ಬದುಕಿನ ದರ್ಶನ ಮಾಡಿಸಿದ ಶರೀಪರ ತತ್ವಪದಗಳು: ಡಾ. ವಿ.ಎಂ.ಬಾಗಾಯತ

ಬದುಕಿನ ದರ್ಶನ ಮಾಡಿಸಿದ ಶರೀಪರ ತತ್ವಪದಗಳು: ಡಾ. ವಿ.ಎಂ.ಬಾಗಾಯತ The philosophical words of the body that gave a vision of life: Dr. V.M. Bagayat

ಲೋಕದರ್ಶನ ವರದಿ 

ವಿಜಯಪುರ 29: “ಸಂತ ಶಿಶುನಾಳ ಶರೀಫರ ತತ್ವಪದಗಳು ಕೇವಲ ಕನ್ನಡ ಸಾಹಿತ್ಯವಾಗಿರದೇ ಅವು ಬದುಕಿನ ದರ್ಶನವಾಗಿವೆ. ಜಾತಿ, ಧರ್ಮ, ಭಾಷೆಯ ಸೀಮೆಗೆ ಒಳಪಡದೇ ವಿಶ್ವಮಾನವ ಪ್ರಜ್ಞೆಯನ್ನು ಒಳಗೊಂಡಿರುವಂತವುಗಳಾಗಿವೆ” ಎಂದು ವಿಶ್ರಾಂತ ಪ್ರಾಚಾರ್ಯ, ಇತಿಹಾಸಕಾರ ಡಾ. ವಿ.ಎಂ.ಬಾಗಾಯತ ಹೇಳಿದರು. 

ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ‘ಚಿಂತನ ಸಾಂಸ್ಕೃತಿಕ ಬಳಗ’ ಹಮ್ಮಿಕೊಂಡ ‘ಅನುಭಾವಿಗಳು ಹಿ ಮರುಭೆಟ್ಟಿ(16)’ ನಿಮಿತ್ತ ‘ಸಂತ ಶಿಶುನಾಳ ಶರೀಫರು’ ಎಂಬ ವಿಷಯದ ಕುರಿತು ಮಾತನಾಡಿದ ಅವರು “ಗುರುಗೋವಿಂದ ಭಟ್ಟರ ಮತ್ತು ಶಿಶುನಾಳ ಶರೀಫರ ಗುರು-ಶಿಷ್ಯ ಸಂಬಂಧ ಅತ್ಯದ್ಭುತ. ಇಬ್ಬರೂ ಬೇರೆ ಬೇರೆ ಮತದವರಾದರೂ ಪರಸ್ಪರ ಅವಿನಾಭಾವ ಸಂಬಂಧವು ಜಾತಿಯನ್ನು ಮೀರಿ ಬೆಳೆದದ್ದು ಮೌಲ್ಯಯುತವಾದುದು ಮತ್ತು ಅನುಭಾವದ ನೆಲೆಯಲ್ಲಿಯೇ ಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗವನ್ನು ತೋರಿಸಿಕೊಟ್ಟವರು” ಎಂದರು. 

ಬಿ.ಆರ್‌.ಬನಸೋಡೆ ವಚನಗಾಯನ ಮಾಡಿದರು. ಡಾ. ಸುಭಾಸ ಕನ್ನೂರ ನಿರೂಪಿಸಿದರು.      ಡಾ. ವಿ.ಡಿ.ಐಹೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಎಸ್‌.ಐ.ಮೇತ್ರಿ ವಂದಿಸಿದರು. ಪಂಡಿತರಾವ್ ಪಾಟೀಲ ಮತ್ತು ಬಿ.ಎಂ.ಪಾಟೀಲ ತತ್ವಪದಗಳನ್ನು ಹಾಡಿದರು.  

ಕಾರ್ಯಕ್ರಮದಲ್ಲಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಡಾ. ಎಂ.ಎಸ್‌.ಮದಭಾವಿ, ಮ.ಗು.ಯಾದವಾಡ, ಆನಂದ ಗೋಡಸೆ, ರಾಘವೇಂದ್ರ ಕುಲಕರ್ಣಿ, ಸುಖಾಂತ ಕುಲಕರ್ಣಿ, ಪ್ರೊ. ಎಂ.ಎಸ್‌.ಝಳಕಿ, ಪ್ರೊ. ಜಿ.ಆರ್‌.ಕುಲಕರ್ಣಿ, ಪ್ರೊ. ಕೆ.ಎಸ್‌.ಬಿರಾದಾರ, ಸಹದೇವ ನಾಡಗೌಡ, ವಿಠ್ಠಲ ತೇಲಿ, ಪ್ರಭಾವತಿ ದೇಸಾಯಿ, ಬಿ.ಸಿ.ಹತ್ತಿ, ಎ.ಬಿ.ಬೂದಿಹಾಳ, ದೇವೂ ಮಾಗೊಂಡ, ಶರಣಗೌಡ ಪಾಟೀಲ, ಎನ್‌.ಡಿ.ಪಾಟೀಲ, ವಿ.ಎನ್‌.ಪಾಟೀಲ, ಮಲ್ಲಿಕಾರ್ಜುನ ಮೇತ್ರಿ, ಎಂ.ಎನ್‌.ಡಿಗ್ಗಾವಿ, ಆರ್‌.ಎಂ.ವಾಲಿ, ಸಹದೇವ ನಾಡಗೌಡ, ಆರ್‌.ಜಿ.ಬ್ಯಾಕೋಡ ಮುಂತಾದವರು ಉಪಸ್ಥಿತರಿದ್ದರು.