ಮಹಾರಾಷ್ಟ್ರದಲ್ಲಿ ಮಿಂಚಿದ ಭತ್ತದ ನಾಡಿನ ಪುಟಾಣಿಗಳು

ಲೋಕದರ್ಶನ ವರದಿ

ಗಂಗಾವತಿ 01: 27 ಮತ್ತು 28 ರಂದು ಎರಡು ದಿನಗಳ ಕಾಲ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದ ಆಲ್ ಇಂಡಿಯಾ ರಾಷ್ಟ್ರೀಯ ಕರಾಟೆ ಚಾಂಪಿಯನ್ಸಿಪ್ ಪಂದ್ಯದಲ್ಲಿ ಪಾಲ್ಗೊಂಡ ಇಲ್ಲಿನ ಪುಟಾಣಿಗಳಾದ ಭೂಮಿಕಾ ಆಲೂರುಗೌಡ(10), ವಿವೇಕ ಆಲೂರುಗೌಡ(12) ಕಂಚಿನ ಪದಕಗಳನ್ನು ಪಡೆದು ಜಿಲ್ಲೆಗೆ ಕೀತರ್ಿಯನ್ನು ತಂದಿದ್ದಾರೆ.

ಜಿಲ್ಲಾ ಕೇಂದ್ರವಾಗಿರುವ ಜಲಗಾಂವ್ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜ್ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ನ್ಯಾಷನಲ್ ಸುಟೋಕಾನ್ ಅಸೋಷಿಯೇನ್ ಆಪ್ ಇಂಡಿಯಾ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.

25 ರಾಜ್ಯಗಳಿಂದ 16 ವರ್ಷದೊಳಗಿನ 2000 ಜನ ಕರಾಟೆ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಯುದ್ದ ಮತ್ತು ಕಾಲ್ಪನಿಕ ಯುದ್ದವನ್ನು ಪ್ರದಶರ್ಿಸಿದ ಭೂಮಿಕಾ ಆಲೂರುಗೌಡ ಮತ್ತು ವಿವೇಕಾ ಆಲೂರುಗೌಡ 4 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಈ ಪುಟಾಣಿಗಳು ಇಲ್ಲಿನ ಅಕ್ಷರ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೊಸಳ್ಳಿ ರಸ್ತೆಯಲ್ಲಿನ ವಿಶ್ವ ಹಿಂದು ಪರಿಷತ್ನ ವಿವೇಕಾಭಾರತಿ ವಿದ್ಯಾಕೇಂದ್ರ ಮತ್ತು ಪೊಲೀಸ್ ಕ್ವಾಟರ್ಸ್ ಆವರಣದಲ್ಲಿ ನಿತ್ಯ ತರಬೇತಿಯನ್ನು ನೀಡುತ್ತಿದ್ದು ಅತಿ ಚಿಕ್ಕ ವಯಸ್ಸಿನ ಶಿಕ್ಷಕರೆಂದು(ಸಮರ ಕಲೆ) ಭತ್ತದ ನಾಡಿಗೆ ಕೀತರ್ಿ ತಂದಿದ್ದಾರೆ. ಇವರ ತಂದೆ ಶಿವಪ್ರಸಾದ ಗೌಡ ಪರಿಸರ ಪ್ರೇಮಿ ಮತ್ತು ಪಕ್ಷಿ ತಜ್ಞರಾಗಿದ್ದಾರೆ.