ದು:ಖವ ನುಂಗಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ: ರಮೇಶ ಜಾರಕಿಹೊಳಿ

ಗೋಕಾಕ:      ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷ ಸಹ ನಿದ್ದೆ ಬಂದಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಟ್ಟಾ ಅಭಿಮಾನಿ ನನ್ನ ದುಖಃವನ್ನು ನಾನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದುಖಃವನ್ನು ನುಂಗಿಕೊಳ್ಳಬೇಕಾದ ಅನಿರ್ವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ಅವರು, ಶನಿವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಾನು ಕಾಂಗ್ರೆಸ್ ನಲ್ಲಿ ಉಳಿದಿದ್ದರೇ ನನನ್ನು ನಿಣರ್ಾಮ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಜತೆಗೆ ನಂಟು ನೆನೆದು ಸ್ವಲ್ಪ ಭಾವುಕರಾದರು.  ಕಾಂಗ್ರೆಸ್ನಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯೋವರು ಮಾತ್ರ ಲಿಡರ್. ಪಕ್ಷದಲ್ಲಿ ಮಾಸ್ ಲೀಡರ್ ಗಳಿಗೆ ಯಾವುದೇ ಬೆಲೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದರು.

    ಕಾಂಗ್ರೇಸ್ ಪಕ್ಷದಲ್ಲಿ ಏನಾದ್ರು ಮಲ್ಲಿಕಾರ್ಜುನ ಖರ್ಗೆ ನೋಡಲ್ಲ. ಸಿದ್ದರಾಮಯ್ಯ ದರ್ಪ, ಡಿಕೆಶಿ ಪೋಸ್ ಕೋಡೋ ಲಿಡ್ ಮಾತ್ರ. ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೆಲ್ ಮಾಡಲ್ಲ ದೈರ್ಯನು ಮಾಡಲ್ಲ ಸಿದ್ದರಾಮಯ್ಯ ಎರಡನ್ನು ಮಾಡಿ ಕಾಂಗ್ರೆಸ್ ನಲ್ಲಿ ಸಿಎಂ ಆದರು. ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ ಎಂದು ಗುಡುಗಿದರು.

   ತೋಳ ಬಂತು ತೋಳ ಅಲ್ಲ ಈಗ ಹುಲಿ ಬಂತು ಹುಲಿಯಾಗಿದೆ. ಆಪರೇಷನ್ ಕಮಲದ ವ್ಯಂಗ್ಯ ಮಾಡಿದ್ದ ಹೆಬ್ಬಾಳ್ಕರ್ ಟಾಂಗ್ ನೀಡಿದ ಅವರು, ಡಿಕೆಶಿ ಜತೆಗೆ ಜಗಳಕ್ಕೆ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪವೇ ಕಾರಣವಾಗಿದೆ. ಹೆಬ್ಬಾಳ್ಕರ್ ಸಿನಿಯರ್ ಆದಮೇಲೆ ಸಿಎಂ ಮಾಡಲು ನಮ್ಮದೇನು ಅಭ್ಯಂತರ ಇಲ್ಲ. ನಾನು ಸೀನಿಯರ್ ನನ್ನ ತಲೆಮೇಲೆ ಆಕೆಯನ್ನು ಕುರಿಸಿದ್ರೆ ಒಪ್ಪಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

   ಸಮ್ಮಿಶ್ರ ಸಕರ್ಾರ ಸಂದರ್ಭದಲ್ಲಿ ಹೆಬ್ಬಾಳ್ಕರ್ ಯಾವುದೇ ಸ್ಥಾನಮಾನ ಕೊಡಬಾರದು ಎಂದು ಪಕ್ಷದಲ್ಲಿಯೇ ನಾನು ಶರತ್ತು ವಿಧಿಸಿದೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಗುಂಡೂರಾವ್ ಸಮ್ಮುಖದಲ್ಲಿಯೇ ನಿರ್ಧಾರವಾಗಿತ್ತು. ಆದರು ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಗಮ ಮಂಡಳಿಯನ್ನು ನೀಡಿದರು. ನಾನು ಸುಮ್ನೆ ಇದ್ರೆ ಶಾಸಕಿ ಹೆಬ್ಬಾಳ್ಕರ್ ಸಚಿವ ಸ್ಥಾನ ಕೊಡುತ್ತಿದ್ದರು ಎಂದು ರಮೇಶ ಜಾರಕಿಹೊಳಿ ಹೇಳಿದರು.

    ಸತೀಶ್ ಜಾರಕಿಹೊಳಿ ಹೋರಾಟಗಾರ ಅಲ್ಲ. ಸತೀಶ್, ಹೆಬ್ಬಾಳ್ಕರ್ ಮನೆಗೆ ಚಹಾ ಕುಡಿಯೋಕೆ ಹೋಗುತ್ತಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ಆಗೋಕೆ ಡಿಕೆಶಿ ಅಷ್ಟೇ ಅಲ್ಲ ನಾವು ಕಾರಣರು. ಹೆಬ್ಬಾಳ್ಕರ್ ಸಚಿವೆಯಾದ್ರೆ ಹೊಟ್ಟೆ ಕಿಚ್ಚುಪಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಆಕೆಯ ಹಣೆಬರದಲ್ಲಿ ಇದ್ರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೇ ಆಕೆಗಾಗಿ ದುಡಿವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಿಕೆಶಿ ಕೈಯಲ್ಲಿದೆ ನಂದೇ ರಾಜ್ಯ ಅನ್ನೋದು ಹೆಬ್ಬಾಳಕರ್ಗೆ ಬಂತು. ರಾಜಕಾರಣದಲ್ಲಿ ಯಾರು ದೊಡ್ಡವರು, ಸಣ್ಣವರು ಎಂಬುದು ತಿಳಿಯಲಿಲ್ಲ. ರಾಜಕಾರಣದಲ್ಲಿ ಪೋಸ್ ಕೊಟ್ಟವರು ಶೇ100ರಷ್ಟು ರೈಟ್ ಇರುತ್ತಾರೆ. ಯಾರು ಪೋಸ್ ಕೊಟ್ಟಾರೆ ಅವರು ಬಿಗ್ ಜಿರೋ ಇರುತ್ತಾರೆಂದರು.