ಲೋಕದರ್ಶನವರದಿ
ಮಹಾಲಿಂಗಪುರ 03: ವೈದ್ಯ ವೃತ್ತಿ ಪವಿತ್ರವಾಗಿದ್ದು, ಜನಸೇವೆಗೆ ಸಂದ ಸದವಕಾಶವಿದ್ದಂತೆ ಎಂದು ಡಾ. ಶ್ರೀಕಾಂತ ಅರಿಷಿಣಗೋಡಿ ಹೇಳಿದರು.
ಸ್ಥಳೀಯ ಬಸವನಗರದ ಶ್ರೀನಿವಾಸ ನಸರ್ಿಂಗ್ ಹೋಂ ನಲ್ಲಿ ಆಚರಿಸಲಾದ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಅಧ್ಯಾತ್ಮ ಜೀವಿಗಳಾದ ನಾವು ಭಗವಾನ್ ಸಾಯಿಬಾಬಾ ಅವರ ಕೃಪೆಯಿಂದ ವೈದ್ಯ ದಂಪತಿ ಸೇರಿ ರೋಗಿಗಳ ಸೇವೆಯಲ್ಲಿ ಆಸ್ಪತ್ರೆಯನ್ನೇ ಮನೆ, ಸಿಬ್ಬಂದಿಯೇ ಸಂಬಂಧಿಗಳೆಂದು 24 ಗಂಟೆ ಸೇವೆಯಲ್ಲಿರುವ ನಮಗೆ ನಮ್ಮ ಬರ್ತಡೇಗಿಂತ ಜುಲೈ 1 ನ್ನೇ ನಿಜವಾದ ಹುಟ್ಟು ಹಬ್ಬ ಎಂದುಕೊಂಡಿದ್ದೇವೆ ಎಂದು ತಮ್ಮ ವೃತ್ತಿ ಪಾವಿತ್ರ್ಯತೆ ಬಗ್ಗೆ ಹೇಳಿಕೊಂಡರು.
ಆಸ್ಪತ್ರೆಯ ವೈದ್ಯ ದಂಪತಿ ಡಾ. ಅನುಪಮಾ ಮತ್ತು ಶ್ರೀಕಾಂತ ಅರಿಷಿಣಗೋಡಿ ಅವರಿಂದ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸುವ ಮೂಲಕ ಆಸ್ಪತ್ರೆ ಸಿಬ್ಬಂದಿ ಶುಭ ಹಾರೈಸಿ ಅರ್ಥಪೂರ್ಣ ವೈದ್ಯ ದಿನಾಚರಣೆ ಮಾಡಿ ಸಂಭ್ರಮಿಸಿದರು.
ಮ್ಯಾನೇಜರ್ ಚಂದ್ರು, ಹನಮಂತ, ರಫಿಕ್, ರಾಜು, ಬಸು, ವಿಶಾಲ, ರೂಪಾ, ರೇಖಾ, ರಿಯಾನಾ, ನಾಗರತ್ನಾ, ಹೀನಾ, ಲಕ್ಷ್ಮೀ, ಪ್ರತಿಭಾ, ಸುಪ್ರಿಯಾ, ರೇಣುಕಾ, ಶಮಜಾದ, ಸರಸ್ವತಿ, ರೇಣು ಇದ್ದರು.