ಬೆಂಗಳೂರು, ೧೧ ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನದ ’ಮತ್ತೆ ಉದ್ಭವ’ಟೀಸರ್ ಬಿಡುಗಡೆಯಾಗಿದ್ದು
ಸಾಕಷ್ಟು ನಿರೀಕ್ಷೆ ಮೂಡಿಸಿದೆ
ತೊಂಭತ್ತರ ದಶಕದಲ್ಲಿ ಅಪಾರ ಜನಪ್ರಿಯತೆಗಳಿಸಿ, ಇಂದಿಗೂ ಸಹ ಎಲ್ಲರ ಮನದಲ್ಲುಳಿದಿರುವ ’ಉದ್ಭವ’ ಚಿತ್ರದ ಮುಂದುವರಿದ ಭಾಗವಾಗಿರುವ ’ಮತ್ತೆ ಉದ್ಭವ’ಅಪ್ಪಟ ಕಮರ್ಷಿಯಲ್ ಚಿತ್ರವಾಗಿ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗುತ್ತಿದೆ ಮಂಗಳವಾರ ಚಿತ್ರದ ಟೀಸರ್ ಬಿಡುಗಡೆಗೊಳಿಸಲು ಆಗಮಿಸಿದ್ದ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ, ಮತ್ತೆ ಉದ್ಭವ’ ತೆರೆ ಕಂಡು ಹೆಚ್ಚಿನ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಲು ಎಂದು ಹಾರೈಸಿದರು
ಇದೇ ವೇಳೆ, ಉದ್ಭವ
ಚಿತ್ರ ನೋಡಿದ್ದೀರಾ ಎಂಬ ಪ್ರಶ್ನೆಗೆ, ಚಿಕ್ಕವನಿದ್ದಾಗ ’ಉದ್ಭವ’ ವೀಕ್ಷಿಸಿದ್ದೆ ಆದರೆ ದೃಶ್ಯಗಳು ಸರಿಯಾಗಿ ಜ್ಞಾಪಕವಿಲ್ಲ, ಆನಂತರ ಬಿಸಿ ಶೆಡ್ಯೂಲ್‌ಗಳ ಕಾರಣ ಸಿನಿಮಾ ನೋಡೋಕೆ ಆಗ್ಲಿಲ್ಲ ಆದರೆ ಬಿಡುವು ಮಾಡಿಕೊಂಡು ಇನ್ನೊಮ್ಮೆ ನೋಡ್ತೀನಿ ಎಂದರು
ಮತ್ತೊಬ್ಬ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಂ ಅವರೂ ಸಹ, ಚಿತ್ರತಂಡಕ್ಕೆ ಶುಭ ಹಾರೈಸಿದರುಚಿತ್ರಕ್ಕೆ ಸಂಗೀತ ಒದಗಿಸಿರುವ ಹಿರಿಯ ಸಂಗೀತ ಸಂಯೋಜಕ, ಕಲಾವಿದ ವಿ ಮನೋಹರ್, ಇತ್ತೀಚಿನ ವರ್ಷಗಳಲ್ಲಿ ಉತ್ತಮ ಚಿತ್ರವೊಂದಕ್ಕೆ ಸಂಗೀತ ನೀಡಿರುವ ತೃಪ್ತಿಯಿದೆ ಇದೊಂದು ವಿಡಂಬನಾತ್ಮಕ ಚಿತ್ರ ಎಂದರು
ನಿರ್ದೇಶಕ ಕೋಡ್ಲು ರಾಮಕೃಷ್ಣ, ಉದ್ಭವಕ್ಕಿಂತಲೂ ನಾಲ್ಕುಪಟ್ಟಿ ಅತ್ಯುತ್ತಮವಾಗಿ ’ಮತ್ತೆ ಉದ್ಭವ’ ಮೂಡಿಬಂದಿದೆ ಎಂದು ಹೇಳಿದರು ಭರವಸೆಯ ನಟ ಪ್ರಮೋದ್ ಸಮರ್ಥ ಅಭಿನಯ ನೀಡಿದ್ದಾರೆ ನಾಯಕಿಯಾಗಿ ಮಿಲನ ನಾಗರಾಜ್ ಕಾಣಿಸಿಕೊಂಡಿದ್ದಾರೆ ಮೋಹನ್ ಛಾಯಾಗ್ರಹಣ, ಕೆಂಪರಾಜು ಸಂಕಲನವಿದೆ.