ದೇಶದಲ್ಲಿ 10 ಸಾವಿರ ದಾಟಿದ ಕರೋನ ಸೋಂಕಿತರ ಸಂಖ್ಯೆ

ನವದೆಹಲಿ, ಎಪ್ರಿಲ್ 14,  ದೇಶದಲ್ಲಿ 21 ದಿನಗಳ ಲಾಕ್ ಡೌನ್  ಮುಗಿಯುವ ವೇಳೆಗೆ   ಕರೋನ ಸೋಂಕಿತರ  ಹೆಚ್ಚಾಗಿದ್ದು  ಮಂಗಳವಾರವೇ     10,ಸಾವಿರ  ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 339 ಕ್ಕೆ ಏರಿಕೆಯಾಗಿದೆ  ಎಂದು ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.  ಸಕ್ರಿಯ ಪ್ರಕರಣಗಳು ಈಗ ದೇಶಾದ್ಯಂತ 8,988 ರಷ್ಟಿದ್ದರೆ, 1,035 ಜನರು  ಮಾರಕ ಕರೋನ ದಿಂದ ಗುಣಮುಖರಾಗಿ ಮನಗೆ ಹಿಂತಿರುಗಿದ್ದಾರೆ . ಈ ನಡುವೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣ ವರದಿಯಾಗಿದೆ ಅದೆ ರೀತಿ  ಅತಿ ಹೆಚ್ಚು 160 ಕ್ಕೂ ಹೆಚ್ಚು ಸಾವಿನ ಪ್ರಕಣಗಳು ಅದೇ  ರಾಜ್ಯದಲ್ಲಿ ಸಂಭವಿಸಿದೆ. ರಾಷ್ಟ್ರ ರಾಜಧಾನಿ 28 ಸಾವುಗಳೊಂದಿಗೆ 1,510 ಪ್ರಕರಣಗಳನ್ನು ದಾಖಲಿಸಿದ್ದರೆ  ತಮಿಳುನಾಡಿನಲ್ಲಿ 1,173 ಪ್ರಕರಣ ದಾಖಲಾಗಿದ್ದು  ಇಲ್ಲಿ  ಈವರೆಗೆ 11 ಸಾವು ವರದಿಯಾಗಿದೆ.