ಬೆಳಗಾವಿ 18 : ಮನಷ್ಯನಿಗೆ ಸುಖ - ಶಾಂತಿ ಲಭಿಸುವದು ವಚನಗಳಲ್ಲೇ ಇರುವದರಿಂದ ವಚನಗಳ ಶಕ್ತಿ ಅಪಾರವಾಗಿದೆ ಎಂದು ಗಂದಿಗವಾಡದ ಶ್ರೀ ಮೃತ್ಯುಂಜಯ ಸ್ವಾಮಿಗಳು ನುಡಿದರು.
ರವಿವಾರ ರುಕ್ಮೀಣಿ ನಗರ ಅಯ್ಯಪ್ಪ ಮಂದಿರದಲ್ಲಿ ನಡೆದ ವಾರದ ಸತ್ಸಂಗ ವಚನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಸ್ಥಾವರಕ್ಕೆ ಹೆಚ್ಚು ಒತ್ತು ನೀಡಲಿಲ್ಲ ಬದಲಾಗಿ ಜಂಗಮಕ್ಕೆ ಹೆಚ್ಚು ಒತ್ತು ನೀಡಿದರು. ಶರಣರ ವಚನಗಳು ಕೇವಲ 2-3 ಸಾಲು ಇರಬಹುದು. ಅದರಲ್ಲೆ ಮನುಷ್ಯನ ಪಾಪ ಪರಿಹರಿಸುವ ಶಕ್ತಿ ಇದೆ ಎಂದರು.
ಎಸ್ ಎಸ್ ರಾಮದುರ್ಗ, ಗಂಗಾಧರನ್ನು ಸಾಲಿಮಠ, ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ, ಬಸವರಾಜ ಮುರುಗೋಡ, ಬೋರಪ್ಪ ಹಳ್ಳುರಿ ಇವರು ಮಾತನಾಡಿದರು. ಗೋಪಾಲ ಖಟಾವಕರ ನಿರೂಪಿಸಿದರು. ಸುರೇಂದ್ರ ಗುರುಸ್ವಾಮಿ ಸಾನಿಧ್ಯ ವಹಿಸಿದ್ದರು.