ಬಳ್ಳಾರಿಯಲ್ಲಿ ಕರೋನ ಸೋಂಕಿತರ ಸಂಖ್ಯೆ 38 ಕ್ಕೆ ಏರಿಕೆ

ಬಳ್ಳಾರಿ, ಮೇ.27, ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.  ಇತ್ತೀಚೆಗೆ ಉತ್ತರ ಪ್ರದೇಶದಿಂದ ಬಂದು ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ ಕರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.ಉತ್ತರ ಪ್ರದೇಶದಿಂದ ಬಂದ ವ್ಯಕ್ತಿ ಕ್ವಾರಂಟೈನ್ನಲ್ಲಿದ್ದರು. ನಂತರ ಅವರ ಗಂಟಲು ದ್ರವವನ್ನು ಕರೋನ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕಿತ ವ್ಯಕ್ತಿ ಮೊದಲೇ ಕ್ವಾರಂಟೈನ್ ನಲ್ಲಿ ಇದಿದ್ದರಿಂದ 100ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್  ವಲಯ ಎಂದು ಘೋಷಿಸಲಾಗಿಲ್ಲ  ಸೋಂಕು ದೃಢಪಡುತ್ತಿದ್ದಂತೆ ರೋಗಿಯನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 38 ಆಗಿದ್ದು, 16 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.