ್ಮನ ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಯನ್ನು ಫಿಲ್ಮಿ ಕನ್ನಡಕಗಳ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ಶಿಕ್ಷಕ ಪ್ರಭು ಹೇರೂರ್, ಸಿ.ಬಿ. ಉಪನಾಳ, ಬಿ.ಎಸ್. ಕರನಂದಿ, ಶಿವು ಅಂಗಡಿ,ಪ್ರಶಾಂತ ಬಾದವಾಡಗಿ, ಅಶ್ವಿನಿ ಬೀಳಗಿ, ಪವನಪ್ರಸಾದ ಕುರ್ತಕೋಟಿ, ಚನ್ನಕೇಶವ ಅವರಾದಿ, ಪ್ರವೀಣಕುಮಾರ ಕುರ್ತಕೋಟಿ ಇತರರು ಇದ್ದರು.