ಚುನಾವಣಾ ಫಲಿತಾಂಶದಿಂದ ಮಾತ್ರ ಸ್ಪಷ್ಟ ಚಿತ್ರಣ: ಕುಮಾರ ಸ್ವಾಮಿ

Kumaraswamy

ಕಾಗವಾಡ, ನ 30- ಡಿಸೆಂಬರ್ 9 ರಂದು ವಿಧಾನಸಭಾ ಉಪ ಚುನಾವಣೆಗಳ ಫಲಿತಾಂಶ ಹೊರ ಬಂದ ನಂತರವಷ್ಟೇ ರಾಜಕೀಯ ಪರಿಸ್ಥಿತಿ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಅಲ್ಲಿಯ ತನಕ ಕಾದು ನೋಡುವುದೇ ನಮ್ಮ ಮುಂದಿರುವ ಮಾರ್ಗ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. 

 ಕಾಗವಾಡದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಕುಮಾರಸ್ವಾಮಿ ಬಳಿಕ ಮಾಧ್ಯಮ  ಪ್ರತಿನಿಧಿಗಳೊಂದಿಗೆ ಮಾತನಾಡಿ, ಚುನಾವಣೆ ನಂತರ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಕಾಯ್ದು ನೋಡಬೇಕು. ರಾಜಕೀಯ ನಾಯಕರ ಹೇಳಿಕೆಗಳಿಗಿಂತ ಫಲಿತಾಂಶ ಸ್ಪಷ್ಟ ಚಿತ್ರಣ ನೀಡಲಿದೆ ಎಂದರು. 

ಉಪ ಚುನಾವಣೆಯ ನಂತರ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಯಡಿಯೂರಪ್ಪ ಅವರ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಸರ್ಕಾರ ಬದಲಾಗಿದೆ ಎಂದು ಸಿದ್ಧರಾಯ್ಯ ಹೇಳಿದರೆ, ಸರ್ಕಾರ ಮೂರುವರೆ ವರ್ಷ ಸರ್ಕಾರ ಗಟ್ಟಿಯಾಗಿ ಉಳಿಯಲಿದೆ ಎಂದು ಯುಡಿಯೂರಪ್ಪ ಹೇಳುತ್ತಿದ್ದಾರೆ. ಯಾವದಕ್ಕೂ ಕಾದು ನೋಡಬೇಕಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಾಗೂ ಅತೀವೃಷ್ಟಿಯಿಂದ ನಲುಗಿಹೋಗಿರುವ ಸಂದರ್ಭದಲ್ಲಿ ರಾಜಕೀಯ ನಾಯರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಗಿರಿಸಿ, ಸಂಕಷ್ಟದಲ್ಲಿರುವ ಜನರ ಬದುಕು ಕಟ್ಟಿಕೊಡುವತ್ತ ಲಕ್ಷ ವಹಿಸಬೇಕಾದ ಅಗತ್ಯವಿದೆ ಎಂದು ಕುಮಾರ ಸ್ವಾಮಿ ಹೇಳಿದರು.