ನವದೆಹಲಿ, ಡಿ 24 ಪ್ರಸಕ್ತ ವರ್ಷವನ್ನು ಹಿಂದೆ ತಿರುಗಿ ನೋಡಿದಾಗ
ಐಸಿಸಿ ವಿಶ್ವಕಪ್ ಸೆಮಿಫೈನಲ್ ಹಣಾಹಣಿಯಲ್ಲಿ ಸೋಲು ಅನುಭವಿಸಿದ್ದ ತಪ್ಪನ್ನು ಭಾರತ ತಂಡ ತಿದ್ದಿಕೊಳ್ಳಬೇಕು
ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆದಿದ್ದ
2019 ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು.
ಅದರಂತೆ, ಗುಂಪು ಹಂತದ ಅಂಕಪಟ್ಟಿಯಲ್ಲಿ ಕೊಹ್ಲಿ ಪಡೆ ಅಗ್ರ ಸ್ಥಾನ ಪಡೆದಿತ್ತು. ಆದರೆ, ಸೆಮಿಫೈನಲ್
ಪಂದ್ಯದಲ್ಲಿ ಕಿವೀಸ್ ವಿರುದ್ಧ 18 ರನ್ ಗಳಿಂದ ಸೋಲು ಅನುಭವಿಸಿ ಆಘಾತ ಅನುಭವಿಸಿತ್ತು. ಓಲ್ಡ್ ಟ್ರಾಫರ್ಡ್ ನಲ್ಲಿ ಮಳೆಯ ನಡುವೆ ನಡೆದಿದ್ದ ಎರಡು
ದಿನಗಳ ಪಂದ್ಯದಲ್ಲಿ ಭಾರತ ಅಂತಿಮವಾಗಿ ಸೋತು ನಿರಾಸೆ ಅನುಭವಿಸಿತ್ತು. “ಈ ಟೂರ್ನಿಯ ಉಪಾಂತ್ಯದಲ್ಲಿನ ಸೋಲು ಅನುಭವಿಸಿದ್ದ ಒಂದು
ಅಂಶವನ್ನು ಭಾರತ ತಂಡ ತಿದ್ದಿಕೊಳ್ಳಬೇಕು. ಅದಕ್ಕಾಗಿ ತನ್ನ ಗಮನ ಕೇಂದ್ರಿಕರಿಸುತ್ತಿದೆ. ಆ ಕಠಿಣ
ಸಂದರ್ಭವನ್ನು ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ
ಬ್ಲೂಸ್ ಶೋದಲ್ಲಿ ಕೊಹ್ಲಿ ತಿಳಿಸಿದರು. ವೆಸ್ಟ್
ಇಂಡೀಸ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಬಳಿಕ ಮಾತನಾಡಿದ್ದ ವಿರಾಟ್, “ ಭಾರತೀಯ
ಕ್ರಿಕೆಟ್ ನ ಅತ್ಯುತ್ತಮ ವರ್ಷಗಳಲ್ಲಿ 2019ಕೂಡ ಒಂದು ಎಂದಿದ್ದರು. ಈ ವರ್ಷ ಭಾರತ ಆಡಿದ್ದ ಎಂಟು ಟೆಸ್ಟ್ ಪಂದ್ಯಗಳಲ್ಲಿ ಏಳರಲ್ಲಿ
ಜಯ ಸಾಧಿಸಿದೆ. ಒಂದು ಡ್ರಾನಲ್ಲಿ ಮುಗಿದಿತ್ತು. 28 ಏಕದಿನ ಪಂದ್ಯಗಳಲ್ಲಿ 19ರಲ್ಲಿ ಜಯ ಹಾಗೂ 16
ಟಿ-20 ಪಂದ್ಯಗಳಲ್ಲಿ ಒಂಬರಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ.