ವಿಜಯಪುರ, 11 : ವಿದ್ಯಾರ್ಥಿಗಳಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ವಿಜ್ಞಾನ ಶಿಕ್ಷಕರ ಪಾತ್ರ ಅತ್ಯಂತ ಗುರುತರವಾಗಿದೆ ಎಂದು ಮಸೂತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ಬೀಳಗಿ ಹೇಳಿದರು.
ಕೊಲ್ಹಾರ ತಾಲೂಕಿನ ಮಸೂತಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗಾಲಯ ಕೊಠಡಿ ಉದ್ಘಾಟನೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾಥರ್ಿಗಳಲ್ಲಿ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಅವರನ್ನು ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಪ್ರೇರೆಪಿಸುವ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎ.ಪಿ.ಎಮ್.ಸಿ. ನಿದರ್ೇಶಕ ಸಿ.ಪಿ.ಪಾಟೀಲ ಮಾತನಾಡಿ, ವಿದ್ಯಾಥರ್ಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಬಸವನ ಬಾಗೇವಾಡಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಯು.ರಾಠೋಡ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಸೂತಿ ಸಕರ್ಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಿಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಮೋಹನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಭಜಂತ್ರಿ, ಸದಸ್ಯರಾದ ಶಿವಪ್ಪಣ್ಣ ಹಂಗರಗಿ, ಎಸ್.ಎಸ್. ಗೌರಿಮಠ, ವ್ಯವಸಾಯ ಸೇವಾ ಸಹಕಾರಿ ಸಂಘದ ನಿದರ್ೇಶಕರಾದ ಎ.ಎಮ್. ಹಳ್ಳೂರ, ಎಚ್.ಬಿ. ಬಾರಿಕಾಯಿ, ಎಸ್.ಎಸ್. ಕುಂಬಾರ, ಎಸ್.ಪಿ.ಮಡಿಕೇಶ್ವರ, ಸಕರ್ಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಉಮೇಶ ಮಣ್ಣೂರ, ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳಾದ ಇಂದುದರ ಹೊಸಮಠ, ಕಾರ್ಯದಶರ್ಿ ಎಮ್.ಎಸ್. ಹಿರೇಮಠ, ಎಸ್.ಎಸ್. ಪಡಸಲಗಿ, ಶಿಕ್ಷಣ ಸಂಯೋಜಕರಾದ ಜಿ.ಎಸ್. ಗಣಿ, ಬಿ.ಆರ್.ಪಿ. ಪವಾರ ಮುಂತಾದವರು ಉಪಸ್ಥಿತರಿದ್ದರು.
ಮಸೂತಿ ಗ್ರಾಮ ಪಂಚಾಯ್ತಿ ವತಿಯಿಂದ ಸಕರ್ಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಗೆ ವಿಜ್ಞಾನ ಉಪಕರಣಗಳಿಗಾಗಿ 80 ಸಾವಿರ ರೂಪಾಯಿ ಅನುದಾನ ನೀಡಲಾಯಿತು. ಶಿವಪ್ಪ ಹಂಗರಗಿ, ಪಿ.ಡಿ.ಓ. ಇಂದುದರ ಹೊಸಮಠ, ಸೊಸೈಟಿ ನಿದರ್ೇಶಕರಾದ ಎ.ಎಮ್. ಹಳ್ಳೂರ, ಎಚ್.ಬಿ. ಬಾರಿಕಾಯಿ, ಎಸ್.ಪಿ. ಮಡಿಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸುಮಾ ಬಾಗೋಜಿಕೊಪ್ಪ ಸ್ವಾಗತಿಸಿದರು. ದಾನು ನಾಯಕ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ಕುಲಕಣರ್ಿ ವಂದಿಸಿದರು.