ಲೋಕದರ್ಶನವರದಿ
ರಾಣೇಬೆನ್ನೂರು11: ಜಂತುಹುಳು ನಿವಾರಣಾ ಔಷಧಿ ಸೇವಿಸುವುದರಿಂದ ಆರೋಗ್ಯ ಸುಧಾರಣೆ, ಅಪೌಷ್ಟಿಕತೆ ನಿವಾರಣೆ ಹಾಗೂ ಬೌಧ್ಧಿಕ ಬೆಳವಣಿಗೆಯಾಗಲಿದೆ. ಬರಿ ಗಣ್ಣಿಗೆ ಕಾಣಿಸದ ಜಂತುಹುಳುಗಳ ಮಕ್ಕಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕಿರಿಯ ಆರೋಗ್ಯ ಸಹಾಯಕ ರಾಘವೇಂದ್ರ ಪಿ ಹೇಳಿದರು.
ತಾಲೂಕಿನ ಮಾಕನೂರು ಗ್ರಾಮದ ಮುರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1 ರಿಂದ 19 ವರ್ಷದ ಒಳಗಿನ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಎಲ್ಲಾ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ದಾಖಲಾಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಫೆ.17 ರಂದು ನೀಡಲಾಗುತ್ತಿದೆ ಎಂದರು. ಪ್ರಾಂಶುಪಾಲ ವಾಗೀಶ ಉದಾಸಿಮಠ, ವೀರಣ್ಣ ನೂರಂದೂರು, ಎಂ.ಐ. ಕೊಠಡೂರು, ತನ್ಮಯ, ಲಲಿತಶ್ರೀ ಜಿ.ಬಿ, ಪ್ರೇಮಾ ಆರ್.ಬಿ, ಪ್ರತಿಭಾ ಹಡಗಲಿ, ಸಂಗೀತಾ ದೀಕ್ಷಿತ್, ಬಸವರಾಜ್ ಲಮಾಣಿ, ರೇಣುಕಾ ಆರೇರ, ಮಂಜುನಾಥ ಸೇರಿದಂತೆ ಮತ್ತಿತರರು ಇದ್ದರು.