ಪ್ರತಿಭಾವಂತರನ್ನು ಗುರುತಿಸುವುದು ಅವಶ್ಯ: ರೇವಡಿ

ಲೋಕದರ್ಶನ ವರದಿ

ಗದಗ  11: ನಮ್ಮಲ್ಲಿ ಪ್ರತಿಭಾವಂತರಿಗೇನು ಕೊರತೆಯಿಲ್ಲ ಅವರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಾಲೂಕ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಈಶಪ್ಪ ರೇವಡಿ ಹೇಳಿದರು. 

ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರಾಜ್ಯಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಉಪನ್ಯಾಸಕ ಬಸುರಾಜ್ ಶೀಲವಂತರ್ ವೈಯಕ್ತಿಕವಾಗಿ ಕೊಡಮಾಡಿದ ಪ್ರಥಮ, ದ್ವಿತೀಯ, ತೃತೀಯ, ಹಣದ ರೂಪದಲ್ಲಿ ಪುಸ್ತಕ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. 

ರಾಜ್ಯಶಾಸ್ತ್ರದ ಉಪನ್ಯಾಸಕ ಬಸವರಾಜ ಶೀಲವಂತರ್ ಮಾತನಾಡಿ ಪ್ರತಿಭೆ ಇದ್ದವರು ಪರಿಶ್ರಮ ಪಡೆದಿದ್ದರೆ ಪ್ರತಿಭೆ ಗುರುತಿಸಲ್ಪಡುವುದಿಲ್ಲ ಸತತವಾಗಿ ಶ್ರಮಿಸುವವನೇ ಸ್ವತ್ತಾಗಿ ಪ್ರತಿಭೆ ಒಡಮೂಡುತ್ತದೆ ನನ್ನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಪ್ರತಿವರ್ಷವೂ ಗುರುತಿಸುತ್ತಲೇ ಬಂದಿದ್ದೇನೆ ಈ ವರ್ಷವೂ ನನ್ನ ವಿಭಾಗದ ರಾಜ್ಯಶಾಸ್ತ್ರ ವಿಷಯ ಜಿಲ್ಲಾ ಸಂಘಟಕರಾದ ಜಿ ಎಮ್ ಹಕಾರಿ ಅವರ ಸಮ್ಮುಖದಲ್ಲಿ ವಿದ್ಯಾಥರ್ಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನೆರವೇರಿಸುವುದು ನನಗೆ ಸಂತಸವನ್ನು ತಂದಿದೆ ಎಂದರು. 

ಕಾರ್ಯಕ್ರಮದಲ್ಲಿ ಆಂಗ್ಲ ಉಪನ್ಯಾಸಕ ರವೀಂದ್ರ ಪತ್ತಾರ್ ನ್ಯಾಯವಾದಿ ಎಮ್ ಬಿ ತೋರಗಲ್,  ಎಚ್ ಎನ್ ಗೌಡರ್ ಎಚ್ ಕೆ ನೆರೆಗಲ್, ನಾಗರಾಜ್, ಸೇರಿದಂತೆ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.