ಲೋಕದರ್ಶನ ವರದಿ
ರಾಯಬಾಗ 13: ವ್ಯಕ್ತಿತ್ವ ವಿಕಸನಗೋಳ್ಳಬೇಕಾದರೆ ಆಂತರಿಕ ಹಾಗೂ ಬಾಹ್ಯ ಮೌಲ್ಯಗಳ ಬಗ್ಗೆ ವಿದ್ಯಾಥರ್ಿಗಳು ಗಮನ ಹರಿಸಬೇಕಾದುದು ಅತ್ಯಂತ ಮಹತ್ವದಾಗಿದೆ ಎಂದು ಪುಣೆಯ ಎಚ್.ಆರ್. ಟ್ರೇನಿಂಗ ಆಂಡ್ ಡವಲಪಮೆಂಟ್ ಎಂ.ಪಿ.ಟಿ.ಎ. ಎಜ್ಯುಕೇಷನ ಮ್ಯಾನೇಜರ್ ಪ್ರದೀಪ ಕಸಾಬ ಹೇಳಿದರು.
ಸೋಮವಾರ ಸ್ಥಳೀಯ ಪಾಲಿಟೇಕ್ನಿಕ್ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗಾಗಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಿಖಿತ ಪರೀಕ್ಷೆಯಲ್ಲಿ ರ್ಯಾಂಕ ಪಡೆದರೆ ಸಾಲದು, ಸಂದರ್ಶನದಲ್ಲಿ ಕೇಳುವ ಪ್ರಶ್ನೇಗಳಿಗೆ ತಕ್ಕಂತೆ ಸಾಮಾನ್ಯಜ್ಞಾನ, ಭಾಷಾಕೌಶಲ್ಯ, ಶಿಸ್ತು, ಮಾನವೀಯ ಮೌಲ್ಯ ಅಳವಡಿಸಿಕೊಳ್ಳವ ಅಗತ್ಯವಿದೆ. ಉದ್ಯೋಗ ಕೇವಲ ಸಂಬಳ ತರುವುದಕ್ಕೆ ಸೀಮಿತವಾಗದೆ ಅದರಲ್ಲಿ ಹೆಚ್ಚಿನ ಜ್ಞಾನ ಮತ್ತು ಸಾಮರ್ಥ್ಯಗಳಿಸಿಕೊಂಡಾಗ ಮಾತ್ರ ನೈಪುಣ್ಯ ಉದ್ಯೋಗಿ ಅನ್ನಿಸಿಕೊಳ್ಳಲು ಸಾಧ್ಯವೆಂದರು.
ಪುಣೆಯ ಎಚ್.ಆರ್.ಎಂ.ಪಿ.ಟಿ.ಎ. ಎಜ್ಯುಕೇಷನ ಶೈಲೇಶ ಜೋಶಿ, ಸಂದರ್ಶನಕ್ಕೆ ಬೇಕಾಗಿರುವ ವಿದ್ಯಾಥರ್ಿಯ ಮಾಹಿತಿಗಾಗಿರಿ ಸ್ಜೂಮ್ ಹೇಗೇ ತಯಾರಿಸುವುದು, ಉತ್ತಮ ಭವಿಷ್ಯಕ್ಕಾಗಿ ಸಂದರ್ಶನವನ್ನು ಹೇಗೆ ಕೂಡಬೇಕು ಎಂಬುವದರ ಬಗ್ಗೆ ಪ್ರೊಜೆಕ್ಟ ಮೂಲಕ ವ್ಯಕ್ತಿತ್ವ ವಿಕಸನದ ಅರಿವನ್ನು ಮೂಡಿಸಿದರು.
ಪ್ರಾಚಾರ್ಯ ಎಂ.ಎಸ್. ಮಗದುಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಯಬಾಗದ ಎಸ್.ಆರ್.ಎಸ್.ಎಲ್ ಯುನಿಟ್ ಜನರಲ್ ಮ್ಯಾನೇಜರ್ ಜಾಕಿ ಅಹಮದ್ ಶೇಖ, ಶ್ರೀನಿವಾಸ ಸೊಲ್ಲಾಪೂರೆ, ವಿ.ಆರ್. ಕರಲಿಂಗನ್ನವರ, ದಾದಾಜಮದಾಡೆ, ಎಂ.ಕೆ ಹೀರೆಮಠ, ಕಾಲೇಜ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಆರ್.ಎ.ಆನ್ವೇಕರು ಸ್ವಾಗತಿಸಿ, ನಿರೂಪಿಸಿದರು, ಕೆ.ಎಂ.ಪತ್ತಾರ ವಂದಿಸಿದರು.