ವ್ಯಕ್ತಿ ಕಾಣೆ

The person is missing

ವ್ಯಕ್ತಿ ಕಾಣೆ

ಕಾರವಾರ 23 :-ಮುಕ್ತುಂಸಾಬ್ ಅಕ್ಬರಸಾಬ್ ಪುಂಗಿ (66ವರ್ಷ), ಸಾ: ತೇರಗಾಂವ, ಹಳಿಯಾಳ ಇವರು ದಿನಾಂಕ:01-12-2024 ರಂದು ಬೆಳಗ್ಗೆ 11 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ.   

ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು 5.6 ಅಡಿ ಎತ್ತರ, ಕನ್ನಡ, ಉರ್ದು, ಮರಾಠಿ ಭಾಷೆ ಮಾತನಾಡುತ್ತಾನೆ. ಬಿಳಿ ಅಂಗಿ, ಬಿಳಿ ಪೈಜಾಮ್ ಧರಿಸಿರುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಹಳಿಯಾಳ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08284-220133, ಹಳಿಯಾಳ ಪೊಲೀಸ್ ನೀರೀಕ್ಷಕರ ದೂ. ಸಂ: 08284-220333, ಎಸ್ಡಿಪಿಒ ದೂ. ಸಂ: 082384-231395, ಡಿಪಿಒ ದೂ.ಸಂ: 08382-226233, 8242220501 ಸಂಪರ್ಕಿಸುವಂತೆ ಹಳಿಯಾಳ ಪೊಲೀಸ್ ಠಾಣೆಯ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.