ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಪವಿತ್ರ ಕಾರ್ಯ ಮಾಡುತ್ತಿದೆ'


ಲೋಕದರ್ಶನ ವರದಿ

ಇಂಡಿ 31: ಇಡೀ ವಿಶ್ವದಲ್ಲಿ ಪತ್ರಿಕಾ ರಂಗ ವಿಶಿಷ್ಠ ಪೂರ್ಣ ಸ್ಥಾನವನ್ನು ಪಡೆದುಕೊಂಡಿದ್ದು ಕಾಯರ್ಾಂಗ ಶಾಸಕಾಂಗ ನ್ಯಾಯಾಂಗದ ಜೊತೆ ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಪವಿತ್ರ ಕಾರ್ಯ ಮಾಡುತ್ತಿದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

  ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು  ವಿದ್ಯುನ್ಮಾನ ವಾಹಿನಿ ಹಾಗೂ ಪ್ರೀಂಟ್ ಮೀಡಿಯಾ ಪೈಪೂಟಿ ಇರುವ ಇಂದಿನ ದಿನಮಾನಗಳಲ್ಲಿ ಪ್ರೀಂಟ ಮೀಡಿಯಾಕ್ಕೆ ವಿಶೇಷ ಮಹತ್ವ ಪಡೇದುಕೊಂಡಿದೆ.  ಪತ್ರಕೆಗಳಲ್ಲಿ ಬಂದ ಸುದ್ದಿಗಳು ಜನಮಾನಸದಲ್ಲಿ ಹಾಸು ಹೊಕ್ಕಾಗಿ ಇದೆ. 

  ಪತ್ರಿಕೆಗಳು ಪತ್ರೀಕಾ ಧರ್ಮ ಪಾಲಿಸುವದರ ಜೊತೆಗೆ ನ್ಯಾಯ ನೀಷ್ಠುರವಾಗಿ ಸಮಾಜದಲ್ಲಿನ ಸತ್ಯಾ ಸತ್ಯಾಂಶದ ವರದಿಗಳನ್ನು ಪ್ರಕಟಿಸುತ್ತಾ ನೊಂದವರ ಧ್ವನಿಯಾಗಿ ಹೊರಹೋಮ್ಮಬೇಕು. 

 ಇಂಡಿ ಗಡಿಭಾಗವಾಗಿರುವದರಿಂದ್ದ ಅನೇಕ ಶತಮಾನಗಳ ಸಮಸ್ಯಗಳನ್ನು ಬಗೆ ಹರಿಸಲು ಪ್ರಮಾಣಿವಾಗಿ ಪ್ರಯತ್ನಿಸಿರುವೆ ಆದರೂ ನನ್ನ ಗಮನಕ್ಕೆ ಬಾರದ ಸಮಸ್ಯಗಳನ್ನು ಪತ್ರಿಕಾ ಮಾಧ್ಯದ ಮೂಲಕ ಹೋರ ತಂದು ಸಮಸ್ಯಗಳಿಗೆ ಸ್ಪಂದಿಸುವ ಕಾರ್ಯ ಪತ್ರಿಕೆಗಳು ಮಾಡಬೇಕು. 

 ಇತೀಚಿನ ದಿನಗಳಲ್ಲಿ ದಕ್ಷಿಣ ಕನರ್ಾಟಕ ಉತ್ತರ ಕನರ್ಾಟಕ ಎಂಬ ಕೂಗು ಕೇಳಿಸುತಿದ್ದೆ. ಇದನ್ನು ನಾನು ಖಂಡ ತುಂಡವಾಗಿ ಖಂಡಿಸುತ್ತೇನೆ. ನಮ್ಮ ರಾಜ್ಯದಲ್ಲಿ ಅನೇಕ ಪೂರ್ವಜನರು ಅಖಂಡ ಕನರ್ಾಟಕಕ್ಕಾಗಿ ತ್ಯಾಗ ಬಲಿದಾನ ಮಾಡಿ ರಾಜ್ಯದ ಅಖಂಡತೆಯನ್ನು ಎತ್ತಿ ಹಿಡಿದ್ದಾರೆ. ಆದರೆ ಸ್ವಾರ್ಥ ಸಾಧನೆಗೆ ಹೋರಟಿರುವ ಕೆಲವರ ವಿಚಾರಗಳು ನ್ಯಾಯ ಸಮ್ಮತವಾದುದ್ದಲ್ಲ ಇದು ರಾಜ್ಯ ಒಡೆಯುವ ಹುನ್ನಾರ ಹೊರತು ರಾಜ್ಯದ ಕಳಕಳಿ ಇಲ್ಲ.

ಕಾವೇರಿ ಕೃಷ್ಣಾ ಯಾವ ರೀತಿ ನೀರಾವರಿ ಯೋಜನೆಗೆ ಪ್ರಧಾನ್ಯತೆ ನೀಡುತ್ತಾರೆಯೂ ಹಾಗೆ ಭೀಮಾ ನದಿಯ ವಿಚಾರದಲ್ಲಿ ಸರಕಾರದಲ್ಲಿ ಯಾವುದೇ ಯೋಜನೆಗಳ ಬಗ್ಗೆ ಕ್ರಮ ಕೈಗಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಗಡಿ ನಾಡು ಭಾಗದ ಕನ್ನಡಿಗರ ಹಿತ ಕಾಯುವ ಕಾರ್ಯ ನಡೆಯಬೇಕಿದೆ. ಜತ್ತ ಅಕ್ಕಲಕೋಟ ಸೇರಿದಂತೆ ಗಡಿಭಾಗದ ಪ್ರದೇಶದ ಅಭಿವೃದ್ದಿಗೆ ಸರಕಾರ ಹೆಚ್ಚು ಒತ್ತು ನೀಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜಿಲ್ಲೆಯ ದೇವರ ಹಿಪ್ಪರಗಿಯ ಮೋಹರೆ ಹಣಮಂತರಾಯರು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿ ಈಭಾಗದ ಮುಂಚಿಣಿಯಲ್ಲಿದ್ದರು.

ಮಾತೃ ಭಾಷ ಪತ್ರಿಕೆಗಳ ಜೊತೆ ಆಂಗ್ಲಭಾಷಾ ಪತ್ರಿಕೆಗಳನ್ನು ಓದುವ ಹವ್ಯಾಸ ಹಾಗೂ ವಯೋಮಾನಕ್ಕನುಗುಣವಾಗಿ ಲೇಖನಗಳನ್ನು ಪ್ರಕಟಗೋಳ್ಳಬೇಕು.ಪತ್ರಕರ್ತರು ತಮ್ಮ ಮೌಲ್ಯ ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಪ್ರಸ್ತಾವಿಕವಾಗಿ ಮಾತನಾಡಿ  ವಿಜಯಪೂರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರದೀಪ ಕುಲಕಣರ್ಿ ಮಾತನಾಡಿ ಗ್ರಾಮಾಂತರ ಪತ್ರಕರ್ತರು ಅತ್ಯಂತ ಸಂಕಷ್ಟದಲ್ಲಿದ್ದಾರೆ.ಅವರಿಗೆ ಸಮರ್ಪಕ ವೇತನ ,ಭತ್ಯ ಮೂಲ ಭೂತ ಸೌಲಭ್ಯಗಳಿಂದ ಮರೆಚಿಕೆಯಾಗಿದೆ. ಆದ್ದರಿಂದ್ದ ಸರಕಾರಗಳು ಇವರ ಸಹಾಯಕ್ಕೆ ಬರಬೇಕಾಗಿದೆ ಹಾಗೂ ಪತ್ರೀಕಾ ತರಬೇತಿ ಪತ್ರಕರ್ತರ ಸಮಸ್ಯ ಆಲಿಸಲು ವಿಶೇಷ ಪ್ರಾತಿನಿದ್ಯೆ ನೀಡಬೇಕು ಎಂದರು.

