ನೂತನ ಶಿಲಾ ಮಂದಿರದ ಕಳಸಾರೋಹಣ

ರಾಣೇಬೆನ್ನೂರು27: ಆಧುನಿಕಯಗದಲ್ಲಿ ಆಧ್ಯಾತ್ಮಿಕತೆಯನ್ನು ಮರೆತು ಧರ್ಮದ ತಳಹದಿಯಲ್ಲಿ ಸಾಗದೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗಿ ತಮ್ಮ ಜೀವನವನ್ನು ಅಧೋಗತಿಗೆ ಕೊಂಡೊಯ್ಯುತ್ತಿರುವುದು ವಿಷಾಧನೀಯ. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮರೆಮಾಚುವಂತಹ ಪ್ರವೃತ್ತಿ ಬೆಳೆಸಿಕೊಂಡರೆ ಅಂತವರು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಾರೆ ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

    ಸೋಮವಾರ ತಾಲೂಕಿನ ಯಲ್ಲಾಪುರ(ವೈಟಿ ಹೊನ್ನತ್ತಿ)ಗ್ರಾಮದಲ್ಲಿ ನಡೆದ ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಾರುತಿ ದೇವರ, ಹುಲಿಗೆಮ್ಮ ದೇವರ ಪ್ರಾಣ ಪ್ರತಿಷ್ಠೆ, ನೂತನ ಶಿಲಾ ಮಂದಿರದ ಕಳಸಾರೋಹಣ ಮತ್ತು ಶಿಲಾ ಮಂದಿರದ ಲೋಕಾರ್ಪಣೆ ಹಾಗೂ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಮಂಗಲೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಹಾಗೂ ಸಂಪ್ರದಾಯವನ್ನು ರೂಢಿಸಿಕೊಂಡು ಆಧ್ಯಾತ್ಮಿಕತೆಯಿಂದ ಧರ್ಮದ ತಳಹದಿಯಲ್ಲಿ ನಡೆದಾಗ ಅಂತವರ ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ ತಂದೆತಾಯಿಯರನ್ನು ಪೂಜಿಸುವ ಪ್ರವೃತ್ತಿ ರೂಢಿಸಿದಾಗ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶವಂತರಾಗಿರಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ಹೇಳಿದರು.

     ಧಾಮರ್ಿಕತೆಯ ಜೊತೆಗೆ ಮನುಕುಲದ ಉದ್ದಾರಕ್ಕಾಗಿ ಪರಿಸರ ಸಂರಕ್ಷಣೆ ಮಾಡುವ ಮನೋಭಾವ ಸರ್ವರಲ್ಲೂ ಬರಬೇಕು. ಗಿಡ ಮರಗಳನ್ನು ಬೆಳೆಸಿ ಪೋಷಿಸಿದಾಗ ನಾವು ಸಮೃದ್ಧಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

    ದೇವರಲ್ಲಿ ನಂಬಿಕೆ ಇರಬೇಕು. ನಾಮಗಳು ಹಲವು ದೇವರು ಮಾತ್ರ ಒಬ್ಬನೆ. ಭಗವಂತನಲ್ಲಿ ನಂಬಿಕೆ ಇದ್ದರೆ ಅದೇ ನಂಬಿಕೆಯಿಂದ ತಮಗೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.

      ಗೋ ಮಾತೆಯನ್ನು ಪೂಜಿಸುವುದರ ಜೊತೆಗೆ ಅವುಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರಲ್ಲೂ ಬರಬೇಕು. ನಮ್ಮ ದೇಶದಲ್ಲಿ ಗೋವುಗಳಿಗೆ ಪವಿತ್ರವಾದ ಸ್ಥಾನವಿದೆ. ತಾಯಿಗಿಂತ ಮಿಗಿಲೂ ಗೋ ಮಾತೆಯಾಗಿದ್ದಾಳೆ. ಅನಾಥರಿಗೆ ಹಾಗೂ ಸರ್ವರಿಗೂ ಗೋಮಾತೆ ಹಾಲುಣಿಸುತ್ತಾಳೆ ಅಂತಹ ಗೋ ಮಾತೆಯ ರಕ್ಷಣೆಯನ್ನು ಸರ್ವರೂ ಮಾಡಬೇಕು. ಗೋಮಾತೆಗಳು ಇಲ್ಲದೆ ಹೋದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ ಎಂದು ಶ್ರೀಗಳು ಹೇಳಿದರು.

     ಚೌಡಯ್ಯದಾನಪುರದ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹನುಮನಹಳ್ಳಿಯ ಸಿದ್ದರಾಮ ಹಾಲಶಿವಯೋಗಿಗಳು, ಸಂಕದಾಳದ ಮುದಕೇಶ್ವರ ಹಾಲಶಿವಯೋಗಿಗಳು, ಗುಡ್ಡದ ಆನ್ವೇರಿಯ ಶಿವಯೋಗಿಶ್ವರ ಮಹಾಸ್ವಾಮಿಗಳು ಮಾಜಿ ಸಚಿವ ರುದ್ರಪ್ಪ ಲಮಾಣಿ, ವಿಎಸ್.ಹಿರೇಮಠ, ಜಗದೀಶಯ್ಯ ಹಿರೇಮಠ, ಗುಡ್ಡಪ್ಪ ನೆಲೋಗಲ್, ನಾಗಪ್ಪ ಬಣಕಾರ, ಹೇಮಪ್ಪ ಹೊಳಲು, ಸತೀಶ ಚೊಕ್ಕನಗೌಡ್ರ, ಗುಡ್ಡಪ್ಪ ತಳವಾರ, ಗುಡ್ಡಪ್ಪ ಪೂಜಾರ, ವಿಜಯಕುಮಾರ ಹೊಳಲು, ದ್ಯಾಮಪ್ಪ ಹೊನ್ನಚಿಕ್ಕಣ್ಣನವರ, ನಾಗರಾಜ ಹೆಗ್ಗಣ್ಣನವರ, ಕುಮಾರ ಹೊಳಲು, ದಯಾನಂದ ಕಾಕೋಳ, ಗುಡ್ಡಪ್ಪ ಮೇಡ್ಲೇರಿ, ಹೇಮಪ್ಪ ಬೆಣ್ಣಿ, ಶಂಬು ಯಲಿಗಾರ, ಚನ್ನಬಸಪ್ಪ ಎಳೆಹೊಳಿ, ಸತಿಶ ಬಣಕಾರ, ನಾಗರಾಜ ದಾನಮ್ಮನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಯಲ್ಲಾಪುರ ಗ್ರಾಮದಲ್ಲಿ ನಡೆದ ಧಾರ್ಮಿಕ  ಸಭೆಯಲ್ಲಿ ಕಾಶೀಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.