ಅಮೆರಿಕಾದಲ್ಲಿ 73 ಸಾವಿರಕ್ಕೇರಿದ ಮೃತರ ಸಂಖ್ಯೆ - ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

ಮಾಸ್ಕೋ, ಮೇ ೭, ಅಮೆರಿಕಾದಲ್ಲಿ  ಕೊರೊನಾ ವೈರಸ್  ರೋಗ(ಕೋವಿಡ್-೧೯)ದಿಂದ  ಮೃತಪಟ್ಟವರ ಸಂಖ್ಯೆ  ೭೩ ಸಾವಿರ ಗಡಿ  ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಅಮೆರಿಕಾದಲ್ಲಿ  ಕೊರೊನಾ ವೈರಸ್ ನಿಂದ  ೭೩,೦೩೯ ಮಂದಿ ಮೃತಪಟ್ಟಿದ್ದು,  ಕೊರೊನಾ  ವೈರಸ್ ದೃಢಪಟ್ಟ ಪ್ರಕರಣಗಳ  ಸಂಖ್ಯೆ ೧,೨೨೩,೪೬೮ಕ್ಕೆ  ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ ೧೮೯,೯೧೦ ಕೋವಿಡ್  ಸೋಂಕಿತರು  ಗುಣ ಮುಖ ಹೊಂದಿ ವಿವಿಧ ಆಸ್ಪತ್ರೆಗಳಿಂದ  ಬಿಡುಗಡೆಹೊಂದಿದ್ದಾರೆ ಎಂದು ವಿಶ್ವವಿದ್ಯಾಲಯ ಅಂಕಿ ಅಂಶ  ನೀಡಿದೆ.