 ಕನರ್ಾಟಕ ವಿ,ವಿ ಪತ್ರೀಕೋದ್ಯಮ ವಿಭಾಗಾದ ಮುಖ್ಯಸ್ಥ ಜೆ.ಎಂ.ಚಂದುನವರ ಮಾತನಾಡಿ ಇನ್ ಪಾರಮೇಶೇನ ಕರೇನ್ಸಿ ಆಪ್ ಡೇಮಾಕ್ರಸಿ ಎಂದ ಅವರು 1843ರಲ್ಲಿ ಪತ್ರಿಕೆ ಮಂಗಳುರುಸಮಾಚಾರ ಎಂಬ ಪತ್ರಿಕೆ ಜನ್ಮ ತಳೆದು ಇಂದಿಗು ಅದರ ವಿಸ್ತಾರ ಸಾಗಿದ್ದು ಬಹು ಪತ್ರಿಕೆಗಳು ಬಂದಿವೆ ಕೆಲವು ತೆರೆಯ ಮರೆಯಿಂದ ಹಿಂದೆ ಸರಿದಿವೆ. ಮಹಾತ್ಮಾ ಗಾಂಧಿ ,ಡಾ.ಬಿ.ಅರ್.ಅಂಬೇಡಕರವರು ಸಹಿತ ಪತ್ರಿಕೆಗಳನ್ನು ಆರಂಭಿಸಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಲೇಖನಗಳನ್ನು ಬರೇದು ಸ್ವಾತತ್ರ್ಯದ ಕಿಚ್ಚು ಹೊತ್ತಿಸಿದ್ದು ಪತ್ರಿಕೆಗಳಿಂದ ಎಂದು ಹೇಳಿದರೆ ಅತಿಶಯೋಕ್ತಿ ಎನಿಸದು.1923ರಲ್ಲಿ ಮೋಹರೆ ಹಣುಮಂತರಾಯರು ಕನರ್ಾಟಕ ವೈಭವ ಎಂಬ ಪತ್ರಿಕೆ ಹೊರತಂದು ಸ್ವಾತ್ಯಂತ್ರ್ಯದ ಸ್ಪೋತರ್ಿಗೆಕಾರಣರಾಗಿದ್ದು ಇವರು ಜವಾಹಾರಲಾಲ ನೇಹರು ಸಮೀಪ ವತರ್ಿಗಳಿದ್ದರು. ಪತ್ರಿಕಾ ಕರ್ತರಿಗಪ್ರತಿ ವರ್ಷ ದೇಶದಲ್ಲಿ 14 ಜನ ಪತ್ರಕರ್ತರ ಹತ್ಯಯಾಗುತ್ತಿವೆ.ಪತ್ರಕರ್ತರಿಗೆ ಜೀವಿಸುವ ಮುಕ್ತ ವಾತಾವರಣ ಇಲ್ಲ. ಈ ಕುರಿತು ಸರಕಾಗಳು ಗಂಭೀರ ಚಿಂತನೆ ಮಾಡಿ ಸೂಕ್ತ ಕಾನೂನು ರೂಪಿಸಿಬೇಕಾಗಿದೆ.

ೆ ರೂಪಿಸಲಾಗಿದ್ದ ಸಿಂಗ ವರದಿ ಇನ್ನು ಅನುಷ್ಠಾನವಾಗದೆ ಇರುವದು ಖೇದಕರ ಸಂಗತಿ.

  ಪಾಶ್ಚ್ಯಾತ ದೇಶಗಳಲ್ಲಿ ಪತ್ರಕರ್ತರಿಗೆ ವಿಶೇಷ ಅನುಕೂಲತೆಗಳಿವೆ .ನಮ್ಮದೇಶದಲ್ಲಿ ಸಂರಕ್ಷಣೆ ಮತ್ತು ಸೌಲಭ್ಯಗಳಿಂದ ಇನ್ನು ದೂರವಾಗಿದ್ದಾರೆ .ಸರಕಾರಗಳು ಇಂತಹ ಅಭದ್ರತೆ ಇರುವ ಕುಟುಂಬಗಳ ಪರವಾಗಿ ನಿಲ್ಲಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಗೋಳಸಾರ ಮಠದ ಅಭಿನವ ಪುಂಡಲಿಂಗ ಮಹಾರಾಜರು ವಹಿಸಿದರು. ಜಿ.ಪಂ ಸದಸ್ಯ ಶಿವಯೋಗೇಪ್ಪ ನೇದಲಗಿ, ತಾ.ಪಂ ಅಧ್ಯಕ್ಷ ರುಕ್ಮುದಿನ ತದ್ದೇವಾಡಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ,ಉಪವಿಭಾಗಾಧಿಕಾರಿ ಪಿ.ರಾಜೀವ, ಪತ್ರಕರ್ತರ ಜಿಲ್ಲಾ ಅಧ್ಯಕ್ಷ ಪ್ರದೀಪ ಕುಲಕಣರ್ಿ, ತಾ.ಪಂ ಅಧಿಕಾರಿ ರಾಜುಕುಮಾರ ತೊರವಿ, ನಿವೃತ್ತ ಶಿಶು ಅಭಿವೃದ್ದಿ ಅಧಿಕಾರಿ ಗೋರ್ವಧನ ಬಿ ಸಿ,ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಅಪ್ಪುಗೌಡ ಪಾಟೀಲ, ಹೆಸ್ಕಾಂ ಅಧಿಕಾರಿ ಮೆಡೇದಾರ .ಉಮೇಶ ಕೋಳೆಕರ,  ಎ.ಜೆ .ಮಲ್ಲಿಕಾಜರ್ುನ ಮಠ ವೇದಿಕೆಯಲ್ಲಿದ್ದರು.

