ಮಹಿಳಾ ಆಯೋಗದ ವರೆಗೆ ಹೋದ ಮಂಗಸೂಳಿ ಗ್ರಾಮದ ಸಮಸ್ಯೆ..! ಭಂಡಾರೆ ಕುಟಂಬದ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ ಮುಖಂಡರು ಮತ್ತು ಪಿಡಿಓ..!!

ಮಹಿಳಾ ಆಯೋಗದ ವರೆಗೆ ಹೋದ ಮಂಗಸೂಳಿ ಗ್ರಾಮದ ಸಮಸ್ಯೆ..!  ಭಂಡಾರೆ ಕುಟಂಬದ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ ಮುಖಂಡರು ಮತ್ತು ಪಿಡಿಓ..!! The problem of Mangasuli village went up to the Women's Commission..! The leaders and the PDO who re

ಲೋಕದರ್ಶನ ವರದಿ 

ಕಾಗವಾಡ 19: ತಾಲೂಕಿನ ಮಂಗಸೂಳಿ ಗ್ರಾಮದ ಭಂಡಾರೆ ಕುಟುಂಬದಲ್ಲಿ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯೊಂದು ಮಹಿಳಾ ಆಯೋಗದ ಅಧ್ಯಕ್ಷರ ಬಳಿ ದೂರ ಹೋಗಿದ್ದು, ಈಗ ಗ್ರಾಮದ ಮುಖಂಡರು ಮತ್ತು ಅಧಿಕಾರಿಗಳು ಸೇರಿ ಭಂಡಾರೆ ಕುಟುಂಬದ ಸದಸ್ಯರನ್ನು ಸೇರಿಸಿ, ಸಂಧಾನ ಮಾಡುವ ಮೂಲಕ ದೀರ್ಘಕಾಲದ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ. 

ಮಂಗಳವಾರ ದಿ. 19 ರಂದು ಮಂಗಸೂಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಆಡಳಿತಾಧಿಕಾರಿ ಸಂಜಯ ಸೂರ್ಯವಂಶಿ ಮತ್ತು ಗ್ರಾಮದ ಹಿರಿಯರು ಹಾಗೂ ಮಾಜಿ ಜಿ.ಪಂ. ಸದಸ್ಯ ರವೀಂದ್ರ ಪೂಜಾರಿ ಇವರ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಿ, ಭಂಡಾರೆ ಕುಟುಂಬದಲ್ಲಿದ್ದ ಚರಂಡಿ, ರಸ್ತೆ ಕುರಿತಾದ ಒಂದು ವರ್ಷದ ಹಳೆಯ ಸಮಸ್ಯೆಯನ್ನು ಚರ್ಚೆ ಮುಖಾಂತರ ಬಗೆಹರಿಸಿ,  ಸಮಸ್ಯೆಯನ್ನು ಸುಖಾಂತ್ಯಗೊಳಿಸಿದ್ದಾರೆ. 

ಮಹಾದೇವ ಭಂಡಾರೆ, ದೀಪಕ ಭಂಡಾರೆ ಸೇರಿದಂತೆ ಭಂಡಾರೆ ಕುಟುಂಗಳು ಹಾಗೂ ರೋಹಿಣಿ ಭಂಡಾರೆ ಇವರ ಮಧ್ಯದಲ್ಲಿ ಚರಂಡಿ ನೀರು ಬೀಡುವ ಕುರಿತಾಗಿ ಕಳೆದ ಒಂದು ವರ್ಷದಿಂದ ನೀರನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಬಿಡುವ ಕುರಿತು ವಿವಾದ ಏರ​‍್ಪಟಟಿತ್ತು. ಇದು ವಿಕೋಪಕ್ಕೆ ಹೋಗಿ ರೋಹಿಣಿ ಭಂಡಾರೆ ಮಹಿಳಾ ಆಯೋಗದವರಿಗೆ ಹೋಗಿ ದೂರು ನೀಡಿದ್ದರಿಂದ ಪ್ರಕರಣದ ತೀವ್ರತೆ ಹೆಚ್ಚಾಗಿತ್ತು. 

ಗ್ರಾಮ ಆಡಳಿತಾಧಿಕಾರಿ ಸಂಜಯ ಸೂರ್ಯವಂಶಿ ಮತ್ತು ರವೀಂದ್ರ ಪೂಜಾರಿಯವರ ಮಧ್ಯಸ್ಥಿಕೆಯಲ್ಲಿ ಎರಡು ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ ಹೊಸ ಚರಂಡಿ ನಿರ್ಮಾಣ ಮಾಡಿಕೊಡುವ ವಾಗ್ದಾನದೊಂದಿಗೆ ಮತ್ತು ಪಶ್ವಿಮದಲ್ಲಿ ಈಗಿರುವ ಚರಂಡಿಯನ್ನು ಮುಚ್ಚಿ, ಅಲ್ಲಿರುವ 5 ಅಡಿ ರಸ್ತೆಯ ಮಧ್ಯ ಪೈಪ್ ಹಾಕಿ ಚರಂಡಿ ನೀರನ್ನು ಮತ್ತು ಪೂರ್ವಕ್ಕೆ ರೋಹಿಣಿ ಭಂಡಾರೆ ಅವರ ಮನೆಯ ನೀರನ್ನು ಪೈಪ್ ಮುಖಾಂತರ ಮುಖ್ಯ ಚರಂಡಿಗೆ ಸೇರಿಸುವ ಭರವಸೆಯೊಂದಿಗೆ ಸಮಸ್ಯೆ ಸುಖಾಂತ್ಯ ಕಂಡಿತು. ಈ ವೇಳೆ ಬಜರಂಗ ಕಾಂಬಳೆ, ಮಹಾದೇವ ಭಂಡಾರೆ, ರೋಹಿಣಿ ಭಂಡಾರೆ, ಗಜಾನನ ಭಂಡಾರೆ, ದೀಪಕ ಭಂಡಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.