ಲೋಕದರ್ಶನ ವರದಿ
ಸಂಘಟನೆ ನಿಂತ ನೀರಲ್ಲ, ಕ್ರಿಯಾಶೀಲರಾಗಿ ತೊಡಗಿಕೊಳ್ಳುವವರಿಗೆ ಸ್ಥಾನ ಹುಡುಕಿ ಬರಲಿವೆ
ಕೊಪ್ಪಳ 20: ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.
ಬಸವಣ್ಣನವರ ವಚನದೊಂದಿಗೆ ಮಾತು ಆರಂಭಿಸಿ ಕೊಪ್ಪಳ ಜಿಲ್ಲೆಯಿಂದ ರಾಜ್ಯಕ್ಕೆ ಆರು ಜನರನ್ನು ನಾಮನಿರ್ದೇಶನ ಮಾಡಿದ್ದಾರೆ. ಜಿಲ್ಲಾ ಘಟಕಕ್ಕೆ ಮೂವತ್ನಾಲ್ಕು (34) ಪದಾಧಿಕಾರಿಗಳ ಹುದ್ದೆಗಳನ್ನು, ಹಾಗೂ ಹದಿನಾಲ್ಕು (14) ಜನರನ್ನು ನಾಮನಿರ್ದೇಶಿತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ನೌಕರರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಘಟನೆಗಾಗಿ ದುಡಿಯೋಣ ಕ್ರಿಯಾತ್ಮಕವಾಗಿ ಕೆಲಸ ಮಾಡೋಣ ಎಂದು ರಾಜ್ಯ ಪರಿಷತ್ ಸದಸ್ಯರು ಆಸೀಫ್ ಅಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಒಂದು ನೂರಾ ನಾಲ್ಕು (104) ವರ್ಷಗಳ ಇತಿಹಾಸವಿದೆ. ಇದೀಗ ನಮ್ಮ ರಾಜ್ಯ ಸರ್ಕಾರಿ ನೌಕರರ ಗೃಹನಿರ್ಮಾಣ ಸಂಘದಡಿಯಿಂದ ಸರ್ಕಾರಿ ನೌಕರರ ಸಂಘದಿಂದ ಯೋಗ್ಯ ಬೆಲೆಯಲ್ಲಿ ನಿವೇಶನ ದೊರೆಯುವಂತೆ ಮಾಡುವ ಕನಸನ್ನು ಹೊಂದಿದೆ. ಸರ್ಕಾರಿ ನೌಕರರ 371 ಎ ಸಮರ್ಕವಾಗಿ ಅನುಷ್ಠಾನ ಹಾಗೂ ತಿದ್ದುಪಡಿಗಳಿಗಾಗಿ ಧ್ವನಿ ಎತ್ತುವ ಕೆಲಸವೂ ನಡೆಯುತ್ತಿದೆ. ಸಂಘಟನೆ ಯಾವಗಲೂ ನಿಂತ ನೀರಾಗಬಾರದು, ಸತತವಾಗಿ ಹರಿಯುವ ನೀರಿನಂತೆ ಕ್ರಿಯಾಶೀಲರಾಗಿ ತೊಡಗಿಕೊಳ್ಳುವವರಿಗೆ ಪದಾಧಿಕಾರಿ ಸ್ಥಾನ ಹುಡುಕಿಕೊಂಡು ಬರಲಿವೆ ಎಂದರು.
