ಲೋಕದರ್ಶನ ವರದಿ
ಬ್ಯಾಡಗಿ18: ರವಿವಾರ ಸಂಜೆ ಕರ್ತವ್ಯನಿರತ ಬ್ಯಾಡಗಿ ಪೋಲಿಸ್ ವೃತ್ ನೀರಿಕ್ಷಕ ಚಿದಾನಂದ ಅವರ ಮೇಲೆ ಸ್ಥಳೀಯ ತಾಲೂಕಾ ಪಂಚಾಯತ ಆವರಣದಲ್ಲಿ ಹಲ್ಲೆ ನಡೆದಿರುವುದನ್ನು ಖಂಡಿಸಿ ತಾಲೂಕಾ ವಾಲ್ಮೀಕಿ ಮತ್ತು ನಾಯಕ ಸಮಾಜ ಸೇರಿದಂತೆ ಸಾರ್ವಜನಿಕರು ತಹಶೀಲದಾರ ಕೆ.ಗುರುಬಸಪ್ಪ ಅವರಿಗೆ ಪ್ರತಿಭಟನೆ ಮಾಡಿ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಹೊನ್ನೂರಪ್ಪ ಕಾಡಸಾಲಿ ಮಾತನಾಡಿ ದಕ್ಷ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತ ಎಲ್ಲಾ ಜನಾಂಗದವರ ಪ್ರೀತಿ ವಿಶ್ವಾಸವನ್ನು ಹೊಂದಿರುವ ಪೋಲಿಸ್ ವೃತ್ ನೀರಿಕ್ಷಕ ಚಿದಾನಂದಪ್ಪ ಅವರ ಮೇಲೆ ಗುಂಡಾ ಪೃವೃತ್ತಿಯನ್ನು ಹೊಂದಿರುವ ಕೆಲವೊಂದು ಜನರು ಅವರನ್ನು ನೋಡಿದ ತಕ್ಷಣವೇ ಅವರ ಮೇಲೆ ಹಲ್ಲೆ ನಡೆಸಿ ಅವರ ಮೈಮೇಲಿನ ಬಟ್ಟೆ ಕೀಳುವುದು ಅಸಭ್ಯವಾಗಿ ಬೈದಾಡುವುದನ್ನು ಗಮನಿಸಿದಾಗ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆ ಇದಾಗಿದೆ ಆದ್ದರಿಂದ ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಈ ಕೂಡಲೇ ಬಂಧಿಸಬೇಕೆಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ನ್ಯಾಯವಾದಿ ಶಿವಣ್ಣ ಅಂಬಲಿ ಮಾತನಾಡಿ ಪೋಲಿಸ್ ವೃತ್ ನೀರಿಕ್ಷಕ ಚಿದಾನಂದ ಅವರ ಮೇಲೆ ನಡೆದಿರುವ ಕುಕೃತ್ಯವನ್ನು ಮತ್ತು ಹಲ್ಲೆಯ ತೀವ್ರತೆಯನ್ನು ಮಾದ್ಯಮಗಳಲ್ಲಿ ನೋಡಿದಾಗ, ತಾಲೂಕಿನ ಇತಿಹಾಸದಲ್ಲಿ ಇಂಥಹ ಘಟನೆ ನಡೆದ ಉದಾಹರಣೆಯಿಲ್ಲಾ, ಇದರ ಹಿನ್ನೆಲೆಯನ್ನು ಗಮನಿಸಿದಾಗ ಯಾವುದೋ ಒಂದು ದೊಡ್ಡ ರಾಜಕೀಯ ಶಕ್ತಿಯ ಕೈವಾಡವಿದೆ ಎಂದನ್ನಿಸುತ್ತದೆ. ಯಾವುದೇ ವ್ಯಕ್ತಿಗೆ ಅನ್ಯಾಯವಾದಾಗ ಅದನ್ನು ಕೇಳುವುದು, ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ.
