ನವದೆಹಲಿ, ಏ 12,ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ಈಗ 8ಸಾವಿರ ದಾಟಿದ್ದು, ಸಾವಿನ ಸಂಖ್ಯೆ 273 ಕ್ಕೆ ಏರಿಕೆಯಾಗಿದೆ . ಮೊದಲ ಹಂತದ 21 ದಿನಗಳ ಲಾಕ್ ಡೌನ್ ಮುಗಿಯಲು ಇನ್ನೂ ಎರಡು ದಿನ ಬಾಕಿ ಇರುವಂತೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಆತಂಕ ಮೂಡಿಸುತ್ತಿದೆ. ಹೊಸ ಮಾಹಿತಿಯ ಪ್ರಕಾರ ಈಗ ಸೋಂಕಿತ ಸಂಖ್ಯೆ 8, 356ಕ್ಕೆ ತಲುಪಿದೆ. ನಿನ್ನೆ ಒಂದೇ ದಿನ ದಿನದಲ್ಲಿ 40 ಸಾವುಗಳು ಮತ್ತು 1,000 ಕ್ಕೂ ಹೆಚ್ಚು ಸೊಂಕಿನ ಪ್ರಕರಣಗಳು ವರದಿಯಾಗಿತ್ತು ಒಟ್ಟು 642 ಕರೋನ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿತ್ತು . ಲಾಕ್ ಡೌನ್ ವಿಸ್ತರಣೆ ಮತ್ತು ಪಾಲಿಸಬೇಕಾದ ಮಾರ್ಗ ಸೂಚಿಯನ್ನು ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಪ್ರಕಟ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ .