ಕೃಷಿ ಇಲಾಖೆಯ ನೂತನ ಕಟ್ಟಡ ಉದ್ಘಾಟನೆ ಉಭಯ ಸರಕಾರಗಳು ಸಂಕಷ್ಠದಲ್ಲಿರುವ ರೈತರ ನೆರವಿಗೆ ಬರಬೇಕಿದೆ : ಶಾಸಕ ಯಾದವಾಡ

ಲೋಕದರ್ಶನ ವರದಿ

ರಾಮದುರ್ಗ,24: ದೇಶದ ಬೆನ್ನೆಲುಬಾದ ರೈತರು ಇಂದು ಸಕಾಲಕ್ಕೆ ಮಳೆಯಾಗದೆ ಸಂಕಷ್ಠದ ಸುಳಿಗೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಉಭಯ ಸರಕಾರಗಳು ಕ್ರಮ ಕೈಗೊಳ್ಳಬೇಕಿದೆ. ಸದನದಲ್ಲಿ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಸಮೀಪ ಎಪಿಎಂಸಿ ಆವರಣದ ಹಿಂಬದಿಯಲ್ಲಿ ಕೃಷಿ ಇಲಾಖೆಗೆ ನಿಮರ್ಿಸಿದ ನೂತನ ಕೃಷಿ ನಿದರ್ೇಶಕರ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೂತನವಾಗಿ ನಿಮರ್ಿಸಿದ ಕಟ್ಟಡ ಸದ್ಭಳಕೆಯಾಗಬೇಕಾದಲ್ಲಿ ರೈತರಿಗೆ ಮಾರ್ಗದಶರ್ಿಯಾಗಿ ಸರಕಾರದ ಸೌಲಭ್ಯಗಳನ್ನು ಕೆಳಮಟ್ಟದ ರೈತರಿಗೆ ತಲುಪಿಸುವ ಕಾರ್ಯಗಳು ನಡೆದು ತಾಲೂಕಿನ ರೈತರಿಗೆ ಕಟ್ಟಡ ವರದಾನವಾಗಿ ಪರಿಣಮಿಸಲು ಇಲಾಖೆಯ ಅಧಿಕಾರಿಗಳು ಸೌಜನ್ಯದಿಂದ ವತರ್ಿಸಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡು ರೈತ ಸಮುದಾಯದ ಉದ್ಧಾರಕ್ಕೆ  ಮುಂದಾಗಬೇಕೆಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ರೈತರ ಸಲಹಾ ಸಮಿತಿಯ ನಿದರ್ೇಶಕರಾಗಿ ಆಯ್ಕೆಯಾದ ಕೃಷಿಕ ಸಮಾಜದ ಅಧ್ಯಕ್ಷ ವೈ. ಎಚ್. ಪಾಟೀಲ ಅವರನ್ನು ಇಲಾಖೆ ಹಾಗೂ ರೈತರ ಪರವಾಗಿ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿ ವೈ. ಎಚ್. ಪಾಟೀಲ, ಜಗತ್ತಿಗೆ ಸೂರ್ಯ ಎಷ್ಟು ಅವಶ್ಯಕವೋ, ರೈತರು ಅಷ್ಟೇ ಅವಶ್ಯಕ. ಏನೇ ವಸ್ತುಗಳನ್ನು ಕೊಂಡರೂ ಅವುಗಳಿಗೆ ಎಂ.ಆರ್.ಪಿ ಬೆಲೆ ನಿಗಧಿಪಡಿಸಲಾಗಿರುತ್ತದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ ಅವರು, ಉಭಯ ಸರಕಾರಗಳು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಬೇಕು. ಸಾವಯವ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಿ, ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಜಿ.ಪಂ ಸದಸ್ಯರಾದ ಜಹೂರ ಹಾಜಿ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ ಮಾತನಾಡಿ, ಇಲಾಖೆಯ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ರೈತರನ್ನು ತಲುಪುವಂತಾಗಲು ಅಧಿಕಾರಿಗಳು ಶ್ರಮಿಸಬೇಕೆಂದು ತಿಳಿಸಿದರು.

ನಿವೃತ್ತ ಸಹಾಯಕ ಕೃಷಿ ನಿದರ್ೇಶಕ ಆರ್.ಡಿ. ಕಟಗಲ್, ರೈತ ಮುಖಂಡ ಶಿವಾನಂದ ದೊಡವಾಡ, ಬಿ.ಎಸ್.ನಾಯಕ, ಸಹಾಯಕ ಕೃಷಿ ನಿದರ್ೇಶಕ ಎಸ್.ಎಫ್. ಬೆಳವಟಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಶಿವಕ್ಕ ಬೆಳವಡಿ,  ಕೃಷ್ಣಪ್ಪ ಲಮಾಣಿ, ಬೆಳಗಾವಿಯ ಉಪ ಕೃಷಿ ನಿದರ್ೇಶಕ ಸಲೀಮ್ ಸಂಗತ್ರಾಸ್, ತಾ.ಪಂ ಇಓ ಅಶೋಕ ಪಾಟೀಲ, ರೈತ ಸಂಘದ ಜಿಲ್ಲಾ ಸಂಚಾಲಕ ಮಲ್ಲಿಕಾಜರ್ುನ, ತಾ.ಪಂ ಸದಸ್ಯರು, ಕೃಷಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಮದುರ್ಗ ಸೇರಿದಂತೆ ಇತರರಿದ್ದರು. ಆರ್. ಪಿ. ಅರಿಕೇರಿ ಕಾರ್ಯಕ್ರಮ ನಿರೂಪಿಸಿ, 

ವಂದಿಸಿದರು.