ನೂತನವಾಗಿ ನೇಮಕವಾದ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರಾಗಿ ಸಿದ್ಧಪ್ಪ ಮೇಳಿ, ಹಿರಿಯ ಉಪಾಧ್ಯಕ್ಷರಾಗಿ ಡಾ.ಕವಿತಾ ಹೆಚ್.ಎಸ್, ಗವೀಶಂಕರ ಕೆ, ಶ್ರೀನಿವಾಸ ಕುಲಕರ್ಣಿ, ಗೌರವ ಸಲಹೆಗಾರರಾಗಿ ಕೆ.ಸಿ. ಉಕ್ಕುಂದ, ಕೃಷ್ಣಮೂರ್ತಿ ದೇಸಾಯಿ, ಉಪಾಧ್ಯಕ್ಷರುಗಳಾಗಿ ಸುರೇಶ ಕೆ, ಗೋಪಾಲಕೃಷ್ಣ ಮುಂಡರಗಿ,ಸುರೇಶ ಮೊರಗೇರಿ, ಹುಸೇನಸಾಬ್ ಕೆ, ಜಗದೀಶ ಪಿ. ಸೂಡಿ, ಗೂಡುಶಾ ಮಕಾನದಾರ, ರೇಣುಕಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಾಮಣ್ಣ ಶ್ಯಾವಿ, ಸರೋಜಾಬಾಯಿ, ಪ್ರಚಾರ ಸಮಿತಿ ಸಂಚಾಲಕರಾಗಿ ನಾಗರಾಜನಾಯಕ ಡಿ.ಡೊಳ್ಳಿನ, ಆಂತರಿಕ ಲೆಕ್ಕಪರಿಶೋಧಕರಾಗಿ ಆರ್.ಹೆಚ್.ನದಾಫ್,ಜಂಟಿ ಕಾರ್ಯದರ್ಶಿಗಳಾಗಿ ರಮೇಶ ಈಶಪ್ಪ ಹುಬ್ಬಳ್ಳಿ, ಪಂಚಪ್ಪ, ಶ್ವೇತಾ ಕಟ್ಟಿಮನಿ, ಬಿ.ಸತ್ಯನಾರಾಯಣ, ಶರಣಪ್ಪ ಪತ್ತಾರ, ಗಂಗಾಧರ ವಿ.ಕೆ, ಸಂಘಟನಾ ಕಾರ್ಯದರ್ಶಿಗಳಾಗಿ ಮಹಾವೀರ ಕುಮಾರ, ದೇವಪ್ಪ ಕೊಳ್ಳದ, ರಮೇಶ ಗಬ್ಬೂರು,ವಿಜಯಕುಮಾರ ಮೈತ್ರಿ, ಬಿ.ಶಿವರಾಜ, ಸಹ ಕಾರ್ಯದರ್ಶಿಗಳಾಗಿ ಶಂಕರ್ಪ, ದೊಡ್ಡನಗೌಡ, ಕಾಶಪ್ಪ ಹಳ್ಳಿ, ಮಂಜುನಾಥ ಬುಲ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಹುಸೇನಬಾಷಾ ರಡ್ಡೇರ ಶರಣಪ್ಪ, ನೇಮಕವಾಗಿದ್ದಾರೆ.
ಜಿಲ್ಲಾ ಘಟಕಕ್ಕೆ ನೂತನವಾಗಿ ಹದಿನಾಲ್ಕು ನಾಮನಿರ್ದೇಶಿತ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೇಣುಕಾ ಕಣಕಾಲ, ಸುಧೀರ ಅವರಾದಿ, ಜಯರಾಮ ಪವಾರ, ಶರಣಪ್ಪ ಮುಕುಂದ, ಸುಜಾತ ಕುರಿ, ತಾಯಮ್ಮ, ಬಸಪ್ಪ ಜೀರ, ಬಾಲನಾಗಮ್ಮ, ಭಾರತಿ ಹವಳೆ,ಶಾಂತಮೂರ್ತಿ, ವನಿತಾ ಪುರಾಣಿಕ, ಸೋಮಶೇಖರ ಸಿ, ಬಸವರಾಜ ಜೋಗಿನ, ಮಂಜುಳಾ
ಕಾರ್ಯಕ್ರಮದಲ್ಲಿ ಕನಕಗಿರಿ ತಾಲೂಕ ಅಧ್ಯಕ್ಷೆ ಶಂಶಾದಬೇಗಂ, ಯಲಬುರ್ಗಾ ತಾಲೂಕ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ ರಾಜ್ಯ ಘಟಕದ ಮಂಜುನಾಥ ಆರೆಂಟನೂರು ರಾಜ್ಯ ಕ್ರೀಡಾ ಕಾರ್ಯದರ್ಶಿ, ಸರ್ದಾರ ಅಲಿ ರಾಜ್ಯ ಕಾರ್ಯದರ್ಶಿ, ನಾಗರಾಜ ಕುಷ್ಟಗಿ ರಾಜ್ಯ ಜಂಟಿ ಕಾರ್ಯದರ್ಶಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಅಮರದೀಪ ಪಿ.ಎಸ್, ಮಂಜುನಾಥ ಎನ್. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೊಳಿಬಸಯ್ಯ, ಹಾಗೂ ವೃಂದ ಸಂಘಗಳ ಅದ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕು.ಅದಿತಿ ಕುಲಕರ್ಣಿ ,ಪ್ರಾರ್ಥನೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ಸ್ವಾಗತಿಸಿದರು. ಶರಣಪ್ಪ ಪತ್ತಾರ ನಿರೂಪಿಸಿದರು.