ವಿಜಯಪುರ 12 : ಜಿಲ್ಲೆಯಲ್ಲಿಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿವಾರ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ ಎಂ. ಗುಣಾರಿ ಹೇಳಿದರು.
ಇಂದು ಬುಧವಾರ ನಗರದ ಬಿ.ಎಲ್.ಡಿ.ಇಡಿಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದಲ್ಲಿ ನೇತ್ರಚಿಕಿತ್ಸಾ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ಗ್ಲೂಕೊಮಾ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆ ನೇತ್ರ ರೋಗಿಗಳಿಗಾಗಿ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ರೋಗಿಗಳಿಗೆ ನೆರವಾಗುತ್ತಿದೆ. ಈಗ ಆಯೋಜಿಸಲಾಗಿರುವ ಉಚಿತ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಆಸ್ಪತ್ರೆಯ ನೇತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥೆಡಾ. ರೇಖಾ ಮುಧೋಳ ಮಾತನಾಡಿ, ದೇಶದಲ್ಲಿ 4.50 ಮಿಲಿಯನ್ ಮತ್ತು ವಿಶ್ವದಲ್ಲಿ 78 ಮಿಲಿಯನ್ ಜನರುಗ್ಲೊ ಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದೃಷ್ಠಿದೋಷ ಸರಿಪಡಿಸದಿದ್ದರೆ ನರಗಳ ದೌರ್ಬಲ್ಯದಿಂದ ಅಂಧತ್ವಕ್ಕೆ ಕಾರಣವಾಗಬಹುದು. ಗ್ಲೊಕೋಮಾ ಕಾಯಿಲೆ ಹೊಂದಿರುವ ರೋಗಿಗಳಲ್ಲಿ ತಲೆನೋವು ದೃಷ್ಟಿಕ್ಷೀಣಿಸುವುದು ಹಾಗೂ ಕೆಲವರಲ್ಲಿ ರೋಗದ ಲಕ್ಷಣಗಳು ಕಂಡು ಬರದಿರಬಹುದು. ಈ ಕಾಯಿಲೆಯು 40 ವರ್ಷಕ್ಕೂ ಮೇಲ್ಪಟ್ಟಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೊಗಿಗಳಲ್ಲಿ ಹಾಗೂ ದಪ್ಪ ಕನ್ನಡಕವನ್ನು ಬಳಸುವವರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆಎಂದು ಹೇಳಿದರು. ಈ ಸಂದರ್ಭದಲ್ಲಿಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ವೈದ್ಯರಾದಡಾ. ವಲ್ಲಭಾ ಕೆ. ಡಾ. ಸುನೀಲ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.