ಸಂಘಟಿತರಾದಾಗ ಮಾತ್ರ ರಾಜಕೀಯದಲ್ಲಿ ಸೂಕ್ತ ಸ್ಥಾನ: ಸಿ.ಬಸವರಾಜ

ಲೋಕದರ್ಶನ ವರದಿ  

ಕಂಪ್ಲಿ 04: ಛಲವಾದಿ ಸಮುದಾಯದವರು  ಸಂಘಟಿತರಾಗುವ ಮೂಲಕ ರಾಜಕೀಯದಲ್ಲಿಸೂಕ್ತ ಸ್ಥಾನ ಪಡೆಯಬಹುದು  ಎಂದು ಛಲವಾದಿ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಸಿ.ಬಸವರಾಜ ಹೇಳಿದರು. 

ಇಲ್ಲಿನ ರಾಮಲಿಂಗಮ್ಮ ದೇವಸ್ಥಾನ ಆವರಣದಲ್ಲಿ ಏಪರ್ಾಡಿಸಿದ ಛಲವಾದಿ ಮಹಾಸಭಾದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 1.25ಲಕ್ಷ  ಛಲವಾದಿಗಳಿದ್ದರೂ ಇಲ್ಲಿಯಾವರೆಗು ಜಿಪಂ ಸದಸ್ಯರಾಗಲು ಸಾಧ್ಯವಾಗಿಲ್ಲ. ನಮ್ಮಲ್ಲಿರು ಭಿನ್ನಾಭಿಪ್ರಾಯ ಒಡೆದು ಹಾಕಿ ಸಮಾಜದ ಏಳಿಗೆಗಾಗಿ ಅರ್ಹ ರಾಜಕೀಯ ಪ್ರಾತಿನಿಧ್ಯತೆಪಡೆಯಬೇಕಾಗಿದೆ. ಅನ್ಯ ಸಮುದಾಯಗಳಜೊತೆಗೆ ಪರಸ್ಪರ ಹೂಂದಾಣಿಕೆ ಇರಬೇಕು 

ಛಲವಾದಿ ಸಮಾಜದ ಮುಖಂಡರಾದ ಸಿ.ವೆಂಕಟೇಶ್, ಎ.ರೇಣುಕಪ್ಪ, ಡಾ.ಮಲ್ಲಪ್ಪ, ಪಿ.ಸಿ.ಅಂಜಿನಪ್ಪ, ಶಿಕ್ಷಕ ಸಿ.ರಮೇಶ್ ಸೇರಿ ಅನೇಕರು ಮಾತನಾಡಿ, ಗ್ರಾಮೀಣ  ಭಾಗದ ಛಲವಾದಿ ಸಮುದಾಯದವರನ್ನು ಕಡೆಗಣಿಸಬಾರದು. ಯುವಜನರಿಗೆ ಉನ್ನತ ಶಿಕ್ಷಣ ಮತ್ತು ಹುದ್ದೆಗಳ ತರಬೇತಿ ನೀಡುವಲ್ಲಿ, ಶೈಕ್ಷಣಿಕ, ರಾಜಕೀಯ ಮತ್ತು ಉದ್ಯೋಗ ಮುಖ್ಯವಾಹಿನಿಯತ್ತ ಕರೆತರುವಲ್ಲಿ ಜಿಲ್ಲಾ ಸಮಿತಿ ಶ್ರಮಿಸಬೇಕು. ಅಂಬೇಡ್ಕರ್ ಚಿಂತನೆ ಮತ್ತು ಆದರ್ಶಗಳನ್ನು ಮನೆ ಮನೆಗೂ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ  ನೀಡಿದರು. 

    ಸಭೆಯಲ್ಲಿ ಛಲವಾದಿ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಸಿ.ಬಸವರಾಜ ಸೇರಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಛಲವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಹೊಸಪೇಟೆಯ ಸಿ.ಸೋಮಶೇಖರ್, ಶಿರಗುಪ್ಪದ ಸಿ.ರಾಮಣ್ಣ, ಕಾರ್ಯದಶರ್ಿಗಳಾದ ಸಿ.ವೆಂಕಟೇಶ್, ಬಾವಿಕಟ್ಟೆ ದೇವೇಂದ್ರ, ನಗರ ಅಧ್ಯಕ್ಷ ನಾಗೇಂದ್ರ, ಶಿರುಗುಪ್ಪದ ತಿಮ್ಮಯ್ಯ, ನಗರ ಸಭೆ ಸದಸ್ಯ ಗಣೇಶ್, ಹೊಸಪೇಟೆಯ ಸಿ.ಡಿ.ಈರಣ್ಣ, ಕುರುಗೋಡಿನ ಸಿ.ರಾಮಣ್ಣ, ಕಂಪ್ಲಿ ತಾಲೂಕು ಸದಸ್ಯ ನೆಲ್ಲೂಡಿ ಲೋಕೇಶ್, ಶಂಕ್ರಪ್ಪ, ಬೆಳ್ಳಕ್ಕಿ ಹುಸೇನಪ್ಪ, ಟಿ.ವಿರುಪಣ್ಣ, ಎ.ರೇಣುಕಪ್ಪ, ಬಿ.ಚನ್ನಬಸವ, ಮಾದನೂರು ಮಹೇಶ್, ಸಣಾಪುರ ಶಿವಕುಮಾರ್, ಜವುಕು ಬಸವರಾಜ, ಹೊನ್ನಳ್ಳಿ ಭೀಮಣ್ಣ, ಸಿ.ರಮೇಶ್, ಪಿ.ಸಿ.ಅಂಜಿನಪ್ಪ, ಸಿ.ಚನ್ನಪ್ಪ, ಎಲ್.ಸಂತೋಷ್ ಸೇರಿ ಕಂಪ್ಲಿ ಹಾಗೂ ಜಿಲ್ಲೆಯ ಕಡೆಗಳಿಂದ ಆಗಮಿಸಿದ ಛಲವಾದಿ ಸಮುದಾಯದವರು ಪಾಲ್ಗೊಂಡಿದ್ದರು.