ಲೋಕದರ್ಶನ ವರದಿ
ಬೆಳಗಾವಿ 10: ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿದಲ್ಲಿ ಮಾತಾ ಗ್ಲಾಸ್ ಆರ್ಟ ಗ್ಯಾಲರಿಯವರು ಚಿತ್ರಕಲಾ ಪ್ರದರ್ಶನವನ್ನು ಆಯೋಜನೆ ಮಾಡಿದರು. ಪತ್ರಕರ್ತ ಶಿವಾನಂದ ಚಿಕ್ಕಮಠ ಸಸ್ಯಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೊದಲು ಕ್ಯಾಮರಾಗಳು ಇಲ್ಲದ ಸಮಯದಲ್ಲಿ ಕಲಾವಿದರಿಗೆ ಹೆಚ್ಚು ಬೇಡಿಕೆ ಇತ್ತು. ಕ್ಯಾಮರಾಗಳು ಬಂದ ಮೇಲೆ ಸ್ವಲ್ಪ ಕಲಾವಿದರಿಗೆ ಬೇಡಿಕೆ ಕಡಿಮೆಯಾಯಿತು ಈಗ ಮತ್ತೆ ಕಲಾವಿದರಿಗೆ ಮತ್ತು ಕಲಾಕೃತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಕಲಾವಿದರು ನಿಮ್ಮ ಬೇಡಿಕೆ ಇನ್ನು ಹೆಚ್ಚು ಹೆಚ್ಚು ಸಿಗಬೇಕಾದರೆ ವಿಭಿನ್ನವಾಗಿ ಯೋಚನೆ ಮಾಡಿ ಚಿತ್ರಗಳನ್ನು ಬಿಡಿಸಿದರೆ ನಿಮ್ಮಗೆ ಇನ್ನು ಹೆಚ್ಚು ಬೇಡಿಕೆ ಸಿಗುವುದು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ. ನಿಮ್ಮ ಕಲಾ ಕೃತಿಗೆಗಳಿಗೆ ಬೆಲೆ ಸಿಗಲು ಮಾತಾ ಗ್ಲಾಸ್ ಆರ್ಟ ಗ್ಯಾಲರಿಯವರು ನಿಮ್ಮಗೆ ವೇದಿಕೆ ನೀಡುವ ಮೂಲಕ ಕಲಾವಿದರನ್ನು ಬೆಳೆಸಲು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ ಈ ಅವಕಾಶ ಬಳಸಿಕೊಂಡು ಕಲೆಯಲ್ಲಿ ಹೊಸ ಹೊಸ ಪ್ರಯೋಗ ಮಾಡುವ ಮೂಲಕ ಜನರಲ್ಲಿ ಕಲೆಯಲ್ಲಿ ಅಭಿರೂಚಿ ಹುಟ್ಟುವಂತೆ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ ಬಸವ ಭೀಮ ಸೇನೆ ಆರ್.ಎಸ್.ದಗರ್ೆ ಮಾತನಾಡಿ ಕಲಾವಿದರೂ ಸಾಮನ್ಯರಿಗೂ ಅರ್ಥವಾಗುವ ರೀತಿಯಲ್ಲಿ ರೀಯಾಲಿಸ್ಟಿಕ್ ಚಿತ್ರಗಳನ್ನು ಬಿಡಿಸಿ ಎಂದ ಅವರು ಅಲ್ಲಮಪ್ರಭುರವರ ಭಾವ ಚಿತ್ರವನ್ನು ಪುರುಷರು ಹಾಗು ಅಕ್ಕಮಾಹಾದೇವಿಯವರ ಭಾವ ಚಿತ್ರವನ್ನು ಮಹಿಳೆಯರು ಬಿಡಿಸಿ ಮಾತಾ ಆರ್ಟ ಗ್ಯಾಲರಿಗೆ ಕಳಿಸಿ ಏಪ್ರಿಲ್ 30 ರಂದು ಜಗಜ್ಯೋತೆ ಬಸವಣ್ಣನವರ ಹುಟ್ಟು ಹಬ್ಬದಂದ್ದು ಉತ್ತಮ ಎರಡು ಕಾಲಕೃತಿಗಳಿಗೆ ಆಯ್ಕೆ ಮಾಡಿ ಬಹುಮಾನ ನೀಡಿ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಕಲಾ ಪ್ರದರ್ಶನದಲ್ಲಿ ಉತ್ತಮ ಕಲಾ ಕೃತಿ ಬಿಡಿಸಿದ ಎಸ್.ಜಿ.ಗಸ್ತಿ, ಪಿ.ವಾಯ್, ಕಾಮತಿ, ಕುಮಾರನಾಯಕ ಎಂ, ಪ್ರವಿನಕುಮಾರ ಅಡವಿ ಪ್ರಶಾಂತ ಅಜರೇಕರ ಇವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ವೇಳೆ ಮಾತಾ ಗ್ಲಾಸ್ ಆಟರ್್ ಗ್ಯಾಲರಿ ಮಾಲಿಕ ನಾಗೇಶ ಚಿಮರೋಲ, ಕಲಾವಿದರಾದ ದೀಲಿಪ ಕಾಳೆ, ರವಿ ಹೊಮಕರ, ಎಸ್.ವ್ಹಿ.ತಿಲಗರ, ಸಂತೋಷ ಮನೋಲಿ, ಶ್ವೇತಾ ಪತ್ತಾರ, ಸ್ನೇಹಾ ಪತ್ತಾರ, ದೀಪಾಲಿ ಕಡೋಲಕರ ಇನ್ನು ಅನೇಕರು ಉಪಸ್ಥಿತರಿದರು.