ಪತ್ರಕರ್ತರಾದ ಆರ್.ಬಿ.ಸಿಂಪಿ. ಖಾಜು ಸಿಂಗೆಗೋಳ, ಆಯ್.ಸಿ.ಪೂಜಾರ, ಶರಣಬಸಪ್ಪ ಎನ್ ಕೆ. ಉಮೇಶ ಬಳಬಟ್ಟಿ,ನಿಂಗನಗೌಡ ಬಿರಾದಾರ, ಯಲಗೊಂಡ ಬೇವನೂರ, ರಾಮಚಂದ್ರ ಯಂಕಂಚಿ, ರಾಮಚಂದ್ರ ಕಾಂಬಳೆ,  ಜಿಲ್ಲಾ ಉಪಾಧ್ಯಕ್ಷ ರಾಜು ಕುಲಕಣರ್ಿ, ಆನಂದ ಗಣಾಚಾರ, ಜಮಾದಾರ, ಸಂಜೀವ ಕೋಳಿ, ಉದ್ದಿಮೆದಾರ ಜಗದೀಶ ಕ್ಷತ್ರಿ, ಕರವೇ ಅಧ್ಯಕ್ಷ ಬಾಳು ಮುಳಜಿ, ವಿನಾಯಕ ಗುಣಸಾಗರ, ಅನೀಲಗೌಡ ಬಿರಾದಾರ, ಭೀಮಾಶಂಕರ ಮೂರಮನ್, ಭೀಮಣ್ಣಾ ಕೌಲಗಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಪ್ರಶಾಂತ ಕಾಳೆ, ಮಲ್ಲು ಮಡ್ಡಿಮನಿ, ಸಿ.ಎಂ. ಬಂಡಗಾರ , ರಾಘವೇಂದ್ರ ಕುಲಕಣರ್ಿ, ಜಾವೀದ ಮೋಮಿನ, ಇಲಿಯಾಸ ಬೋರಾಮಣಿ, ಸಂಜೀವ ಚವ್ಹಾಣ,ಕಲ್ಲಪ್ಪ ಅಂಜುಟಗಿ, ಶಿವಾನಂದ ಮೂರಮನ್, ಪ್ರದೀಪ ಉಟಗಿ, ಭೀಮಾಶಂಕರ ಪ್ರಚಂಡಿ, ಸೇರಿದಂತೆ ವಿದ್ಯುನ್ಮಾನ ಪತ್ರಿಕಾ ಬಳಗ ಹಾಗೂ ವಿವಿಧ ಸಂಘಟನೆ ಪಧಾಧಿಕಾರಿಗಳು ಹಾಗೂ ಗಣ್ಯರು ಇದ್ದರು.   ಪತ್ರಿಕಾ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದ ಉಮೇಶ ಕೊಳೆಕರ ಹಾಗೂ ಎ.ಜೆ.ಮಲ್ಲಿಕಾಜರ್ುನ ಮಠ ಇವರಿಗೆ ಶಾಸರಿಂದ್ದ ಸನ್ಮಾನಿಸಲಾಯಿತು.  ಆರಂಭದಲ್ಲಿ ಕನರ್ಾಟಕ ಪತ್ರಪರ್ತರ ಸಂಘದ ಅಧ್ಯಕ್ಷ ಖಾಜು ಸಿಂಗೆಗೋಳ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಶರಣಬಸಪ್ಪ ಎನ್ ಕೆ. ನಿರೂಪಿಸಿದರು, ಸಹ ಕಾರ್ಯದಶರ್ಿ ನಿಂಗನಗೌಡ ಬಿರಾದಾರ ವಂದಿಸಿದರು.