ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಜಮಖಂಡಿ ಶಾಸಕ ಜಗದೀಶ ಗುಡಗುಂಟಿರಿಂದ ಸ್ವಾಮಿಜಿಗಳಿಗೆ ಸನ್ಮಾನ

ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಜಮಖಂಡಿ ಶಾಸಕ ಜಗದೀಶ ಗುಡಗುಂಟಿರಿಂದ ಸ್ವಾಮಿಜಿಗಳಿಗೆ ಸನ್ಮಾನ Swamiji honored by Cooperative Society President and Jamkhandi MLA Jagadish Gudagunti

ಲೋಕದರ್ಶನ ವರದಿ 

ಯರಗಟ್ಟಿ 19 : ಇಂದು ಸಹಕಾರಿ ರಂಗವು ಸಾಕಷ್ಟು ಹೆಮ್ಮರವಾಗಿ ಬೆಳೆಯುತ್ತಿದ್ದು, ಅದರೊಟ್ಟಿಗೆ ರೈತಾಪಿ ವರ್ಗಕ್ಕೆ, ಕೃಷಿ ಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಾಶಸ್ತ್ಯದ ಹಣಕಾಸಿನ ನೆರವು ನೀಡಬೇಕು ಎಂದು ಮುರಗೋಡದ ಮಹಾಂತ ದುರದುಂಡಿಶ್ವರ ಮಠದ ಶ್ರೀ ನೀಲಕಂಠ ಸ್ವಾಮಿಗಳು ಹೇಳಿದರು. 

ಪಟ್ಟಣದಲ್ಲಿ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಯರಗಟ್ಟಿ ಶಾಖೆ ಸೋಮವಾರ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು. ಸಕ್ಕರೆ ಕಾರ್ಖಾನೆ ಮೂಲಕ ರೈತರಿಗೆ ಸಾಕಷ್ಟು ಸಹಾಯ ಹಸ್ತ ನೀಡುತ್ತ ಬಂದಿರುವ ಶಾಸಕ ಜಗದೀಶ ಗುಡಗುಂಟಿ ಅವರು ಸಹಕಾರಿ ರಂಗದಲ್ಲಿಯೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಪ್ರಭುಲಿಂಗೇಶ್ವರ ಸೌಹಾರ್ದ ಮೂಲಕ ಯರಗಟ್ಟಿ ಸುತ್ತಲಿನ ಜನತೆಗೂ ಸಹಾಯ ಸಹಕಾರ ದೊರೆಯಲಿ ಎಂದರು.  

ಸಂಘದ ಅಧ್ಯಕ್ಷ ಹಾಗೂ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಪ್ರಭುಲಿಂಗೇಶ್ವರ ಸಹಕಾರಿ ಮೂಲಕ ಜನರಿಗೆ ಹೆಚ್ಚಿನ ಹಣಕಾಸಿ ನೇರವು ನೀಡವ ಉದ್ದೇಶದಿಂದ ಈ ಸಂಘವನ್ನು ಪ್ರಾರಂಭಿಸಲಾಗಿದ್ದು, ಯರಗಟ್ಟಿ ಪಟ್ಟಣದಲ್ಲಿ 18 ಶಾಖೆಯನ್ನು ಪ್ರಾರಂಭಿಸುತ್ತಿರುವುದು ಬಹಳಷ್ಟು ಸಂತಸ ತಂದಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಕಟಕೋಳ-ಎಂ.ಚಂದರಗಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಮುನವಳ್ಳಿಯ ಶ್ರೀ ಮುರಘೇಂದ್ರ ಸ್ವಾಮಿಗಳು, ಭಾಗೋಜಿಕೊಪ್ಪದ ಶ್ರೀ ಮುರಘರಾಜೇಂದ್ರ ಸ್ವಾಮಿಗಳು, ಕಟಕೋಳದ ಶ್ರೀ ಸಚ್ಚಿದಾನಂದ ಸ್ವಾಮಿಗಳು, ಸತ್ತಿಗೇರಿಯ ಶ್ರೀ ಚಂದ್ರಶೇಖರ ಸ್ವಾಮಿಗಳು, ಶಿವಾಪುರದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಶಾಸಕ ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡ್ರ, ವಿಠ್ಠಲ ದೇವರಡ್ಡಿ, ಮಹಾಂತೇಶ ಜಕಾತಿ, ಛಾಯಪ್ಪ ಹುಂಡೆಕರ, ಸದಾನಂದ ಹಣಬರ, ಈರಣ್ಣ ಪಠಮತಿ, ಪರ್ವತಗೌಡ ಪಾಟೀಲ, ಎಸ್‌. ಎಸ್‌. ಕುರಬಗಟ್ಟಿಮಠ, ಎಂ.ವಿ. ಪಾಟೀಲ, ಕುಮಾರ ಹಿರೇಮಠ, ರಾಜೇಂದ್ರ ವಾಲಿ, ಮೋಹನ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ತಮ್ಮಣ್ಣ ಕಾಮನ್ನವರ ಇತರರು ಇದ್ದರು.