ಸಿಪಿಐ ಚಿದಾನಂದಪ್ಪ ತಪ್ಪು ಮಾಡಿದ್ದರೇ ಅವರ ಮೇಲಾಧಿಕಾರಿಗಳಿಗೆ ದೂರು ಕೊಡಬಹುದಿತ್ತು, ಅದನ್ನು ಬಿಟ್ಟು ಏಕಾಏಕಿ ಕರ್ತವ್ಯ ನಿರತ ಸಿಪಿಐ ಅವರ ಮೇಲೆ ಗೊಂಡಾಗಳಂತೆ ವತರ್ಿಸಿರುವುದು ಖಂಡನೀಯವಾದ ಘಟನೆಯಾಗಿದೆ. ಯಾವುದೇ ವ್ಯಕ್ತಿಗಳಿಗೆ ಸಮಾಜದಲ್ಲಿ ಅನ್ಯಾಯ ಸಂಭವಿಸಿದಾಗ ಅವರ ಪರವಾಗಿ ಹೋರಾಟ ಮಾಡಲು ಸಂಘಟನೆಗಳು ಇರುತ್ತವೆ. ಆದರೇ ದಿನ ನಿತ್ಯ ನಮ್ಮನ್ನು ರಕ್ಷಣೆ ಮಾಡುತ್ತಿರುವ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಅನ್ಯಾಯವಾದಾಗ ಅವರ ಪರವಾಗಿ ಹೋರಾಟ ಮಾಡಲು ಸಂಘಟನೆಗಳು ಇಲ್ಲದಿರುವುದರಿಂದ ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಮೇಲೆ ಇಂಥಹ ಗೂಂಡಾ ಜನರು ಹಲ್ಲೆ ಮಾಡುವುದನ್ನು ಬೆಳಸಿಕೊಂಡಿದ್ದಾರೆ. ಸಿಪಿಐ ಅವರ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ನಿವೃತ್ ಪ್ರಾಚಾರ್ಯ ಎಸ್.ಎನ್.ಯಮನಕ್ಕನವರ ಮಾತನಾಡಿ ತಾಲೂಕಿನಲ್ಲಿ ಸರಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಇಂಥಹ ಹಲ್ಲೆಗಳು ನಡೆದರೇ ಯಾವ ಅಧಿಕಾರಿಗಳು ತಾನೇ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಬರಲು ಸಾಧ್ಯ.
ಜನಸಾಮಾನ್ಯರನ್ನು ರಕ್ಷಣೆ ಮಾಡುವ ಪೋಲಿಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆದರೇ ಇನ್ನೂ ನಮ್ಮ ಪಾಡೇನು.? ನಮ್ಮನ್ನು ಯಾರು ರಕ್ಷಣೇ ಮಾಡುತ್ತಾರೆ.? ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಯಾರಾದರೂ ಅನ್ಯಾಯಕ್ಕೊಳಗಾಗಿದ್ದರೇ ಅವರ ಮೇಲಾಧಿಕಾರಿಗಳಿಗೆ ದೂರು ಕೊಡುವುದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದೆಷ್ಟು ಸರಿ ಎಂದರಲ್ಲದೇ ಪೋಲಿಸ್ ವೃತ್ ನೀರಿಕ್ಷಕ ಚಿದಾನಂದ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದರಲ್ಲದೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕರಬಸಪ್ಪ ನಾಯಕರ, ಪುರಸಭಾ ಸದಸ್ಯ ರಾಮಣ್ಣ ಕೋಡಿಹಳ್ಳಿ, ಜಿಲ್ಲಾ ವಾಲ್ಮೀಕಿ ಸಮಾಜದ ಸೋಮನಗೌಡ್ರ, ದುಗ್ಗಪ್ಪ ಬಂಡ್ರಾಳ, ಪರಶುರಾಮ, ನ್ಯಾಯವಾದಿ ಕೆ.ಡಿ.ಪಾಟೀಲ, ಮಲ್ಲೇಶಪ್ಪ ಒಳಗುಂದಿ, ಶಿವರಾಮ ಹೊನ್ನಳ್ಳಿ, ಈರಪ್ಪ ತೆರದಳ್ಳಿ, ಸೇರಿದಂತೆ ಇದ್ದರು.