ಜರ್ಮನಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,83,979

ಮಾಸ್ಕೊ, ಜೂನ್ 7, ಜರ್ಮನಿಯಲ್ಲಿ ಕಳೆದ 24 ಗಂಟೆಗಳಲ್ಲಿ 301 ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು. ಒಟ್ಟು ಪೀಡಿತರ ಸಂಖ್ಯೆ 1,83,979ಕ್ಕೇ ಏರಿದೆ ಎಂದು ಆರೋಗ್ಯ ಇಲಾಖೆ ಭಾನುವಾರ ಮಾಹಿತಿ ನೀಡಿದೆ. ಈ ಅವಧಿಯಲ್ಲಿ 22 ಸಾವು ಸಂಭವಿಸಿದ್ದು, 8,668 ಜನರು ಮೃತ ಪಟ್ಟಿದ್ದಾರೆ. ದೇಶದಲ್ಲಿ 1,69,000 ಜನರು ಚೇತರಿಸಿಕೊಂಡಿದ್ದಾರೆ. ಒಂದು ದಿನದ ಹಿಂದೆ 407 ಪ್ರಕರಣ ದೇಶದಲ್ಲಿ ವರದಿಯಾಗಿದ್ದವು. ಅಲ್ಲದೆ 30 ಜನರು ಸಾವನ್ನಪ್ಪಿದ್ದರು.

ಬವೇರಿಯಾ (47,334), ನಾರ್ತ್ ರೈನ್-ವೆಸ್ಟ್ ಫಾಲಿಯಾ (38,616) ಮತ್ತು ಬಾಡೆನ್-ವುರ್ಟೆಂಬರ್ಗ್ (34,912) ಗಳಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಬರ್ಲಿನ್‌ನಲ್ಲಿ 6,997 ಪ್ರಕರಣಗಳಿವೆ. ಕೊರೊನಾ ವೈರಸ್ ಹರಡುವಿಕೆಯನ್ನು ಮನಗೊಂಡು ಜರ್ಮನಿಯಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಏಪ್ರಿಲ್ ನಲ್ಲಿ ರೋಗ ಹರಡುವು ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತಿದ್ದರಿಂದ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಲಾಯಿತು. ದೇಶದಲ್ಲಿ ಅಂಗಡಿಗಳು ಮತ್ತು ಶಾಲೆಗಳು, ಜೊತೆಗೆ ಆಟದ ಮೈದಾನಗಳು, ಚರ್ಚುಗಳು ಮತ್ತು ವಸ್ತುಸಂಗ್ರಹಾಲಯಗಳು ಈಗಾಗಲೇ ಪುನಃ ತೆರೆಯಲ್ಪಟ್ಟಿವೆ.