ಗುರುಶಿಷ್ಯ ಸಂಬಂಧ ಉಳಿಸಿಕೊಳ್ಳುವ ಅಗತ್ಯ ಇಂದಿನ ಸಮಾಜದ ಜವಾಬ್ದಾರಿ : ಸಂಶೋಧಕ ಬಿ.ರಾಜಶೇಖರ​ಪ್ಪ

The need to maintain teacher-disciple relationship is the responsibility of today's society: Researc

ಬೆಳಗಾವಿ -23 . ಗುರು-ಶಿಷ್ಯ ಸಂಬಂಧವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯ ಪ್ರತೀಕವಾಗಿದೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಬ್ಬರ ಮೇಲೂ ಇರುತ್ತದೆ ಎಂದು ಚಿತ್ರದುರ್ಗದ ಖ್ಯಾತ ಸಂಶೋಧಕ ಹಾಗೂ ಇತಿಹಾಸಕಾರ ಡಾ. ಬಿ. ರಾಜಶೇಖರ​‍್ಪ ಅವರು ಇಂದು ಅಭಿಪ್ರಾಯ ಪಟ್ಟರು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಎ.ಎಂ. ಜಯಶ್ರೀ ಅವರ ಎರಡು ಕೃತಿಗಳ ಲೋಕಾರೆ​‍್ಣ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತ ಅವರು ಮಾತನಾಡಿದರು. 

ಎ.ಎಂ. ಜಯಶ್ರೀ ಅವರು ಜಿನದತ್ರ ದೇಸಾಯಿಯವರ ಜೀವನ ಚರಿತ್ರೆಯನ್ನು ಸುಂದರವಾಗಿ ಕಟ್ಟಿಕೊಟ್ಟು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ಜೀವನದ ಕಷ್ಟ ನಷ್ಟಗಳನ್ನು ಏರಿಳಿತಗಳನ್ನು ಮನೋಜ್ಞವಾಗಿ ಹಣ್ಣೆಲೆಯ ಹಸಿರು ನೆನಪು ಕೃತಿ ಕಟ್ಟಿ ಕೊಡುತ್ತದೆ ಎಂದು ಅವರು ಹೇಳಿದರು. ಅವರ ಕೊಳಲಾಗುವ ಆಸೆ ಕವನ ಸಂಕಲವು ಅನೇಕ ಸುಂದರವಾದ ಕವಿತೆಗಳನ್ನು ಹೊಂದಿದ್ದು ಇದರಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿಬಂದಿದೆ ಎಂದು ಉದಾಹರಣೆ ಸಹಿತವಾಗಿ ವಿವರಿಸಿದರು.  

ಕೃತಿಗಳನ್ನು ಲೋಕಾರೆ​‍್ಣ ಮಾಡಿದ ಜಿನದತ್ತ ದೇಸಾಯಿ ಅವರು ತಮ್ಮ ಜೀವನ ಚರಿತ್ರೆ ಪ್ರಕಟಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ನುಡಿದರು. 92ರ ಇಳಿ ವಯಸಿನಲ್ಲೂ ಅವರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.  

ಡಾ. ರಾಮಕೃಷ್ಣ ಮರಾಠೆ ಅವರು ಜಯಶ್ರೀ ಅವರ ಹಣ್ಣೆಲೆಯ ಹಸಿರು ನೆನಪು ಕೃತಿಯ ಕುರಿತು ಮನೋಜ್ಞವಾಗಿ ಪರಿಚಯ ಮಾಡಿದರು. ಡಾ. ಪಿ. ಜಿ ಕೆಂಪಣ್ಣವರ ಅವರು ಕೊಳಲಾಗುವ ಆಸೆ ಕೃತಿ ಕುರಿತು ವಿವರಣಾತ್ಮಕವಾಗಿ ಪರಿಚಯಿಸಿ ಮಾತನಾಡಿದರು.  

ಡಾ. ಬಸವರಾಜ್ ಜಗಜಂತಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಯಶ್ರೀ ಅವರಂಥ ಲೇಖಕಿ ಬೆಳಗಾವಿಯಲ್ಲಿ ನೆಲೆಸಬೇಕು ಎಂದು ಅವರು ಹಾರೈಸಿದರು. ಎರಡು ಕೃತಿಗಳ ಲೇಖಕಿ ಎ.ಎಂ.ಜಯಶ್ರೀ ಅವರು ಮಾತನಾಡಿದರು. ರಂಗ ಸೃಷ್ಟಿಯ ಅಧ್ಯಕ್ಷ  ರಮೇಶ್ ಜಂಗಲ್ ಮತ್ತು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶೀರೀಷ ಜೋಶಿ ಸ್ವಾಗತಿಸಿದರು. ಶಾಂತಾ ಆಚಾರ್ಯ ವಂದಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿ ಜಯಶ್ರೀ ಅವರ ಎರಡು ಕವಿತೆಗಳ ಗಾಯನ ಪ್ರಸ್ತುತಪಡಿಸಿದರು. ಪ್ರಾಚಾರ್ಯ ಬಿಎಸ್ ಗವಿಮಠ, ಡಾ. ದಯಾನಂದ ನೂಲಿ, ಆರ್ ಬಿ ಕಟ್ಟಿ, ಶಿ.ಗು. ಕುಸಗಲ್, ಸಾ.ರಾ.ಸುಳಕೂಡೆ, ಸುನಂದಾ ಎಮ್ಮಿ, ಕೆ.ಪಿ.ರವೀಂದ್ರ ಕುಮಾರ್, ಎಂ.ಎಂ. ಜಯಶ್ರೀ ಅವರ ಕುಟುಂಬದವರು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು