ಕೊಪ್ಪಳ 30: ಜಿಲ್ಲಾ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಸದನದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ರಾಘವೇಂದ್ರ ನರಗುಂದ, ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ ಗುಡಿ, ಕಾರ್ಯದರ್ಶಿಯಾಗಿ ಎಸ್.ಬಿ.ದೇಶಪಾಂಡೆ, ಸಹಕಾರ್ಯದರ್ಶಿಯಾಗಿ ರಂಗನಾಥ ಶಾಸ್ತ್ರೀ, ಖಜಾಂಚಿಯಾಗಿ ಮಹೇಶ ಗುಡಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳ ಆಯ್ಕೆಗೆ ಕೊಪ್ಪಳ ನಗರದ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಸದನದಲ್ಲಿ ಸಭೆ ಜರುಗಿತು.ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಎಮ್.ಎಲ್.ಜೋಷಿ, ಗುರುದತ್ತ ಸಾನಬಾಳ, ವೇಣುಗೋಪಾಲ ಜಹಗೀರದಾರ, ಪ್ರಾಣೇಶ ಮಾದಿನೂರ, ವಿಜಯಕುಮಾರ ಪದಕಿ, ಮಧುಸೂದನ ಪೋತೆದಾರ್, ಇತರರು ಇದ್ದರು.