ಜರ್ಮನಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.66 ಲಕ್ಷ

ಬರ್ಲಿನ್, ಮೇ 7, ಕೊರೊನಾ ವೈರಸ್ "ಕೋವಿಡ್-19" ಮಹಾಮಾರಿ ಸುಮಾರು ದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ಜರ್ಮನಿಯಲ್ಲೂ ಈ ಸೋಂಕಿಗೆ 1,66,091 ಒಳಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,284 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಬಗ್ಗೆ ರಾಬರ್ಟ್ ಕೋಚ್ ಸಂಸ್ಥೆ ಗುರುವಾರ ಮಾಹಿತಿ ತಿಳಿಸಿದೆ. ಇನ್ನು ದೇಶದಲ್ಲಿ ಕೊರೊನಾ ವೈರಸ್ ಗೆ ಒಂದೇ ದಿನ 123 ಜನ ಸಾವನ್ನಪ್ಪಿದ್ದು, ಒಟ್ಟು ಸತ್ತವರ ಸಂಖ್ಯೆ 7,119ಕ್ಕೆ ಏರಿದೆ. ದೇಶದಲ್ಲಿ ಮಹಾಮಾರಿ ಕಾಣಿಸಿಕೊಂಡ ದಿನದಿಂದ ಈ ವರೆಗೆ ಸುಮಾರು 1.39 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇತ್ತೀಚಿನ ಮಾಹಿತಿಯ ಪ್ರಕಾರ, ಈವರೆಗೆ ವಿಶ್ವದಾದ್ಯಂತ 3.7 ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕಾಯಿಲೆಯಿಂದ 2.63 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.