ಅರ್ಜೆಂಟಿನಾದಲ್ಲಿ ಸೋಂಕಿತರ ಸಂಖ್ಯೆ 5208 ಕ್ಕೆ ಏರಿಕೆ

ಬ್ಯೂನಸ್ ಏರಿಸ್, ಮೇ 7,ಅರ್ಜೆಂಟಿನಾದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5208 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೂ ಒಂದು ದಿನ ಹಿಂದೆ 134 ಪ್ರಕರಣಗಳು ವರದಿಯಾಗಿದ್ದು ಇಬ್ಬರು ಮೃತಪಟ್ಟಿದ್ದರು.ಬುಧವಾರ ಸಾವಿನ ಸಂಖ್ಯೆಯೂ ಕೂಡ ಏರಿಕೆಯಾಗಿದೆ. 9 ಜನರು ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 273 ಕ್ಕೆ ಏರಿಕೆಯಾಗಿದೆ.