ಲೋಕದರ್ಶನ ವರದಿ
ಹೊನ್ನಾವರ,5 : ಸ್ವಾತಂತ್ರ್ಯ ಸಂಗ್ರಾಮದಿಂದಲೂ ದೇಶಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ವಕೀಲರದ್ದಾಗಿದೆ. ವಕೀಲರ ಘನತೆ ಗೌರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯುವ ವಕೀಲರದ್ದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ವಕೀಲರ ದಿನಾಚರಣೆಯ ಪ್ರಯುಕ್ತ ವಕಿಲರ ಸಂಘ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶದ ಪ್ರಗತಿಗೆ ಪೂರಕವಾಗಿರುವ ಅನೇಕ ಯೋಜನೆಯ ರೂವಾರಿಗಳು ವಕೀಲರಾಗಿದ್ದಾರೆ. ಅವರು ಪಟ್ಟ ಶ್ರಮ, ಸಮಾಜ ಗುರುತಿಸಿದೆ. ಸಾಮಾಜಿಕ ಹೋರಾಟದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಹಿಂದಿನಿಂದಲೂ ಸಮಾಜ ವಕೀಲರನ್ನು ಗೌರವಿಸಿ ಬಂದಿದೆ. ಆದರೆ ವಕೀಲ ವೃತ್ತಿಯಲ್ಲಿ ನಿರತರಾದವರಿಗೆ ಭದ್ರತೆಯ ಕೊರತೆ ಇದ್ದಂತಿದೆ. ಈ ನಿಟ್ಟಿನಲ್ಲಿ ವಕೀಲರ ಸಂಘ ಚಿಂತಿಸಬೇಕಾಗಿದೆ
ಎಂದರು.
ಕಾರ್ಯಕ್ರಮದಲ್ಲಿ ವಕೀಲರ ದಿನಾಚರಣೆಯನ್ನು ಮಹತ್ವವನ್ನು ವಿವರಿಸಿದ ಸತೀಶ ಭಟ್ಟ ಉಳಗೇರೆ ಮಾತನಾಡಿ ನ್ಯಾಯದಾನದ ಪ್ರಕ್ರಿಯೆಯಲ್ಲಿ ನ್ಯಾಯಾಲಯದ ಒಟ್ಟೊಟ್ಟಿಗೆ ವಕೀಲರು ಸಹಕರಿಸಿದ್ದಲ್ಲಿ ಉತ್ತಮ, ಸತ್ವಯುತ, ವೇಗದ ನ್ಯಾಯಧಾನ ಕಕ್ಷಿದಾರರಿಗೆ ಸಿಗುವಂತಾಗುತ್ತದೆ. ಅದರಿಂದಾಗಿ ನ್ಯಾಯಾಲಯದ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ವಹಿಸಿದ್ದರು. ಕಾರ್ಯದಶರ್ಿ ಸೂರಜ್ ನಾಯ್ಕ ವಂದಿಸಿದರು. ಎಮ್.ಎಸ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಶ್ರೀಧರ ಹೆಗಡೆ ಕಲಭಾಗ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಗೌರೀಶ ಯಾಜಿ ಮತ್ತು ಎಮ್.ಎಸ್. ಭಟ್ಟ್ ತಬಲಾ ಸಾತ್ ನೀಡಿದರು.
ವಕೀಲರಾದ ಉಮಾ ಡಿ. ನಾಯ್ಕ, ಸುಜಾತಾ ಅಡಿ ಮತ್ತು ಶಾರದಾ ಸಂಗೀತ ವಿದ್ಯಾಲಯದ ವಿದ್ಯಾಥರ್ಿಗಳಾದ ದಿಕ್ಷಾ ಎಲ್. ನಾಯ್ಕ, ದೇವಿಕಾ, ಸೌಮ್ಯಾ ಶೆಟ್ಟಿ, ಸಹನಾ ಶ್ಯಾನಭಾಗ, ಅಧಿತಿ, ರಜತ್ ಸಂಗೀತಾ ಕಾರ್ಯಕ್ರಮ ನಡೆಸಿಕೊಟ್ಟರು