ದೇಶದಲ್ಲಿ ಮತ್ತಷ್ಟು ಹೆಚ್ಚಿದ ಕರೋನ ಸೋಂಕಿತರ ಸಂಖ್ಯೆ

ನವದೆಹಲಿ, ಏ 3,ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50,ಸಾವಿರಕ್ಕೂ  ಮಂದಿಯನ್ನು ಈವರೆಗೆ  ಬಲಿ ಪಡೆದಿರುವ ಕೊರೋನಾ ಹಾವಳಿ ದೇಶದಲ್ಲಿ ಹೆಚ್ಚುತ್ತಿದೆ .ದೇಶದಲ್ಲಿ ಈವರೆಗೆ 2543 ಪ್ರಕರಣ ಪತ್ತೆಯಾಗಿವೆ ಎಂದು ಇತ್ತೀಚಿನ ವರದಿಯಿಂದ  ತಿಳಿದು ಬಂದಿದೆ. ಕರ್ನಾಟಕದಲ್ಲಿ ಈವರೆಗೆ  ಒಟ್ಟು 125 ಪ್ರಕರಣಗಳು ಖಚಿತವಾಗಿದ್ದು , 3 ಸಾವಿನ  ಪ್ರಕರಣ ದಾಖಲಾಗಿದೆ.ಕರೋನ  ಮಹಾಮಾರಿಗೆ ದೇಶದಲ್ಲಿ  ಈವರೆಗೆ 72 ಮಂದಿ ಸಾವನ್ನಪ್ಪಿದ್ದಾರೆ.