ಲೋಕದರ್ಶನ ವರದಿ
ಮುಧೋಳ 19: ನಾಟಕಕಾರ,ಕವಿಹೃದಯಿ,ನಿದರ್ೇಶಕ ಪಿ.ಬಿ.ಧುತ್ತರಗಿ ಈ ನಾಡು ಕಂಡ ಶ್ರೇಷ್ಠ ಅಭಿಜಾತ ಕಲಾವಿದ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ಹೇಳಿದರು.
ಭಾನುವಾರ ನಗರದ ಕವಿಚಕ್ರವತರ್ಿ ರನ್ನ ಸಾಂಸ್ಕೃತಿಕ ಭವನದಲ್ಲಿ ನಡೆದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ, ನಟ ಪಿ ಬಿ.ಧುತ್ತರಗಿ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು
ತಮ್ಮ ಬದುಕನ್ನು ಹಿಂಡಿ ಅಲ್ಲಿರುವ ಎಲ್ಲ ರಸಗಖನ್ನು ಸೇರಿಸಿ ಬರೆದ 62 ನಾಟಕಗಳಲ್ಲಿಯೂ ಇಂದು ಮರೆಯಾಗುತ್ತಿರುವ ಮನುಷ್ಯತ್ವದ ಸಂಬಂಧಗಳು ಅಡಗಿದ್ದು ಇಂತಹ ನಾಟಕಕಾರ ನಾಟಕ ಸಂಸ್ಕೃತಿಯನ್ನು ನಮ್ಮ ಮುಂದಿನ ತಲೆಮಾರಿನ ಜನಾಂಗಕ್ಕೆ ವಗರ್ಾವಣೆ ಮಾಡಲು ಧುತ್ತರಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ಥಾಪಿತವಾದ ದುತ್ತರಗಿ ಟ್ರಸ್ಟ್ ಮುಕಾಂತರ ಸಂಸ್ಕೃತಿ,ಪರಂಪರೆ ವಗರ್ಾವಣೆಯಾಗುತ್ತಿರುವದು ಅಭಿನಂದನೀಯ ಹಾಗೂ ಅನುಕರಣಿಯ ಕೇವಲ ಈ ನಾಟಕಗಳ ಪ್ರದರ್ಶನ ರಾಜ್ಯ ಮಾತ್ರವಲ್ಲ ದೆಹಲಿಯಲ್ಲಿಯೂ ಪ್ರದರ್ಶನ ಮಾಡುವ ಕಾರ್ಯಕ್ಕೆ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ದಾರವಾಡ ಆಕಾಶವಾಣಿಯ ಡಾ.ಶಶಿದರ ನರೇಂದ್ರ ವಹಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾಜರ್ುನ ಕುಂಬಾರ,ಟ್ರಸ್ಟ್ ಸದಸ್ಯ ಮುರುಗೇಂದ್ರ ವಿರಕ್ತಮಠ,ಚಂದ್ರಶೇಖರ ದೇಸಾಯಿ ಇದ್ದರು.ಡಾ.ಶಿವಾನಂದ ಕುಬಸದ,ಕೆ.ಎಂ.ಪೆಟ್ಲೂರ ಕಜಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ರನ್ನ ಪ್ರತಿಷ್ಠಾನ ಸದಸ್ಯ ಬಿ.ಪಿ.ಹಿರೆಸೋಮನ್ನವರ,ಸಿದ್ದು ಕಾಳಗಿ ಮಾತನಾಡಿದರು ಪಿ.ಬಿ.ಧುತ್ತರಗಿ ಟ್ರಸ್ಟ್ ಸದಸ್ಯ ಮುರುಗೇಂದ್ರ ವಿರಕ್ತಮಠ, ಸಿದ್ದಲಿಂಗ ಇಟ್ಟನ್ನವರ,ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ,ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ,ಕಸಾಪ ಕಾರ್ಯದಶರ್ಿ ವೆಂಕಟೇಶ ಗುಡೆಪ್ಪನವರ ಸೇರಿದಂತೆ ಇತರರು ಇದ್ದರು .
.ಪಿ.ಬಿದುತ್ತರಗಿ ಟ್ರಸ್ಟ್ ಸದಸ್ಯ ಚಂದ್ರಶೇಖರ ದೇಸಾಯಿ ಸ್ವಾಗತಿಸಿದರು.ಸಿ.ಎಲ್.ರೂಗಿ ನಿರೂಪಿಸಿ ರಮೇಶ ಅರಕೇರಿ ವಂದಿಸಿದರು.
