ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್ನಲ್ಲಿ ಹಂತ-ಹಂತವಾಗಿ ನಿವೃತ್ತಿ

ನವದೆಹಲಿ,  ಆಗಸ್ಟ್ 20        ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ  ಡಿಸೆಂಬರ್ನಲ್ಲಿ ಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ  ಮಂಗಳವಾರ ಎಂದು ಹೇಳಿದ್ದಾರೆ. 

'ಮಿಗ್  21 ಎಮ್ಎಫ್ ಆವೃತ್ತಿ 44 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಡಿಸೆಂಬರ್ ವೇಳೆಗೆ  ಹಂತಹಂತವಾಗಿ ಕೈಬಿಡಲಾಗುವುದು. ಸೆಪ್ಟೆಂಬರ್ ನಲ್ಲಿ ಈ ವಿಮಾನದಲ್ಲಿ ಕೊನೆಯ ಹಾರಾಟ ನಡೆಸುತ್ತೇನೆ.'  ಎಂದು ಧನೋವಾ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ  ತಿಳಿಸಿದ್ದಾರೆ.  

ಮಿಗ್-21 ಯುದ್ಧ ವಿಮಾನ ನಾಲ್ಕು ದಶಕಗಳಿಂದ ಸೇವೆಯಲ್ಲಿರುವುದಕ್ಕೆ ಧನೋವಾ ಅವರು ಹಿಂದೂಸ್ತಾನ್ ವಿಮಾನ ಕಾರ್ಖಾನೆ (ಎಚ್ಎಎಲ್) ಅನ್ನು ಶ್ಲಾಘಿಸಿದ್ದಾರೆ.  

"ಎಚ್ಎಎಲ್ ಮತ್ತು ಬಿಆರ್ ಡಿ ( ಅಡಿಪಾಯ ದುರಸ್ತಿ ಡಿಪೋ)ಗಳು ಮಿಗ್ 21 ವಿಮಾನವನ್ನು ನಿರ್ವಹಿಸಿದ ರೀತಿ ಪ್ರಶಂಸನೀಯ. ವಿಮಾನಕ್ಕೆ ಅಗತ್ಯವಿರುವ ಶೇ. 95  ಉಪಕರಣಗಳು ಭಾರತದಲ್ಲೆ ತಯಾರಿಸಲಾಗುತ್ತಿದೆ. ರಷ್ಯಾದವರು ಮಿಗ್ ವಿಮಾನ ಹಾರಾಟ ನಡೆಸುತ್ತಿಲ್ಲ. ಆದರೆ ಭಾರತದಲ್ಲಿ ಇದು ಸಾಧ್ಯವಾಗಿದೆ. ಏಕೆಂದರೆ ನಮ್ಮಲ್ಲಿ ವಿಮಾನ ತಯಾರಿಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳಿವೆ.' ಎಂದು ಧನೋವಾ ಹೇಳಿದ್ದಾರೆ.   

'ನಾವು ವಿಚಾರ ಸಂಕಿರಣಗಳನ್ನು ಆಯೋಜಿಸಲು ಇದೇ ಕಾರಣವಾಗಿದೆ. ನಮ್ಮ ಅಗತ್ಯತೆಗಳಿಗೆ ತಕ್ಕಂತೆ ಉತ್ಪಾದನೆ ಮಾಡಿಕೊಟ್ಟರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವುದಿಲ್ಲ.' ಎಂದು ಎಚ್ಎಎಲ್, ಬಿಆರ್ ಡಿ ಸೇರಿದಂತೆ ಸಂಬಂಧಿತ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ರಕ್ಷಣಾ ಉಪಕರಣಗಳಿಗೆ ವಿದೇಶಗಳ ಅವಲಂಬನೆ ತಪ್ಪಬೇಕು.' ಎಂದು ಅವರು ಹೇಳಿದ್ದಾರೆ. 

ಮಿಗ್ -21 ಯುದ್ಧ ವಿಮಾನ 1973-74ರಲ್ಲಿ ಸೇವೆಗೆ ಸೇರ್ಪಡೆಯಾಗಿತ್ತು. ಕಾರ್ಗಿಲ್  ಕಾರ್ಯಾಚರಣೆಯ ಸಮಯದಲ್ಲಿ ವಾಯುಪಡೆಯ ಮುಖ್ಯಸ್ಥರು 17 ವಿಮಾನಗಳ ಖರೀದಿಗೆ ಆದೇಶ ನೀಡಿದ್ದರು. 

ಪಾಕಿಸ್ತಾನದ ಎಫ್ -16 ಯುದ್ಧವಿಮಾನವನ್ನು ಹೊಡೆದುರುಳಿಸುವುದು ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನದ ಬಹು ದೊಡ್ಡ ಸಾಧನೆ ಎಂಬ ಪ್ರಶಂಸೆ ವ್ಯಕ್ತವಾಗಿದೆ. 

ಬಾಲಾಕೋಟ್ನಲ್ಲಿ ವಿಂಗ್ ಕಮಾಂಡರ್ ವರ್ಧಮಾನ್ ಅವರು ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು