ಲೋಕದರ್ಶನ ವರದಿ
ಕುಮಟಾ: ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ ಪಡೆದುಕೊಳ್ಳುವದು ಅನಿವಾರ್ಯವಾಗಿದೆ. ಆದರೆ ಆಧಾರ ಕಡ್ಡಾಯಗೊಳಿಸುವ ಸರಕಾರ ಅದನ್ನು ಸುಲಭವಾಗಿ ಪಡೆದುಕೊಳ್ಳಲು ಇನ್ನೂ ಸಹ ಸರಳ ಮಾರ್ಗಗಳನ್ನು ಕಲ್ಪಿಸಿಕೊಂಡಿಲ್ಲ. ಇದರಿಂದ ತಾಲೂಕಿನ ಗ್ರಾಮೀಣ ಭಾಗದ ಮುಗ್ದ ಜನರು ಆಧಾರಕಾಡರ್್ ಪಡೆಯಲು ಪಟ್ಟಣದ ಪ್ರಧಾನ ಅಂಚೆ ಕಚೇರಿಯ ಪ್ರವೆಶ ಬಾಗಿಲು ಮೇಲೆ ರಾತ್ರಿ ಇಡೀ ಕಳೆಯುವ ಪರಿಸ್ಥಿತಿ ನಿಮರ್ಾಣವಾಗಿದೆ.
ಸರಕಾರದ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಹಾಗೂ ಶಿಕ್ಷಣ ಮತ್ತು ಇನ್ನಿತರ ಉದ್ದೇಶಗಳಿಗೆ ಆಧಾರಕಾರ್ಡ ಕಡ್ಡಾಯಗೊಳಿಸಲಾಗಿದೆ. ಆದರೆ ಆಧಾರಕಾಡರ್್ ಪಡೆಯಲು ಜನರು ಪಡದಾಡುವಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ದೂರದ ಹಳ್ಳಿಗಳಿಂದ ಬಂದ ವಿಕಲಚೇತನರು ಹಾಗೂ ಮುಗ್ದ ಜನರು ಆಧಾರಕಾರ್ಡಗಾಗಿ ಇಲ್ಲಿನ ಪ್ರಧಾನ ಅಂಚೆ ಕಚೇರಿಯ ರ್ಯಾಂಪ ಮೇಲೆ ರಾತ್ರಿ ಕಳೆಯುವ ಪಾಡು ದಯನೀಯವಾಗಿತ್ತು. ಸೋಮವಾರ ಸಂಜೆ ಟೋಕನ್ ಪಡೆಯಲು ತಾಲೂಕಿನ ದೂರದ ಗ್ರಾಮೀಣ ಭಾಗಗಳ ಜನರು ಪಟ್ಟಣದ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿದ್ದರು. ಅಂಚೆ ಅಧಿಕಾರಿಗಳು ಮಧ್ಯಾನದ ನಂತರ ಟೋಕನ್ ನೀಡಲು ನಿರಾಕರಿಸಿದರು. ಟೋಕನ ಪಡೆಯಲು ಮುಂಜಾನೆ ಮಾತ್ರ ಸಮಯ ನಿಗದಿ ಪಡಿಸಿರುವದು ಮುಗ್ದ ಹಳ್ಳಿಯ ಜನರಿಗೆ ತಿಳಿಯದು. ಅಲ್ಲದೆ ಸಂಜೆಯಾಗಿದ್ದರಿಂದ ಊರುಗಳಿಗೆ ತೆರಳಿ ಮುಂಜಾನೆ ಬರಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ವಿಧಿ ಇಲ್ಲದೆ ಅಧಾರಿಗಾಗಿ ದೂರದ ಹಳ್ಳಿಗಳಿಂದ ಬಂದ ಜನರು ಅಂಚೆ ಕಛೇರಿ ಪ್ರವೇಶ ಬಾಗಿಲಿನ ರ್ಯಾಂಪನಲ್ಲಿ ರಾತ್ರಿ ಇಡೀ ಕುಳಿತು ಬೆಳಗು ಮಾಡಿದರು. ಅಂತು ಮಂಗಳವಾರ ಜನರಿಗೆ ಟೋಕನ ಭಾಗ್ಯ ಲಭಿಸಿತು.
ಅಂಚೆ ಕಛೇರಿಯಲ್ಲಿ 15 ಜನರಿಗೆ ಮಾತ್ರ ದಿನದ ಆಧಾರ ಟೋಕನ್ ನೀಡಲಾಗುತ್ತದೆ. ಇನ್ನೂ ಬಹಳಷ್ಟು ಆಧಾರ ಮಾಡಿಸುವ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳುವ ಜನರಿರುವದರಿಂದ ಸಮಸ್ಯೆ ಬಗೆ ಹರಿಯುವ ಲಕ್ಷಣಗಳಿಲ್ಲ. ಹೀಗಾಗಿ ಅಧಿಕಾರಿಗಳು ತುರ್ತೂ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ಜನರಿಗೆ ನಿರಾಯಾಸವಾಗಿ ಆಧಾರಕಾಡರ್್ ದೊರೆಯುವಂತೆ ಮಾರ್ಗ ಕಲ್ಪಿಸಿಕೊಡಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.