ಮನಸ್ಸಿನ ನೆಮ್ಮದಿಗೆ ಭಾವಗೀತೆ ಅವಶ್ಯ: .ಪಾಟೀಲ

ಮಹಾಲಿಂಗಪುರ22: ಭಾರತದಲ್ಲಿ ಪ್ರಸ್ತುತ ಪೌರತ್ವದ ತಿದ್ದುಪಡಿ ಕುರಿತು ಸವಿಸ್ತಾರವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಎಲ್.ಡಿ.ಇಯ ಕಾನೂನು ಕಾಲೇಜು ಪ್ರಾಚಾರ್ಯರಾದ ರಘುವೀರ ಕುಲಕರ್ಣಿ  ತಿಳಿಸಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ವಿಭಾಗದ ವತಿಯಿಂದ ರಾಜ್ಯಮಟ್ಟದ ಅಂತರ್ ಮಹಾವಿದ್ಯಾಲಯಗಳ ಭಾವಗೀತೆ ಹಾಗೂ ಚರ್ಚಾ ಸ್ಪರ್ಧೆ ಗಳ ಉದ್ಘಾಟನಾ ಸಮಾರಂಭವನ್ನು ಉದ್ಧೇಶಿಸಿ  ಮಾತನಾಡಿದರು.

ಅಧ್ಯಕ್ಷತೆ ವಹಿಸಿದ  ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಂ.ಪಾಟೀಲ ಮಾತನಾಡಿ ಭಾವಗೀತೆಯ ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರು ಕವನ. ಅದು ನಮ್ಮನ್ನು ನಮ್ಮ ಮನಸ್ಸನ್ನು ಖುಷಿಯಿಂದ ಇಡಲು ಕಾರಣವಾಗಿದೆ. ಮನಸ್ಸಿನ ನೆಮ್ಮದಿಗೆ ಭಾವಗೀತೆ ಅವಶ್ಯ ಎಂದರು. 

ನಿರ್ಣಾಯಕರಾಗಿ ಡಾ. ಅಶೋಕ ನರೋಡೆ, ಡಾ. ಎಸ್.ಪಿ ಬಿರಾದರ, ಟಿ.ಡಿ ಡಂಗಿ, ಚಂದ್ರಕಲಾ ಗೆನ್ನೂರ, ಸ್ನೇಹಾ ಮುರಾರಿ, ಶ್ರೀಯಾ ದಿವಾಂಚಿ ಆಗಮಿಸಿದ್ದರು. 

ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಗೀತಾ ಕೋಲಕಾರ., ದ್ವಿತೀಯ ಶ್ರೇಯಾ ಮಠಪತಿ, ತೃತೀಯ ರೂಪಾ ಖಂದಗಾಂವಿ,  ಚರ್ಚಾ ಸ್ಪರ್ಧೆ ಪ್ರಥಮ ಗ್ಲೋರಿಯಾ ಡಿಸೋಜಾ, ದ್ವಿತೀಯ ಶ್ರೀಶೈಲ್ ಹೂಗಾರ, ತೃತೀಯ ಅನುರಾಧಾ ಖಾನಗೌಡಾ. 

ಈ ಸಂದರ್ಭದಲ್ಲಿ ಕೆ.ಎಲ್.ಇ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎ. ಬಂತಿ, ರಾಹುಲ್ ಅವರಾದಿ, ಸಂತೋಷ ಹುದ್ದಾರ, ಕಾರ್ಯಕ್ರಮದ ಸಂಘಟಕರಾದ ಡಾ. ಆಶಾರಾಣಿ ಚಿನಗುಂಡಿ, ಶಂಕರ ಕೋಳಿ, ಸಂಧ್ಯಾ ಕೊಡಗನೂರ. ವಿದ್ಯಾಥರ್ಿ ಕಾರ್ಯದಶರ್ಿಗಳಾದ ಅಕ್ಷತಾ ಕಾಮಗೊಂಡ, ಭಾರತಿ ಮಠಪತಿ ಹಲವರು ಇದ್ದರು.