ದೇಶದಲ್ಲಿ 20 ಸಾವಿರ ಗಡಿದಾಟಿದ ಕರೋನ ಸೋಂಕಿತರ ಸಂಖ್ಯೆ

ನವದೆಹಲಿ,  ಏ 22,ದೇಶದಲ್ಲಿ  ಕರೋನ  ಹಾವಳಿ  ಹೆಚ್ಚಾಗಿದ್ದು  ಈವರೆಗೆ  ಸೋಂಕಿಗೆ ತುತ್ತಾದವರ  ಸಂಖ್ಯೆ 20,ಸಾವಿರ ಗಡಿ ದಾಟಿದೆ. ಈ ಅವಧಿಯಲ್ಲಿ 3,975 ಜನರು ಗುಣಮುಖರಾಗಿದ್ದರೆ,   640  ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಹೇಳಿದೆ. ಕೊರೊನಾ ಹಾವಳಿ  ಹೆಚ್ಚಳದ ಹಿನ್ನಲೆಯಲ್ಲಿ  ದೇಶಾದ್ಯಂತ ಮುಂದಿನ ತಿಂಗಳ  ಮೂರರ ವರೆಗೆ  ಲಾಕ್ ಡೌನ್ ಘೋಷಣೆ ಮಾಡಲಾಗಿದೆ.  ಸೋಂಕಿತರ ಪ್ರಕರಣಗಳ ಸಂಖ್ಯೆ  ಈವರೆಗೆ 20,ಸಾವಿರ  ಗಡಿ ದಾಟಿದೆ. ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ ಹೊಸದಾಗಿ 10 ಕೊರೊನಾ ಪ್ರಕರಣ  ವರದಿಯಾಗಿದ್ದು  ಸೋಂಕಿತರ ಸಂಖ್ಯೆ 418 ಕ್ಕೆ ಏರಿಕೆಯಾಗಿದೆ. 17 ಮಂದಿ ಸಾವನ್ನಪ್ಪಿದ್ದು, ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 11 ನೇ ಸ್ಥಾನದಲ್ಲಿದೆ.