ಕಸಾಪ ತಾಲೂಕು ಘಟಕದಿಂದ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಹ್ವಾನ ನೀಡಿ ಸನ್ಮಾನ

The president of the conference was honored by an invitation from the Kasapa taluk unit

ದೇವರಹಿಪ್ಪರಗಿ 20: ಪೈಪೋಟಿ ಹಾಗೂ ವಿವಿಧ ರೀತಿಯ ಲಾಭಿ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ  ಕಡುಬಡತನದಲ್ಲಿ ಹುಟ್ಟಿ ಬೆಳೆದು,ಒಂದಿಂಚು ಹೊಲವಿಲ್ಲದೇ ದಿನನಿತ್ಯ ಕೂಲಿ ಕೆಲಸಕ್ಕೆ ಹೋಗಿ ಸಾಹಿತ್ಯ ಕೃಷಿಯನ್ನು ಮಾಡಿಕೊಂಡಿರುವ ನನ್ನನ್ನು ದೇವರಹಿಪ್ಪರಗಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತುಂಬಾ ಸಂತಸವನ್ನು ನೀಡಿದೆ ಎಂದು ದೇವರಹಿಪ್ಪರಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಸಂಗಮೇಶ ಕೆರೆಪ್ಪಗೋಳ ಅವರು ಹೇಳಿದರು. 

ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಮ್ಮ ಸ್ವಗ್ರಾಮ ಭೈರವಾಡಗಿಯ ನಿವಾಸದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಅವರ ನಿವಾಸದ ಹೆಸರು ಕನ್ನಡದ ಕವಿ ಕೋಗಿಲೆ ಎಂದು ಇಟ್ಟಿರುವುದು ಸರ್ವರ ಮನಸೆಳೆಯಿತು.ಈ ಸಂದರ್ಭದಲ್ಲಿ ತಾಲ್ಲೂಕಿನ ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ,ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್‌.ವಾಲೀಕಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ,ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಹಿರೇಗೌಡರ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಗೌರವ ಕಾರ್ಯದರ್ಶಿ ಅರುಣ ಕೋರವಾರ, ಪಿ.ಸಿ. ತಳಕೇರಿ, ಹಣಮಂತ್ರಾಯ ಬಿರಾದಾರ, ಎಮ್‌. ಎಚ್‌. ಪಟೇಲ, ಪಿ.ಎಸ್‌.ಮಿಂಚನಾಳ, ಎಸ್‌.ಜಿ. ತಾವರಖೇಡ, ನಾಗಯ್ಯ ಹಿರೇಮಠ, ಶಂಕರಗೌಡ ಹಿರೇಗೌಡರ, ಶಿವಾನಂದ ಕೊಟೀನ, ಜಾನು ಗುಡಿಮನಿ, ಸದಾಶಿವ ಗುಡಿಮನಿ, ಸಾಹೇಬಗೌಡ ಉತ್ನಾಳ, ಶಿವು ಉತ್ನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.