ಪುಣೆ, ಅ.13: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 137 ರನ್ ಜಯ ಸಾಧಿಸಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ತಂಡವನ್ನು ಬಲ ಪಡಿಸುವುದೇ ಏಕೈಕ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ವಿರಾಟ್, "ನಾಯಕನಾಗಿ ತಂಡವನ್ನು ಮುನ್ನಡೆಸುವುದ ದೊಡ್ಡ ಜವಾಬ್ದಾರಿ. ತಂಡದ ಪರ ದೊಡ್ಡ ಸ್ಕೋರ್ ಮಾಡುವುದು ನನ್ನ ಗುರಿ ಎಂದಿದ್ದಾರೆ.
ನಾನು ಅಜಿಂಕ್ಯ ರಹಾನೆ ಅವರೊಂದಿಗೆ ಬ್ಯಾಟಿಂಗ್ ಆಡುವುದನ್ನು ಆನಂದಿಸುತ್ತೇನೆ. ರಹಾನೆ ಅವರ ಮನಸ್ಥಿತಿ ಅತ್ಯಂತ ಸಕಾರಾತ್ಮಕವಾಗಿದೆ. ನಾವು ವಿಕೆಟ್ಗಳ ನಡುವೆ ಸಾಕಷ್ಟು ಚೆನ್ನಾಗಿ ಓಡುತ್ತೇವೆ ಎಂದು ಹೇಳಿದ್ದಾರೆ.
ವೃದ್ಧಿಮಾನ್ ಸಹಾ ಅವರು ವಿಕೆಟ್ನ ಹಿಂದೆ ಉತ್ತಮ ಕೆಲಸ ಮಾಡಿದ್ದಾರೆ. ಮೊದಲ ಟೆಸ್ಟ್ನಲ್ಲಿ ಸಹಾ ಸ್ವಲ್ಪ ಹಿನ್ನಡೆ ಅನುಭವಿಸಿದಂತೆ ಕಂಡು ಬಂದಿತು. ರವಿಚಂದ್ರನ್ ಅಶ್ವಿನ್ ಅದ್ಭುತ ಬೌಲಿಂಗ್ ಮಾಡಿದರು. ತಂಡದ ಜಯದಲ್ಲಿ ಆಟಗಾರರು ಶ್ರಮಿಸುತ್ತಿದ್ದಾರೆ. ಟೆಸ್ಟ್ ಸರಣಿಯನ್ನು 3-0ಯಿಂದ ಗೆಲ್ಲುವುದೇ ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಸಾಧಿಸಿದ ಸತತ ನಾಲ್ಕನೇ ಜಯ ಇದಾಗಿದೆ. ಈ ಗೆಲುವಿನಿಂದ ಭಾರತ 40 ಅಂಕಗಳನ್ನು ಪಡೆದಿದೆ ಮತ್ತು ಈಗ 200 ಅಂಕಗಳನ್ನು ಹೊಂದಿದೆ.