ಧುತ್ತರಗಿ ನಾಟಕಗಳ ಸ್ತ್ರೀ ಪಾತ್ರಗಳಲ್ಲಿ ಇಂದಿಗೂ ಅಳವಡಿಸಿಕೊಳ್ಳುವ ಮೌಲ್ಯಗಳಿವೆ;ಇಟ್ನಾಳ
ನಾಟಕಕಾರ ಪಿ.ಬಿ.ಧುತ್ತರಗಿ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು ಇಂದಿಗೂ ಪ್ರಸ್ತುವಾಗಿದ್ದು ಅವುಗಳನ್ನು ನಾವು ಇಂದಿನ ಜನಾಂಗ ಅಳವಡಿಸಿಕೊಂಡಿದ್ದೇಯಾದರೆ ಸಂಸಾರ ಅತ್ಯುತ್ತಮವಾಗಿ ನಡೆಯುತ್ತವೆ ಎಂದು ಖ್ಯಾತ ಭಾಷಾ ಅನುವಾದ ದಾರವಾಡ ಲಕ್ಷ್ಮೀಕಾಂತ ಇಟ್ನಾಳ ಹೇಳಿದರು
ಮೊದಲನೆಯ ಗೋಷ್ಠಿ ಪಿ.ಬಿ.ದುತ್ತರಗಿ ನಾಟಕಗಳ್ಲಲಿ ಸ್ತ್ರೀ ಪಾತ್ರಗಳು ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಉಮಾ ಬಾರಿಗಿಡದ .ಎಂ.ಎಂ.ವಿರಕ್ತಮಠ ಇದ್ದರು.
ನಾಟಕಗಳಲ್ಲಿ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಣ ಕಟ್ಟಿದವರು;ಧುತ್ತರಗಿ
ನಾಟಕಗಳಲ್ಲಿ ಕುಟುಂಬಗಳನ್ನು ಒಂದೂ ಗೂಡಿಸುವ ಬಗೆಗಳನ್ನು ವಿವಿದ ಮಜಲುಗಳಲ್ಲಿ ಕಟ್ಟಿಕೊಟ್ಟವರು ಧುತ್ತರಗಿಯವರು ಎಂದು ದಾರವಾಡದ ಜೆ.ಎಸ್.ಎಸ್.ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಆರ್.ವಿ.ಪಾಟೀಲ ಹೇಳಿದರು.
ಎರಡನೆಯ ಗೋಷ್ಠಿ ಪಿ.ಬಿ.ದುತ್ತರಗಿಯ ನಾಟಕದಲ್ಲಿ ಕೌಟುಂಬಿಕ ಹಾಗೂ ಸಮಾಜಿಕ ಚಿತ್ರಣ ಕುರಿತು ಅವರು ಉಪನ್ಯಾಸ ನೀಡಿದರು.
ಆರನೆಯ ತರಗತಿ ಓದಿದ ವ್ಯಕ್ತಿಯೊಬ್ಬ 64 ನಾಟಕಗಳನ್ನು ಬರೆಯುತ್ತಿದ್ದಾನೆ ಎಂದರೆ ಅವರಿಗೆ ರಾಜ್ಯ ಗೌರವಿಸಬೇಕು ಹೀಗಾಗಿ ಅವರ ಹೆಸರಲ್ಲಿ ಸ್ಥಾಪಿಸಿ ಟ್ರಸ್ಟ್ ಉತ್ತಮ ಕಾರ್ಯಗಳನ್ನು ಮಾಡಲಿ ಇಂತವರಿಗೆ ಜ್ಞಾನಪೀಠ ಪ್ರಶಸ್ತಿ ಮರಣೋತ್ತರವಾಗಿ ನೀಡಬೇಕು ಎಂದು ಹೇಳಿದರು.
ಧುತ್ತರಗಿಯ ನಾಟದಲ್ಲಿನ ವಸ್ತು ಹಾಗೂ ವಿನ್ಯಾಸ ವಿಶೇಷವಾಗಿದ್ದವು;ನರೇಂದ್ರ
ಮುಧೋಳ:ದುತ್ತರಗಿಯವರ ನಾಟಕಗಳಲ್ಲಿ ವೈವಿದ್ಯಮಯ ಪಾತ್ರಗಳಿದ್ದರಿಂದ ಅತ್ಯಂತ ವೇಗವಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ವಸ್ತು ಅಡಿಗಿಸಿ ನಾಟಕ ಅಭಿನಯ ಮಾಡುತ್ತಿದ್ದರು ಎಂದು ದಾರವಾಡದ ಡಾ.ಶಿಶಿದರ ನರೇಂದ್ರ ಹೇಳಿದರು.
ಮೂರನೆಯ ಗೋಷ್ಠಿಯಲ್ಲಿ ಧುತ್ತರಗಿ ನಾಟಕಗಳಲ್ಲಿ ವಸ್ತು ಮತ್ತು ವಿನ್ಯಾಸ ಕುರಿತು ಮಾತನಾಡಿದ ಅವರು ಅವರ ಎಲ್ಲ ನಾಟಕಗಳಲ್ಲಿ ವಸ್ತು ಮತ್ತು ವಿನ್ಯಾಸ ವಿಭಿನ್ನವಾಗಿ ಕಾರ್ಯಮಾಡಿ ಜನಮನ ಗಳಿಸಿದ್ದರು ಎಂದು ಹೇಳಿದರು
ಸಂವಾದ ಗೋಷ್ಠಿ:
ಧುತ್ತರಗಿ ನಾಟಕಗಳಲ್ಲಿರುವ ಮೌಲ್ಯ ಮನೆಮನ ತಲುಪಲಿ:
ಡಾ.ಶಿಶಿದರ ನರೇಂದ್ರ ಡಾ.ಆರ್.ವಿ.ಪಾಟೀಲ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ಅವರ ಜತೆಗೆ ಡಾ.ಸಂಗಮೇಶ ಕಲ್ಯಾಣಿ ಹಾಗೂ ಸಾಹಿತಿ ವೆಂಕಟೇಶ ಗುಡೆಪ್ಪನವರ ಸಂವಾದ ನಡೆಸಿ ಧುತ್ತರಗಿಯವರ ನಾಟಕಗಳು ಮನೆ ಮನೆಗೆ ತಲುಪುವ ಜತೆಗೆ ಅವುಗಳ ವಿಮಶರ್ೆ ಹಾಗೂ ಪಿ,ಎಚ್.ಡಿಯಂತಹ ಮಹಾಪ್ರಬಂಧಗಳು ಹೊರಬರಲಿ ಮತ್ತು ಮಕ್ಕಳಿಗೆ ಅವರ ನಾಟಕಗಳಲ್ಲಿನ ಮೌಲ್ಯಗಳನ್ನು ಪಸರಿಸಲಿ ಎಂದು ಸಂವಾದಕರು ಹಾಗೂ ವಿದ್ವಾಂಸರು ಅಭಿಪ್ರಾಯಪಟ್ಟರು
ಮಂತ್ರಮುಗ್ದರನ್ನಾಗಿಸಿದ ಮನಸೂರ ಗಾಯನ.
ಮುಧೋಳ:ಧುತ್ತರಗಿ ಸ್ಮರಣೋತ್ಸವದ ನಿಮಿತ್ಯ ನಡೆದ ರಂಗಗೀತೆಗಳ ಕಾರ್ಯಕ್ರಮದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆ ಬಳ್ಳಾರಿಯ ನಾಡೋಜ ಡಾ.ಸುಭದ್ರಮ್ಮ ಮನಸೂರ ತಿಪ್ಪೇಸ್ವಾಮಿ,ವಿರುಪಾಕ್ಷ ದೇವಲಾಪೂರ ಹಾಗೂ ತಂಡದವರಿಂದ ಅವರಿಂದ ರಂಗಗೀತೆಗಳು ಕೇಳುಗರನ್ನು ಮಂತ್ರ ಮುಗ್ರನ್ನಾಗಿಸಿದವು.
ನಾಟಕ: ನಂತರ ಬಾದಾಮಿ ತಾಲ್ಲೂಕಿನ ಹಂಸನೂರಿನ ಶ್ರೀ ಪಂಡಿತ ಪುಟ್ಟರಾಜ ಕಲಾ ಹಾಗೂ ಸಾಂಸ್ಕೃತಿಕ ಮಹಿಳಾ ತಂಡದಿಂದ ಪಿ.ಬಿ.ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ ಜನಮನ ಗೆದ್ದಿತು..