ಗದಗ 11: ಪ್ರತಿಯೊಬ್ಬರಿಗೂ ದಿನನಿತ್ಯದ ಕಾನೂನುಗಳ ತಿಳುವಳಿಕೆ ನೀಡುವುದು, ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಹೆಣ್ಣು ಮಕ್ಕಳ ಮತ್ತು ಮಕ್ಕಳ ರಕéಣೆ ಮತ್ತು ಪೋಷಣೆಗಾಗಿ ಪೋಕ್ಸೊ ಕಾಯೆ ಮತ್ತು ಬಾಲ ನ್ಯಾಯ ಕಾಯ್ದೆ ಜಾರಿಗೆ ಬಂದಿದ್ಧು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಸ್. ಸಂಗ್ರೇಶಿ ಅವರು ನುಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಬಸವೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ ಗದಗ ಇವರ ಸಂಯುಕ್ತಾಶ್ರಯದಲ್ಲಿ ಕಳಸಾಪೂರ ರಸ್ತೆಯ ಬಸವೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಿದ್ದ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆಯ ಕಾನೂನು ಕಾರ್ಯಕ್ರಮ ಉದ್ಘಾಟಿಸಿ ಅವರು ಡಿದರು.
ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರೂಪಾ ಎಸ್. ನಾಯ್ಕ ಅವರು ಮಾತನಾಡಿ ಒಳ್ಳೆಯ ಸುಸ್ಥಿರ ಸಮಾಜ ನಿರ್ಮಾಣ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಕೇವಲ ಹಕ್ಕು ಮತ್ತು ಕರ್ತವ್ಯ ತಿಳಿದುಕೊಂಡರೆ ಸಾಲದು ಅದರಂತೆ ನಡೆದಾಗ ಮಾತ್ರ ನಾವು ಸಮಾಜದಲ್ಲಿ ಒಳ್ಳೆಯ ವ್ಯಕ್ತ್ತಿಗಳಾಗಿ ಬಾಳಿ ಸ್ವಾಸ್ಥ್ಯ ಸಮಾಜ ನಿಮರ್ಾಣ ಮಾಡಲು ಸಾಧ್ಯ ಎಂದು ನುಡಿದರು.
ಹಿರಿಯ ನ್ಯಾಯವಾದಿ ಎಸ್. ಕೆ. ಪಾಟೀಲ ಅವರು ಮಾತನಾಡಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುವುದನ್ನು ತಪ್ಪಿಸಲು ಕಠಿಣ ಶಿಕ್ಷೆ ಒಳಗೊಂಡ ಪೋಕ್ಸೊ ಕಾಯ್ದೆ ಬಗ್ಗೆ ತಾವೆಲ್ಲರೂ ತಿಳಿದುಕೊಂಡು ಇತರರಿಗೂ ಅರಿವು, ಜಾಗೃತಿ ಮೂಡಿಸಬೇಕು. ಪೊಲೀಸ್ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿಶೇಷ ಆ್ಯಪ್ ತಯಾರಿಸಿದ್ದು ಸ್ಮಾರ್ಟ ಪೋನಿನಲ್ಲಿ ತಾವು ಅದನ್ನು ಅಳವಡಿಸಿಕೊಂಡು ಇತರರಿಗೆ ಜಾಗೃತಿ ಮೂಡಿಸಿ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ. ಎಂ. ನಾಯ್ಕರ ಅವರು ಬಾಲ ನ್ಯಾಯ (ರಕ್ಷಣೆ ಮತ್ತು ಘೋಷಣೆ) ಕಾಯ್ದೆ 2015, ಬಾಲ್ಯ ವಿವಾಹ ನಿಷೇಧ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿಗಳಾದ ಪಿ.ಎಂ. ವಾಲಿ ಅವರು ಪೋಕ್ಸೊ ಕಾಯ್ಧೆ ಕುರಿತು ಉಪನ್ಯಾಸ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ.ಹುಬ್ಬಳ್ಳಿ ಮಾತನಾಡಿ ವಿದ್ಯಾಥರ್ಿಗಳು ಒಳ್ಳೆಯವರ ಗೆಳತನ ಮಾಡಬೇಕು ಚನ್ನಾಗಿ ಓದಿ ಸಂಸ್ದೆಯ ಹಾಗೂ ಪಾಲಕರಿಗೆ ಕೀತರ್ಿ ತರಬೇಕು ಎಂದು ನುಡಿದರು.
ವೇದಿಕೆ ಮೇಲೆ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧಿಶರಾದ ಪಿ.ಜಿ. ಚಲುವಮೂತರ್ಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಹಿರಿಯ ವಕೀಲರಾದ ಎಸ್. ಸಿ. ಹೊಸಮನಿ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಾಯ್. ಡಿ. ತಳವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಡಾ. ಹೆಚ್.ಹೆಚ್. ಕುಕನೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಕುರಹಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಶಿವರಾಜ ಪ್ರಾರ್ಥಿಸಿದರು, ಪ್ರಾಚಾರ್ಯರ ಡಿ.ಬಿ. ಪಾಟೀಲ ಅವರು ವಂದಿಸಿದರು. ಪುಟ್ಟರಾಣಿ ಶಿರೋಳ ಕಾರ್ಯಕ್ರಮ ನಿರೂಪಿಸಿದರು.