ಯುವಕರಿಗೆ ಶಿಕ್ಷಣದ ಶಕ್ತಿ ಸಬಲೀಕರಣವಾಗಿ ಬರಬೇಕು

ಬೆಳಗಾವಿ 13:  ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ 2019-20 ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾಥರ್ಿಗಳ ಬಿಳ್ಕೋಡುವ ಮತ್ತು ಪಾರಿತೋಷಕ ವಿತರಣಾ ಸಮಾರಂಭವು ದಿ. 11ರಂದು ಸಾಯಂಕಾಲ 4.00 ಗಂಟೆಗೆ ಜರುಗಿತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ 8 ಕನರ್ಾಟಕ ಏರ್ ಸ್ಕ್ವಾರ್ಡನ್ ಎನ್.ಸಿ.ಸಿ. ಕಮಾಂಡಿಗ್ ಆಫೀಸರ್ ಆದ ವಿಂಗ ಕಮಾಂಡರ್ ಪಿ.ಆರ್. ಪೊನ್ನಪ್ಪ ಅವರು ಮಾತನಾಡುತ್ತಾ, ವಿದ್ಯಾಥರ್ಿಗಳಿಗೆ ಮೌಲ್ಯಯುತ ಅಧ್ಯಯನಗಳು ಜೀವನದ ದಾರಿಗೆ ಬೆಳಕು ನೀಡುತ್ತವೆ.  ಶಿಕ್ಷಣದ ಬೆಳಕಿನ ಹೊಳಹುಗಳು ಬದುಕಿನಲ್ಲಿ ಪರಿಪೂರ್ಣವಾಗಿರಬೇಕು.  ಜೀವನವು ಕ್ಲಿಷ್ಟಕರವಾಗಿದ್ದರೂ ವಿದ್ಯಾಥರ್ಿಗಳು ಅತ್ಯುನ್ನತ ಧ್ಯೇಯೋದ್ದೇಶ ಮತ್ತು ದೂರದೃಷ್ಟಿಗಳನ್ನು ಇಟ್ಟುಕೊಂಡು ಶಿಕ್ಷಣವನ್ನು ಪಡೆಯಬೇಕು.  ಶಿಕ್ಷಣದ ಜ್ಞಾನವು ಬೆಳಕನ್ನು ನೀಡಬೇಕು.  ಜ್ಞಾನದ ಜೊತೆ-ಜೊತೆಗೆ ಸದ್ಗುಣಗಳನ್ನು ಕಲಿತುಕೊಳ್ಳಬೇಕು.  ಅಂದಿನ ಅಧ್ಯಯನವನ್ನು ಅಂದೇ ಗೈಯಬೇಕು.  ಜೀವನದಲ್ಲಿ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡು, ವೈವಿಧ್ಯಮಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.  ಕ್ರೀಡೆ, ಸಾಂಸ್ಕೃತಿಕ, ಎನ್.ಸಿ.ಸಿ., ಎನ್.ಎಸ್.ಎಸ್. ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಜೀವನದಲ್ಲಿ ಕೌಶಲ್ಯಗಳನ್ನು ಗಳಿಸಿ ಸವರ್ಾಂಗೀಣ ಅಭಿವೃದ್ಧಿಯಾಗಬೇಕು.  ವಿದ್ಯಾಥರ್ಿ ಜೀವನದಲ್ಲಿ ಉನ್ನತ ಯೋಜನೆ, ಸಿದ್ಧತೆ, ಭೌತಿಕಧೈರ್ಯ ಮತ್ತು ನೈತಿಕ ಧೈರ್ಯಗಳನ್ನು ಹೊಂದಿ ಮಾದರಿಯ ಆಕೃತಿಗಳಂತೆ ಆಗಬೇಕು. ಯುವಕರಿಗೆ ಶಿಕ್ಷಣದ ಶಕ್ತಿ ಸಬಲೀಕರಣವಾಗಿ ಬರಬೇಕು ಎಂದು ಕರೆ ನೀಡಿದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ವಿದ್ಯಾಥರ್ಿಗಳಿಗೆ ಶಿಕ್ಷಣವು ಜೀವನದ ಅವಶ್ಯಕತೆಯನ್ನು ಪೂರೈಸುತ್ತದೆ.  ಯುವಜನಾಂಗ ಬದ್ಧತೆ ಹೊಂದಿರಬೇಕು.  ಉನ್ನತವಾದ ಸಾಧನೆಗೈದು, ಜೀವನದಲ್ಲಿ ಯಶಸ್ವಿಯಾಗಿ, ಪ್ರತಿಕ್ಷಣದ ಸಂತಸವನ್ನು ಅನುಭವಿಸಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸ್ಥಾನೀಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಎಲ್.ವ್ಹಿ. ದೇಸಾಯಿ ಅವರು ಮಾತನಾಡುತ್ತಾ, ವಿದ್ಯಾಥರ್ಿಗಳು ಬದುಕಿನಲ್ಲಿ ಜವಾಬ್ದಾರಿ, ಶಿಸ್ತು, ಮನಸ್ಸಿನಲ್ಲಿ ಬದ್ಧತೆ, ಮತ್ತು ಮಾನವೀಯ ಗುಣಗಳನ್ನು ಹೊಂದಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ನುಡಿದರು.